ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಎಂದರೆ ಅದು ರಜನಿಕಾಂತ್. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಇವತ್ತು ವಿಶ್ವವೇ ಕೊಂಡಾಡುತ್ತಿರುವ ನಟ. ವಯಸ್ಸು 72 ಆಗಿದ್ರೂ ರಜನಿಕಾಂತ್ ಸಂಭಾವನೆ ಬರೋಬ್ಬರಿ 100 ಕೋಟಿ. ಇಷ್ಟೆಲ್ಲಾ ಇದ್ದರೂ ಕೂಡ ರಜನಿಕಾಂತ್ ಬಂದ ಹಾದಿಯನ್ನು, ತನ್ನ ಆಧ್ಯಾತ್ಮಿಕ ಸಿದ್ದಾಂತವನ್ನ ಮರೆತಿಲ್ಲ.ಪ್ರತಿ ವರ್ಷದಂತೆ ಇದೀಗ ‘ಜೈಲರ್’ ಸಿನಿಮಾದ ಬಳಿಕ ರಜನಿ ಹಿಮಾಲಯಕ್ಕೆ ತೆರಳಿದ್ದು, ಅಲ್ಲಿನ ಗುಹೆಯಲ್ಲಿ ನೆಲದ ಮೇಲೆ ದ್ಯಾನಕ್ಕೆ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡ ಸಿನಿ ರಂಗದ ವರನಟ ಡಾ. ರಾಜಕುಮಾರ್ ಅವರಂತೆಯೇ ರಜನಿಕಾಂತ್ ಕೂಡ ಆಧ್ಯಾತ್ಮದ ಬಗ್ಗೆ ಒಲವಿರುವ ನಟ. ಯೋಗ , ಧ್ಯಾನಗಳೆಂದರೆ ರಜನಿಗೆ ಇಷ್ಟ. ಪದೇ ಪದೇ ಹಿಮಾಲಯಕ್ಕೆ ತೆರಳುವ ರಜನಿ ಅಲ್ಲಿ ಧ್ಯಾನಸ್ಥರಾಗಿ ಬಿಡುತ್ತಾರೆ. ಮಹಾವತಾರ್ ಬಾಬಜಿ ಅವರ ಪರಮ ಭಕ್ತರಾಗಿರುವ ರಜನಿಕಾಂತ್ ಅಲ್ಲಿಯೇ ಕೆಲವು ದಿನಗಳ ಕಾಲ ಉಳಿದುಕೊಳ್ಳುತ್ತಾರೆ.
ಇದೀಗ ಮತ್ತೆ ರಜನಿಕಾಂತ್ ಉತ್ತರಾಖಂಡ ಪ್ರವಾಸದಲ್ಲಿದ್ದು, ಹಿಮಾಲಯದ ಗುಹೆಯೊಂದಕ್ಕೆ ತೆರಳಿದ್ದಾರೆ. ಸೂಪರ್ ಸ್ಟಾರ್ ಆಗಿದ್ದರೂ ಕೂಡ ಸಾಮಾನ್ಯರಂತೆ ಬಟ್ಟೆ ಧರಿಸಿ ನೆಲದ ಮೇಲೆ ಕುಳಿತು ರಜನಿಕಾಂತ್ ಧ್ಯಾನ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 72ನೇ ವಯಸ್ಸಿನಲ್ಲು ರಜನಿಗೆ ಈ ಪರಿ ಅಭಿಮಾನಿಗಳು, ಸಂಭಾವನೆ ಹಾಗೂ ಬೇಡಿಕೆ ಇರಲು ಅವರ ಆಧ್ಯಾತ್ಮ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ. ಹಿಮಾಲಯದಲ್ಲೂ ಕೂಡ ಅಭಿಮಾನಿಗಳು ರಜನಿಕಾಂತ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಖುಷಿ ಪಡುತ್ತಿದ್ದಾರೆ.