ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೋಡಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಯಶ್ ಮತ್ತು ರಾಧಿಕಾ ಪ್ರೇಮಕಥೆ ಪ್ರೇಮಿಗಳಿಗೆ ಆದರ್ಶ ತುಂಬುವಂಥದು. ಬಹಳ ವರ್ಷಗಳ ಕಾಲ ಪ್ರೀತಿಸಿ, ಜೊತೆಯಾಗಿ ಬೆಳೆದು, ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿ, ಹೆಸರು ಮಾಡಿ, ಇಂದು ಸ್ಟಾರ್ ಕಲಾವಿದರು, ಸ್ಟಾರ್ ಜೋಡಿ ಎನ್ನಿಸಿಕೊಂಡಿದ್ದಾರೆ. ಈ ಜೋಡಿ ಎಲ್ಲರ ಫೇವರೆಟ್. ಇವರಿಬ್ಬರ ಲವ್ ಬಗ್ಗೆ ಸಹ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಎಲ್ಲಿಯೂ ವಿವಾದಕ್ಕೆ ಕೂಡ ಸಿಲುಕಿಕೊಳ್ಳಲಿಲ್ಲ ಈ ಜೋಡಿ. ಆದರೆ ಇಂದು ಇವರನ್ನು ನೋಡಿದರೇ, ಜೋಡಿಯಾಗಿ ಬದುಕು ಕಟ್ಟಿಕೊಂಡರೆ, ಇವರ ಹಾಗಿರಬೇಕು ಎನ್ನುವ ಹಾಗೆ ಇಬ್ಬರೂ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಲವ್ ಮಾಡುತ್ತಿದ್ದ ವೇಳೆ, ರಾಧಿಕಾ ಅವರು ಯಶ್ ಅವರಿಗೆ 30 ದಿನಕ್ಕೆ 30 ಪ್ರೇಮಪತ್ರ ಬರೆದಿದ್ದರಂತೆ. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ..

ಹೌದು, ನಮಗೆಲ್ಲ ಗೊತ್ತಿರುವ ಹಾಗೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕೂಡ ಮೊದಲು ನಟನೆ ಶುರು ಮಾಡಿದ್ದು, ಧಾರಾವಾಹಿಗಳ ಮೂಲಕ. ಇಬ್ಬರೂ ಜೊತೆಯಾಗಿ ಧಾರಾವಾಹಿಯಲ್ಲಿ ನಟಿಸಿದರು. ಆಗಿನಿಂದಲೇ ಇಬ್ಬರ ಪರಿಚಯ ಆಗಿತ್ತು. ಅಷ್ಟೇ ಅಲ್ಲದೇ ಇವರಿಬ್ಬರು ನಾಯಕ ಮತ್ತು ನಾಯಕಿಯಾಗಿ ಚಿತ್ರರಂಗಕ್ಕೆ ಒಟ್ಟಿಗೆ ಪಾದಾರ್ಪಣೆ ಮಾಡಿದವರು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ, ಜೋಡಿಯಾಗಿ ನಟಿಸಿದರು. ಆಗಿನಿಂದಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು, ಆದರೆ ತಮ್ಮ ಪ್ರೀತಿ ವಿಷಯವನ್ನ ಇಬ್ಬರೂ ಜಗಜ್ಜಾಹೀರ ಪಡಿಸಲಿಲ್ಲ. ಇಬ್ಬರು ಒಟ್ಟೊಟ್ಟಿಗೆ ಎಲ್ಲಿಯೂ ಸುತ್ತಾಡಿದ್ದನ್ನು ಯಾರು ಕಂಡಿಲ್ಲ. ಆದರೆ ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಮಾತ್ರ ಆಗಾಗ ಕೇಳಿ ಬರುತ್ತಲೇ ಇತ್ತು.

ಇಬ್ಬರು ಇದರ ಬಗ್ಗೆ ಹೊರಗಡೆ ಎಲ್ಲಿಯೂ ಮಾತನಾಡಿರಲಿಲ್ಲ. ಒಂದು ದಿನ ಎಂಗೇಜ್ಮೆಂಟ್ ಮಾಡಿಕೊಂಡು, ತಮ್ಮ ರಿಲೇಶನ್ಷಿಪ್ ಬಗ್ಗೆ ತಿಳಿಸಿದರು. ಮುಂದೆ ಮದುವೆಯಾದರು, ಈ ಜೋಡಿ ಇಷ್ಟ ಆಗಿದ್ದು ಇದೆ ಕಾರಣಕ್ಕೆ. ಯಶ್ ರಾಧಿಕಾ ಥರ ಲವ್ ಮಾಡಿ, ಸೆಟ್ಲ್ ಆಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಅಷ್ಟ್ರ ಮಟ್ಟಿಗೆ ಈ ಜೋಡಿ, ಮಾದರಿಯಾಗಿ ಬದುಕುತ್ತಿದ್ದಾರೆ. ಇನ್ನು ಇವರಿಬ್ಬರು ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿರುವುದು ಎಲ್ಲರಿಗೂ ಇನ್ನು ಖುಷಿ. ಯಶ್ ಅವರ ಕೆಲಸಗಳಲ್ಲಿ, ಸಿನಿಮಾಗಳ ವಿಷಯದಲ್ಲಿ ಎಲ್ಲಕ್ಕೂ ರಾಧಿಕಾ ಸಪೋರ್ಟಿವ್ ಆಗಿದ್ದಾರೆ. ಗಂಡನ ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಹೀಗೆ ಇಬ್ನರು ತುಂಬಾ ಚೆನ್ನಾಗಿದ್ದಾರೆ. ಇವರಿಬ್ಬರನ್ನು ಈಗ ನೋಡಿ ಎಲ್ಲರೂ ಖುಷಿ ಪಡುತ್ತಾರೆ..

