ಕನ್ನಡದ ಪ್ರಸಿದ್ಧ ನಟ ಅಪ್ಪು ನಮ್ಮನ್ನ ಅಗಲಿ ವರ್ಷಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಇನ್ನೂ ಅಜರಾಮರವಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜಕುಮಾರ್ ಅಲ್ಪ ಅವಧಿಯಲ್ಲಿ ಚಿತ್ರರಂಗ ಹಾಗೂ ಸಮಾಜ ಸೇವೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಇವರ ಹಠಾತ್ ಸಾ’ವು ಇಡೀ ಕರ್ನಾಟಕ ಚಿತ್ರರಂಗವನ್ನೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಅಪ್ಪು ಸಾ’ವಿನ ಸುದ್ದಿ ತಿಳಿದ ಬಳಿಕ ರಾಜ್ ಕುಮಾರ್ ಕುಟುಂಬ ಆ ಒಂದು ಆಘಾತದಿಂದ ಇನ್ನೂ ಹೊರಬಂದಿಲ್ಲ. ಇಂದಿಗೂ ರಾಜ್ ಕುಟುಂಬ ಸದಸ್ಯರು ಅಪ್ಪುವಿನ ನೆನಪಿನಲ್ಲೇ ಬದುಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ರಾಘವೇಂದ್ರ ರಾಜ್ ಕುಮಾರ್ ಅಪ್ಪು ಮೇಲಿನ ಪ್ರೀತಿಯಿಂದ ತಮ್ಮ ಎದೆಯ ಮೇಲೆ ಹಚ್ಚೇ ಹಾಕಿಸುಕೊಳ್ಳುವ ಮೂಲಕ ತಮ್ಮನ ನೆನಪನ್ನ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ.

ಹೌದು ರಾಘವೇಂದ್ರ ರಾಜಕುಮಾರ್ ಅಪ್ಪುವನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಪ್ಪು ಅಗಲಿದ ದಿನ ದೇವರು ನನ್ನ ತಮ್ಮ ಅಪ್ಪುವನ್ನ ಕರೆಸಿಕೊಳ್ಳುವ ಬದಲು ನನ್ನ ಕರೆಸಿಕೊಳ್ಳಬಹುದಿತ್ತು ಎಂದು ಭಾವುಕರಾಗಿದ್ದರು. ಇದೀಗ ತಮ್ಮನ ಮೇಲಿನ ಪ್ರೀತಿಯ ಸಂಕೇತವಾಗಿ ಟ್ಯಾಟೂ ಹಾಕಿಕೊಳ್ಳುವ ಮುಖಾಂತರ ತಮ್ಮನ ನೆನಪನ್ನ ಶಾಶ್ವತವಾಗಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅಪ್ಪು ಎನ್ನುವ ಹೆಸರನ್ನ ಹಚ್ಚೇ ಹಾಕಿಸಿಕೊಂಡು ಅದರ ಜೊತೆಗೆ ಟೊಟೊ ನುಕ್ಕಿ ಎಂದು ಕೂಡ ಹಚ್ಚೇ ಹಾಕಿಕೊಂಡಿದ್ದು, ಇದೀಗ ಈ ಟ್ಯಾಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೊಟೊ ನುಕ್ಕಿ ಎಂದರೆ ಏನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಲಾರಾಂಭಿಸಿದೆ.

ಟೊಟೊ ಹಾಗೂ ನುಕ್ಕಿ ಇವೆರಡು ಹೆಸರು ಅಪ್ಪು ಪುತ್ರಿ ದೃತಿ ಮತ್ತು ವಂದಿತಾ ನಿಕ್ ನೇಮ್ ಆಗಿದ್ದು, ತನ್ನ ತಮ್ಮನ ಮಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಹಚ್ಚೇ ಹಾಕಿಸಿಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಗೆ ಹೆಣ್ಣು ಮಕ್ಕಳಿಲ್ಲದ ಕಾರಣ ಅಪ್ಪು ಮಕ್ಕಳನ್ನ ಹೆಚ್ಚಾಗಿ ಇಷ್ಟಪಡುತ್ತಿದ್ದು, ವಾಸ್ತವವಾಗಿ ರಾಘಣ್ಣನಿಗೆ ಹೆಣ್ಣು ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ ಇರುವ ಕಾರಣ ಅಪ್ಪು ಟ್ಯಾಟೊ ಜೊತೆಗೆ ಟೊಟೊ ಹಾಗೂ ನುಕ್ಕಿ ಎನ್ನುವ ಪುನೀತ್ ಮಕ್ಕಳ ನಿಕ್ ನೇಮ್ ಹಚ್ಚೇ ಹಾಕಿಸಿಕೊಂಡಿದ್ದಾರೆ.
ಈ ಹಿಂದೆ ಅಪ್ಪು ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ರಾಘವೇಂದ್ರ ರಾಜಕುಮಾರ್ ಮಾಡುತ್ತಾ ಬಂದಿದ್ದು, ಬಡ ಮಕ್ಕಳ ಓದು, ಅನ್ನದಾನದಂತಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನ ತನ್ನ ತಮ್ಮನ ಹೆಸರಿನಲ್ಲಿ ಮಾಡುತ್ತಿದ್ದಾರೆ. ಇತ್ತೀಚಿಗೆ ಅಪ್ಪು ಹೆಸರಿನಲ್ಲಿ ಮಾಲೆ ಹಾಕಿ ಪಾದಯಾತ್ರೆ ಮಾಡಿ ಅಪ್ಪು ಮೇಲಿನ ಭಕ್ತಿ ಭಾವವನ್ನು ತೊರ್ಪಡಿಸುವ ಕೆಲಸ ಮಾಡಿದ್ದರು. ಅಭಿಮಾನಿಗಳ ಜೊತೆಗೂಡಿ ಅನೇಕ ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾ ತಮ್ಮನ ಹೆಸರನ್ನ ಅಜರಾಮರವಾಗಿ ಉಳಿಸುವ ಪ್ರಯತ್ನದಲ್ಲಿ ರಾಘವೇಂದ್ರ ರಾಜಕುಮಾರ್ ಯಶಸ್ವಿಯಾಗಿದ್ದಾರೆ.
ಇದೀಗ ಅಪ್ಪು ಅಭಿಮಾನಿಗಳು ಕೂಡ ರಾಘವೇಂದ್ರ ರಾಜ್ ಕುಮಾರ್ ಅಭಿಮಾನಕ್ಕೆ ಸಂತೋಷಗೊಂಡಿದ್ದು, ಅಪ್ಪು ಅಭಿಮಾನಿಗಳು ಈ ಟ್ಯಾಟೊ ಕುರಿತ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ರಾಘವೇಂದ್ರ ರಾಜ್ ಕುಮಾರ್ ಅಭಿಮಾನಕ್ಕೆ ಖುಷಿ ಪಟ್ಟಿದ್ದಾರೆ. ಒಟ್ಟಾರೆ ಅಪ್ಪು ತಮ್ಮನ್ನ ಅಗಲಿದರು ಕೂಡ ಎಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಮುಂಬರುವ ದಿನಗಳಲ್ಲಿ ರಾಘಣ್ಣ ಅಪ್ಪು ಹೆಸರಿನಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕೈಗೊಂಡು ಅಪ್ಪು ಹೆಸರನ್ನ ಅಜರಾಮರವಾಗಿಸಲಿ ಎನ್ನುವುದೇ ನಮ್ಮ ಆಶಯ.