ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. 13 ವರ್ಷಗಳಿಂದ ಚಿತ್ರರಂಗದಲ್ಲಿರುವ ರಚಿತಾ ರಾಮ್ ಅವರು ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಇವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಕಾಣುತ್ತಿದೆ. ರಚಿತಾ ರಾಮ್ ಅವರು ಲಕ್ಕಿ ಹೀರೋಯಿನ್ ಎಂದೇ ಹೆಸರು ಮಾಡಿದ್ದವರು. ಆದರೆ ಲಾಯರ್ ಜಗದೀಶ್ ಅವರು ರಚಿತಾ ರಾಮ್ ಅವರ ಬಗ್ಗೆ ಕೆಲವು ಮಾತುಗಳನ್ನಾಡಿ, ಅಪವಾದಗಳನ್ನ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರು ರಚಿತಾ ರಾಮ್ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರಚಿತಾ ಅವರು ಆ ಆರೋಪಗಳಿಗೆ ಉತ್ತರ ನೀಡಿದ್ದಾರೆ.

ರಚಿತಾ ರಾಮ್ ಅವರ ಬಳಿ ಅಷ್ಟೊಂದು ಹಣ ಹೇಗೆ ಬರುತ್ತೆ, ಐಷಾರಾಮಿ ಮನೆ, ಕಾರುಗಳು ಇದನ್ನೆಲ್ಲ ಕೊಂಡುಕೊಳ್ಳಲು ಹಣ ಹೇಗೆ ಬರುತ್ತೆ, ಇದನ್ನೆಲ್ಲಾ ಅವರು ಅಡ್ಡದಾರಿಯಲ್ಲಿ ಸಂಪಾದನೆ ಮಾಡಿರೋದು ಎನ್ನುವ ಅರ್ಥದಲ್ಲಿ ಲಾಯರ್ ಜಗದೀಶ್ ರಚಿತಾ ರಾಮ್ ಅವರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಲಾಯರ್ ಜಗದೀಶ್ ಅವರು ಈ ರೀತಿ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿರೋದು ಇದೇ ಮೊದಲಲ್ಲ, ಹಲವು ಸೆಲೆಬ್ರಿಟಿಗಳ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ರಚಿತಾ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ..
ಆದರೆ ರಚಿತಾ ರಾಮ್ ಅವರು ಇದುವರೆಗೂ ಪ್ರತಿಕ್ರಿಯೆ ಕೊಡದೇ ಇದ್ದವರು, ಇದೀಗ ಲಾಯರ್ ಜಗದೀಶ್ ಅವರ ಎಲ್ಲಾ ಮಾತುಗಳಿಗೆ ಉತ್ತರ ಕೊಟ್ಟಿದ್ದಾರೆ. ಪ್ರೆಸ್ ಮೀಟ್ ನಲ್ಲಿ ಮಾತನಾಡುವಾಗ, ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರ ಕೊಟ್ಟ ರಚಿತಾ ರಾಮ್ ಅವರು, “ನಮ್ಮ ಲೈಫ್ ಅಲ್ಲಿ ತಂದೆ ತಾಯಿ ಬಿಟ್ಟು ನಮ್ಮ ರಿಲೇಶನ್ ಗಳೇ ಅಷ್ಟೆಲ್ಲಾ ಮಾತಾಡ್ತಾರೆ.. ಇಲ್ಲದ ವಿಚಾರಗಳನ್ನೇ ಹೇಳ್ತಾರೆ, ಹಾಗಿದ್ದಾಗ ಈ ವಿಷಯದ ಬಗ್ಗೆ ನಾನು ಏನು ಅಂತ ಹೇಳಲಿ..”, ಎಂದು ಮಾತು ಶುರು ಮಾಡಿದರು ರಚಿತಾ ರಾಮ್. ನಂತರ ಮುಂದುವರೆದು ಮಾತನಾಡಿ, “12 ವರ್ಷದಿಂದ ನಾನು ಇಂಡಸ್ಟ್ರಿಯಲ್ಲಿ ಇದ್ದೀನಿ, ಆಗಿಂದ ಈಗಿನವರೆಗೂ ಕೆಲಸ ಮಾಡ್ತಿದ್ದೀನಿ..

ಅದಕ್ಕೆ ಸಂಭಾವನೆ ಕೂಡ ತಗೊಳ್ತಾ ಇದ್ದೀನಿ. ಅವಶ್ಯಕತೆ ಇದ್ದಾಗ ಮಾತ್ರ ಮಾತಾಡ್ತೀನಿ, ಶೂಟಿಂಗ್ ಇಲ್ಲದ ಫ್ರೀ ಟೈಮ್ ನ ಮನೆಯವರ ಜೊತೆಗೆ ಕಳೀತಿನಿ. ಅವರು ವಯಸ್ಸಲ್ಲಿ ಹಿರಿಯರು, ಅವರ ಬಗ್ಗೆ ಗೌರವ ಇಲ್ಲದೆ ಮಾತನಾಡೋಕೆ ನನಗೆ ಇಷ್ಟವಿಲ್ಲ. ಅವರು ಹೇಳಿರೋ ಮಾತೆಲ್ಲಾ ಊಹಾಪೋಹಗಳು ಅಷ್ಟೇ. ಅದೆಲ್ಲಾ ಗಾಸಿಪ್ಸ್ ಅಷ್ಟೇ. ನಾನೇನಾದರು ಅವರು ಹೇಳಿದಂಥ ಕೆಲಸಗಳನ್ನ ಮಾಡ್ತಿದ್ರೆ, ಇದು ನನ್ ಲೈಫ್ ನನ್ನಿಷ್ಟ ಅಂತ ಹೇಳ್ತಿದ್ದೆ. ಅಕಸ್ಮಾತ್ ನಾನು ತಪ್ಪು ಮಾಡಿದ್ದಿದ್ರೆ ಅದನ್ನ ಒಪ್ಪಿಕೊಳ್ತಾ ಇದ್ದೆ. ತಪ್ಪು ಮಾಡಿಲ್ಲದೇ ಇರುವಾಗ, ಆ ದೇವರೇ ಎದುರು ನಿಂತರು ಸಹ ನಾನು ಒಪ್ಪಿಕೊಳ್ಳೋದಿಲ್ಲ. ನಂಗೆ ತುಂಬಾ ಕಮಿಟ್ಮೆಂಟ್ಸ್ ಇದೆ. ಬಹಳಷ್ಟು ಕೆಲಸ ಕೂಡ ಇದೆ.
ಆ ಥರ ನನಗೆ ಸ್ಪಾನ್ಸರ್ ಮಾಡುವವರು ಇದ್ದಿದ್ದರೆ, 12 ವರ್ಷ ಯಾಕೆ ನಾನು ಕಷ್ಟ ಪಡಬೇಕಿತ್ತು. ಆರಾಮಾಗಿ ಇರ್ತಿದ್ದೆ. ಅಕಸ್ಮಾತ್ ನಾನು ಲೈಫ್ ಅಲ್ಲಿ ಎಲ್ಲಾನೂ ಕಳ್ಕೊಂಡು ಬಿಟ್ರೆ, ಒಂದು ದೇವಸ್ಥಾನಕ್ಕೆ ಹೋಗಿ, ಅಲ್ಲಿ ಕೆಲಸ ಮಾಡಿ, ಪ್ರಸಾದ ತಿನ್ಕೊಂಡು ಜೀವನ ಕಳೀತಿನಿ. ಆದರೆ ಯಾರ ಜೊತೆಗೂ ಹೋಗಲ್ಲ. ನಮ್ಮ ಅಪ್ಪ ಅಮ್ಮ ನನಗೆ ಇದನ್ನೇ ಹೇಳಿಕೊಟ್ಟಿರೋದು..” ಎಂದು ಲಾಯರ್ ಜಗದೀಶ್ ಅವರ ಎಲ್ಲಾ ಆರೋಪಗಳಿಗೆ, ಮಾತುಗಳಿಗೆ ಉತ್ತರ ಕೊಟ್ಟಿದ್ದಾರೆ ರಚಿತಾ ರಾಮ್. ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ2 ಸಿನಿಮಾ ಬಿಡುಗಡೆ ಆಗೋಕೆ ಸಿದ್ಧವಾಗಿದೆ. ಅಯೋಗ್ಯ 2 ಸಿನಿಮಾ ಶೂಟಿಂಗ್ ಹಂತದಲ್ಲಿದೆ.