ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವುದೇ ಒಂದು ಅದ್ಭುತ ಅನುಭವ. ಆದರೆ ಪಿವಿಆರ್ ಹಾಗೂ ಐನಾಕ್ಸ್ ಗಳಂಥಹಾ ಮಲ್ಟಿಪ್ಲೆಕ್ಸ್ಗಳು ಕೊಡುವ ಸೇವೆಗಿಂತಲೂ ಹೆಚ್ಚೇ ಶುಲ್ಕವನ್ನು ಪಡೆಯುತ್ತವೆ ಎಂಬುದು ಗ್ರಾಹಕರ ಅಪವಾದ. ಇದೀಗ ಪಿವಿಆರ್ ಹಾಗೂ ಐನಾಕ್ಸ್ ಜಂಟಿಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಂಪರ್ ಆಫರ್ ಕೊಟ್ಟಿದೆ.

ಮೇ 19ರಿಂದ 25ರವರೆಗೆ ಕನ್ನಡ ಸಿನಿ ಸ್ಪೆಷಲ್
ಪಿವಿರ್ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನೆಮಾಗಳ ಹೆಮ್ಮೆಯ ಸಂಭ್ರಚಾರಣೆ

ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಸಿನಿಮಾಗಳನ್ನು ಸಂಭ್ರಮಿಸುವ ಸುವರ್ಣ ಅವಕಾಶವನ್ನು ನೀಡಿದೆ. ಕನ್ನಡ ಸ್ಪೆಷಲ್ ಎಂಬ ವಿಶೇಷ ಆಫರ್ ನೀಡಿದೆ. ಅಂದರೆ ಕನ್ನಡ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ರೀ ರಿಲೀಸ್ ಮಾಡುತ್ತಿದೆ. ಅದು ಕಡಿಮೆ ಬೆಲೆಯಲ್ಲಿ. ಕೇವಲ 99 ರೂಪಾಯಿಂದ ಟಿಕೆಟ್ ಶುರು ಮಾಡಿದೆ. ಹಾಗಿದ್ರೆ ಪಿವಿಆರ್ ಹಾಗೂ ಐನಾಕ್ಸ್ ಗಳಲ್ಲಿ ಮತ್ತೊಮ್ಮೆ ರಿಲೀಸ್ ಆಗಲಿರುವ ಬ್ಲಾಕ್ ಬಸ್ಟರ್ಸ್ ಚಿತ್ರಗಳು ಯಾವುದು ಅಂದರೆ,
- ರಾಜಕುಮಾರ
- ಯಜಮಾನ
- ಕೆಜಿಎಫ್-1
- ಮಫ್ತಿ
- ಮಾಸ್ಟರ್ ಪೀಸ್
- ಗಂಧದಗುಡಿ
- ಗರುಡ ಗಮನ ವೃಷಭ ವಾಹನ

ಯಾವಾಗ ಯಾವ ಚಿತ್ರ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಫ್ಯಾಮಿಲಿ ಎಂಟರ್ ಟೈನರ್ ