ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ರಾಮಾಚಾರಿ ಧಾರವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಇದು ಕೂಡ ಒಂದು, ಆದರೆ ಕಳೆದ ಕೆಲವು ದಿನಗಳಿಂದ ಟೈಮಿಂಗ್ ಬದಲಾದ ನಂತರ ಧಾರಾವಾಹಿಯ ಪಾಪ್ಯುಲಾರಿಟಿ ಕಡಿಮೆ ಆಗಿದೆ ಎಂದು ಹೇಳಿದರೆ ತಪ್ಪಲ್ಲ. ಆದರೆ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಾರು ಅಂದ್ರೆ ಎಲ್ಲರಿಗೂ ಫೇವರೆಟ್. ಚಾರು ಪಾತ್ರದಲ್ಲಿ ನಟಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ. ಒಳ್ಳೆಯ ನಟನೆಯ ಕೌಶಲ್ಯತೆ ಇಂದ ಇವರನ್ನು ಕಂಡರೆ ಎಲ್ಲರಿಗು ಇಷ್ಟ. ಮೌನ ಗುಡ್ಡೆಮನೆ ಅವರು ಎಲ್ಲರ ಫೇವರೆಟ್. ಇದೀಗ ಇವರು ಇದೇ ಮೊದಲ ಬಾರಿಗೆ ತಮ್ಮ ತಂಗಿಯ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಎಷ್ಟು ಸುಂದರವಾಗಿದ್ದಾರೆ ಗೊತ್ತಾ ಮೌನ ಗುಡ್ಡೆಮನೆ ಅವರ ಸಹೋದರಿ?

ಮೌನ ಗುಡ್ಡೆಮನೆ ಅವರು ಮೊದಲಿಗೆ ಒಂದೆರಡು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ನಟಿಸಿದ್ದರು. ಇದೆಲ್ಲವೂ ತಕ್ಕಮಟ್ಟಿಗೆ ಜನಪ್ರಿಯತೆ ನೀಡಿತ್ತು. ನಂತರ ಇವರಿಗೆ ರಾಮಾಚಾರಿ ಧಾರಾವಾಹಿಯ ಅವಕಾಶ ಸಿಕ್ಕಿತು. ಧಾರಾವಾಹಿ ಶುರುವಾದ ನಂತರ ಇವರಿಗೆ ಇದ್ದ ಜನಪ್ರಿಯತೆ ಹೆಚ್ಚಾಗಿತ್ತು. ಆರಂಭದಲ್ಲಿ ಚಾರು ಘಾಟಿ, ಸ್ಪೀಡ್, ಅಹಂಕಾರಿ ಹುಡುಗಿ ಎನ್ನುವ ಹಾಗಿದ್ದಳು. ನಂತರ ರಾಮಾಚಾರಿಯ ಮೇಲೆ ಪ್ರೀತಿ ಶುರುವಾದ ಮೇಲೆ ಚಾರು ಪಾತ್ರ ಪೂರ್ತಿಯಾಗಿ ಬದಲಾಯಿತು. ಲವ್ಲಿ ಚಾರು ಎಲ್ಲರಿಗೂ ಇಷ್ಟ ಆಗಿಬಿಟ್ಟಳು. ಈಗಂತೂ ಚಾರು ಪಾತ್ರ ಎಲ್ಲರ ಫೇವರೆಟ್. ಮೌನ ಗುಡ್ಡೆಮನೆ ಅವರನ್ನು ಸಾಕಷ್ಟು ಜನರು ಚಾರು ಚಾರು ಎಂದೇ ಕರೆಯುತ್ತದೆ. ಈ ರೀತಿ ಇದೆ ಮೌನ ಅವರಿಗೆ ಇರುವ ಜನಪ್ರಿಯತೆ. ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ.
ಮೌನ ಗುಡ್ಡೆಮನೆ ಅವರು ನಿರ್ವಹಿಸುತ್ತಿರುವ ಚಾರು ಪಾತ್ರ ಈಗ ಒಂದು ರೀತಿ ಐಡಿಯಲ್ ಸೊಸೆ ಮತ್ತು ಐಡಿಯಲ್ ಹೆಂಡತಿ ಎಂದು ಹೇಳಿದರೆ ತಪ್ಪಲ್ಲ. ಚಾರು ಇದ್ದಾಳೆ ಅಂದ್ರೆ ಕುಟುಂಬ ಸೇಫ್ ಅನ್ನೋ ಹಾಗಿದೆ ಪಾತ್ರ. ರಸ್ತೆಯಲ್ಲಿ ಇವರು ಹೋಗೋವಾಗ ಎಲ್ಲರೂ ಮೌನ ಅನ್ನೋದಕ್ಕಿಂತ ಚಾರು ಅಂತ ಕರೆದು ಮಾತನಾಡಿಸಿ ಹೋಗ್ತಾರೆ. ಆ ರೀತಿ ಇದೆ ಚಾರು ಪಾತ್ರಕ್ಕೆ ಇರುವ ಜನಪ್ರಿಯತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರಿಗೂ ಚಾರು ಅಂದ್ರೇ ಫೇವರೆಟ್. ಚಾರು ಥರ ಗರ್ಲ್ ಫ್ರೆಂಡ್ ಬೇಕು, ಹೆಂಡ್ತಿ ಬೇಕು ಅನ್ನೋದು ಹುಡುಗರ ಆಸೆ, ಚಾರು ಥರ ಸೊಸೆ ಬೇಕು ಅನ್ನೋದು ದೊಡ್ಡವರ ಬಯಕೆ. ಚಾರು ಅಂಥ ಹುಡುಗಿ ಇದ್ರೆ ಆ ಮನೆ ತುಂಬಾ ಚೆನ್ನಾಗಿರುತ್ತೆ ಅನ್ನೋದರಲ್ಲಿ ಡೌಟೆ ಇಲ್ಲ. ಅಷ್ಟು ಚೆನ್ನಾಗಿ ಈ ಪಾತ್ರ ಜನರಿಗೆ ರೀಚ್ ಆಗಿದೆ.

ನಟಿ ಮೌನ ಗುಡ್ಡೆಮನೆ ಅವರು ನಾಯಕಿಯಾಗಿ ನಟಿಸಿದ ಮೊದಲ ಧಾರಾವಾಹಿಯಲ್ಲೇ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಪಡೆದು, ಯಶಸ್ವಿ ಆಗಿದ್ದಾರೆ. ಮೌನ ಅವರಿಗೆ ಈ ಧಾರಾವಾಹಿ ದೊಡ್ಡ ಮಟ್ಟದಲ್ಲೇ ಹೆಸರನ್ನು ತಂದುಕೊಟ್ಟಿದೆ. ಈ ನಟಿ ಮೂಲತಃ ದಕ್ಷಿಣ ಕನ್ನಡದ ಕಡೆಯವರು, ತುಳು ಮತ್ತು ಕನ್ನಡ ಎರಡು ಕೂಡ ಇವರಿಗೆ ಬರುತ್ತದೆ. ಹಾಗಾಗಿ ಮೌನ ಗುಡ್ಡೆಮನೆ ಅವರಿಗೆ ಇರುವ ಜನಪ್ರಿಯತೆ ಹೆಚ್ಚಾಗಿಯೇ ಇದೆ. ಮೌನ ಅವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹೊಸ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳಿಗೆ ಇಷ್ಟ ಆಗುವಂಥ ಕಾಂಟೆಂಟ್ ಗಳನ್ನು ನೀಡುತ್ತಾರೆ. ಮೌನ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಗಟ್ಟಲೇ ಫಾಲೋವರ್ಸ್ ಸಹ ಇದ್ದಾರೆ.
ಸಾಮಾನ್ಯವಾಗಿ ತಮ್ಮ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುವ ಮೌನ ಗುಡ್ಡೆಮನೆ ಅವರು, ಇದೀಗ ಮೊದಲ ಬಾರಿ ತಮ್ಮ ಸಹೋದರಿ ಜೊತೆಗಿರುವ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಮೌನ ಅವರ ಬಹಳ ಸ್ಪೆಷಲ್ ಆದ ಪೋಸ್ಟ್ ಆಗಿದೆ. ಇವರು ಮೌನ ಅವರ ತಂಗಿ ಮೌಲ್ಯ ಗುಡ್ಡಮನೆ. ಅಕ್ಕ ತಂಗಿ ಇಬ್ಬರೂ ಕೂಡ ನದಿಯ ಹತ್ತಿರ ವಿಶೇಷವಾಗಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ನೋಡಿದ ನೆಟ್ಟಿಗರು ಮೌನ ಅವರ ತಂಗಿ ಕೂಡ ಅವರಷ್ಟೇ ಚೆನ್ನಾಗಿದ್ದಾರೆ. ಮೌಲ್ಯ ಅವರು ಕೂಡ ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಬೇಕು ಎಂದು ಹೇಳುತ್ತಿದ್ದಾರೆ. ಮೌನ ಅವರ ಮಾತಿನಿಂದ ಅಭಿಮಾನಿಗಳಿಗೆ ಕೂಡ ಖುಷಿ ಆಗಿದೆ.
ಮೌನ ಅವರ ತಂಗಿ ಮೌಲ್ಯ ಏನು ಮಾಡುತ್ತಿದ್ದಾರೆ? ಇವರ ಕೆಲಸ ಏನು ಎನ್ನುವ ಮಾಹಿತಿಯನ್ನು ಮೌನ ಅವರು ಎಲ್ಲಿಯೂ ಶೇರ್ ಮಾಡಿಕೊಂಡಿಲ್ಲ. ಅಭಿಮಾನಿಗಳು ಮಾತ್ರ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಇನ್ನು ಮೌನ ಗುಡ್ಡೆಮನೆ ಅವರು ರಾಮಾಚಾರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಮುಂದೆ ಇವರಿಗೆ ಸಿನಿಮಾದಲ್ಲಿ ನಟಿಸುವ ಆಸೆ ಕೂಡ ಇದ್ದು, ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಒಟ್ಟಿನಲ್ಲಿ ಮೌನ ಅವರು ಕಿರುತೆರೆ ಜೊತೆಗೆ ಬೆಳ್ಳಿ ತೆರೆಯಲ್ಲಿ ಕೂಡ ಮಿಂಚುವುದಕ್ಕೆ ಕೂಡ ಸಿದ್ಧವಾಗಿದ್ದು, ಇವರಿಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡುತ್ತಾರೆ. ಕಿರುತೆರೆ ಇಂದ ಅಭಿನಯದಲ್ಲಿ ಆಸಕ್ತಿ ಇರುವ ಸಾಕಷ್ಟು ಜನರಿಗೆ ಪರ್ಫಾರ್ಮ್ ಮಾಡುವುದಕ್ಕೆ ಅವಕಾಶ ಸಿಗುತ್ತಿದೆ.