ಆದರೆ ಏನೂ ಇಲ್ಲದ ಸಮಯದಲ್ಲಿ ಕೂಡ ಇವರಿಬ್ಬರು ಒಬ್ಬರಿಗೊಬ್ಬರು ಜೊತೆಗಿದ್ದು, ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಜೊತೆಯಾಗಿ ನಿಂತವರು. ಲವ್ ಮಾಡುತ್ತಿದ್ದ ವೇಳೆ ಇವರಿಬ್ಬರು ಎಷ್ಟು ಪ್ರೀತಿ ಮಾಡುತ್ತಿದ್ದರು ಎಂದರೆ, ರಾಧಿಕಾ ಅವರು ಯಶ್ ಅವರು 30 ದಿನಗಳ ಕಾಲ ವಿದೇಶದಲ್ಲಿ ಶೂಟಿಂಗ್ ಗೆ ಹೋಗಿದ್ದಾಗ, 30 ದಿನಕ್ಕೆ 30 ಪತ್ರಗಳನ್ನು ಬರೆದಿದ್ದರಂತೆ. ಸ್ವೀಡನ್ ನಲ್ಲಿ ಇದ್ದಾಗ ದಿನಾ ಬೆಳಗ್ಗೆ ಎದ್ದಾಗ, ಒಂದೊಂದು ಪತ್ರವನ್ನು ತಂದು ಕೊಡುತ್ತಿದ್ದರಂತೆ. ಆ ಪತ್ರಗಳನ್ನು ನೋಡಿದರೆ ಖುಷಿ ಆಗುತ್ತಿತ್ತಂತೆ. ಇನ್ನು ಅಷ್ಟೇ ಅಲ್ಲದೇ, ರಾಧಿಕಾ ಅವರಿಗೆ ಪೇಂಟಿಂಗ್ ಮಾಡೋ ಆಸಕ್ತಿ ಇತ್ತಂತೆ, ಜಗಳ ಆದಾಗ ಬೇಜಾರಲ್ಲಿ ಕುಳಿತಿರೋ ಹಾಗೆ, ಒಂದು ಪೇಟಿಂಗ್ ಮಾಡಿದ್ದರಂತೆ. ಅದನ್ನು ನೋಡಿದರೆ ಬೇಸರ ಹೊರಟು ಹೋಗುತ್ತಿತ್ತು ಎನ್ನುತ್ತಾರೆ ಯಶ್.

ಹೀಗೆ ಈ ಜೋಡಿ ಎಲ್ಲಾ ವಿಷಯದಲ್ಲಿ ಕೂಡ ಆದರ್ಶ ಜೋಡಿಯಾಗಿದ್ದಾರೆ. ಇವರಿಬ್ಬರು ಲವ್ ಮಾಡೋ ವೇಳೆ ಯಶ್ ಅವರು ಸಹ ವಿಶೇಷವಾಗಿ ಗಿಫ್ಟ್ ಕೊಟ್ಟಿದ್ದು, ರಾತ್ರಿಯಲ್ಲಿ ಏನು ಸಿಗದ ಕಾರಣ, ಕೊತ್ತಂಬರಿ ಸೊಪ್ಪನ್ನು ಬೊಕ್ಕೆ ರೀತಿಯಲ್ಲಿ ತೆಗೆದುಕೊಂಡು ಹೋಗಿ ಕೊಟ್ಟಿದ್ದರಂತೆ. ಈ ರೀತಿ ಈ ಜೋಡಿ ಬದುಕಿನ ಪ್ರತಿ ಹಂತದಲ್ಲಿ ಕೂಡ ಮಾದರಿಯಾಗಿ ನಿಂತಿದ್ದಾರೆ. ಈಗ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಕೂಡ ಯಶ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ವರ್ಷಾಂತ್ಯಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಒಟ್ಟಿನಲ್ಲಿ ಟಾಕ್ಸಿಕ್ ಸಿನಿಮಾ ವರ್ಲ್ಡ್ ಲೆವೆಲ್ ನಲ್ಲಿ ಸದ್ದು ಮಾಡುವುದರಲ್ಲಿ ಸಂಶಯವಿಲ್ಲ.