ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಅವರು ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಕ್ಷಿತಾ ಅವರು ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದವರು, ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿ, ಹೆಸರು ಮಾಡಿದ್ದಾರೆ. ಇವರ ತಮ್ಮ ಸಹ ಚಂದನವನದ ಭರವಸೆಯ ನಟ ಎಂದು ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಕುಟುಂಬದಲ್ಲಿ ಒಂದು ಸಿಹಿ ಸುದ್ದಿ ಕೇಳಿಬಂದಿದ್ದು, ರಾಣಾ ಅವರಿಗೆ ಈಗ ಎಂಗೇಜ್ಮೆಂಟ್ ಆಗಿದ್ದು, ಹುಡುಗಿ ಯಾರು? ಮದುವೆ ಯಾವಾಗ ಗೊತ್ತಾ? ಈ ಸಿಹಿ ಸುದ್ದಿ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..

ರಕ್ಷಿತಾ ಅವರ ತಮ್ಮ ಅವರ ನಿಜವಾದ ಹೆಸರು ಅಭಿಷೇಕ್. ಆದರೆ ಕನ್ನಡ ಚಿತ್ರರಂಗಕ್ಕೆ ಇವರು ಪರಿಚಯ ಆಗಿದ್ದು, ರಾಣಾ ಹೆಸರಿನಲ್ಲಿ. ರಾಣಾ ಅವರು ಮೊದಲ ಸಿನಿಮಾ ಏಕ್ ಲವ್ ಯಾ. ರಕ್ಷಿತಾ ಅವರ ಪತಿ ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶನ ಮಾಡಿತು. ರಾಣಾ ಅವರಿಗೆ ಇದು ಒಳ್ಳೆಯ ಲವ್ ಸ್ಟೋರಿ ಲಾಂಚ್ ಆಗಿತ್ತು. ಸಿನಿಮಾದಲ್ಲಿ ಇವರ ಅಭಿನಯ, ಫೈಟ್, ಡ್ಯಾನ್ಸ್ ಎಲ್ಲವೂ ಸಹ ತುಂಬಾ ಚೆನ್ನಾಗಿತ್ತು. ಜನರಿಗೂ ಸಹ ರಾಣಾ ಅವರು ಭರವಸೆಯ ನಟ ಎಂದು ಅನ್ನಿಸಿತು. ಇನ್ನು ರಾಣಾ ಅವರ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಸಹ ಎದುರು ನೋಡುತ್ತಿದ್ದಾರೆ.
ಇನ್ನು ಈಗ ರಾಣಾ ಅವರಿಗೆ ಈಗ ಮದುವೆ ಗೊತ್ತಾಗಿದೆ. ಇವರಿಗೆ ಬಹಳ ಸಿಂಪಲ್ ಆಗಿ ನಿಶ್ಚಿತಾರ್ಥ ನಡೆದಿದ್ದು, ತಮ್ಮನ ನಿಶ್ಚಿತಾರ್ಥದ ಫೋಟೋ ಒಂದನ್ನು ನಟಿ ರಕ್ಷಿತಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ನೋಡಿದರೆ ಎಂಗೇಜ್ಮೆಂಟ್ ಬಹಳ ಸಿಂಪಲ್ ಆಗಿ ಒಂದು ಮನೆಯಲ್ಲಿ ನಡೆದಿದೆ ಎನ್ನುವುದು ಗೊತ್ತಾಗುತ್ತಿದೆ. ಇನ್ನು ಎಂಗೇಜ್ಮೆಂಟ್ ನಲ್ಲಿ ಹೆಚ್ಚು ಜನರು ಪಾಲ್ಗೊಂಡಿಲ್ಲ. ರಾಣಾ ಹಾಗೂ ಅವರು ಮದುವೆ ಆಗುತ್ತಿರುವ ಹುಡುಗಿ, ರಕ್ಷಿತಾ ಹಾಗೂ ಅವರ ತಾಯಿ ಮತ್ತು ಮಗ ಸೂರ್ಯ ಹಾಗೂ ಸ್ನೇಹಿತರಾದ ಒಂದಿಬ್ಬರು ಕಾಣಿಸಿಕೊಂಡಿದ್ದಾರೆ. ಇನ್ಯಾರು ಎಂಗೇಜ್ಮೆಂಟ್ ನಲ್ಲಿ ಪಾಲ್ಗೊಂಡಿಲ್ಲ.

ಬಹಳ ಸಿಂಪಲ್ ಆಗಿ ರಕ್ಷಿತಾ ಅವರ ತಮ್ಮನ ಎಂಗೇಜ್ಮೆಂಟ್ ನಡೆದಿದೆ. ಇವರಿಬ್ಬರ ಜೋಡಿ ಕೂಡ ಅಷ್ಟೇ ಚೆನ್ನಾಗಿದೆ. ಆದರೆ ಹುಡುಗಿ ಯಾರು? ಆಕೆಯ ಹೆಸರು ಏನು? ಈ ಜೋಡಿಯ ಮದುವೆ ಯಾವಾಗ ನಡೆಯುತ್ತದೆ? ಇದೆಲ್ಲವನ್ನು ನಾವು ಕಾದು ನೋಡಬೇಕಿದೆ. ಮದುವೆಯ ಬಗ್ಗೆ ಇನ್ನೂ ಕೂಡ ಕುಟುಂಬದ ಕಡೆಯಿಂದ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ರಕ್ಷಿತಾ ಅವರು ಮಾಧ್ಯಮದ ಎದುರು ಅಥವಾ ಸೋಶಿಯಲ್ ಮೀಡಿಯಾ ಮೂಲಕ ತಮ್ಮನ ಮದುವೆಯ ಬಗ್ಗೆ ಅಪ್ಡೇಟ್ ಕೊಡುತ್ತಾರಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ..
ಇನ್ನು ರಕ್ಷಿತಾ ಅವರ ತಮ್ಮ ರಾಣಾ ಅವರು ಏಕ್ ಲವ್ ಯಾ ನಂತರ ಹೊಸ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವುದು ಇನ್ನು ಸಹ ತಿಳಿದು ಬಂದಿಲ್ಲ. ಆದರೆ ಇವರ ಮುಂದಿನ ಸಿನಿಮಾ ಕುರಿತ ಕೆಲಸಗಳು ಈಗಾಗಲೇ ಶುರುವಾಗಿದೆ. ಕೆಲವು ತಿಂಗಳುಗಳ ಹಿಂದೆ ತಮ್ಮ ತಂಡದ ಜೊತೆಗೆ ಮಹಾದೇಶ್ವರ ಬೆಟ್ಟಕ್ಕೆ ಹೋಗಿ ಸ್ಕ್ರಿಪ್ಟ್ ಪೂಜೆ ಸಹ ಮಾಡಿಸಿಕೊಂಡು ಬಂದಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಇವರ ಎರಡನೇ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಬಹುದು. ಮೊದಲ ಸಿನಿಮಾವನ್ನು ಪ್ರೇಮ್ ಅವರು ನಿರ್ದೇಶನ ಮಾಡಿದ್ದರು, ಎರಡನೇ ಸಿನಿಮಾವನ್ನು ಹೊಸ ಟೀಮ್ ಜೊತೆಗೆ ಮಾಡುತ್ತಿದ್ದಾರೆ ನಟ ರಾಣಾ.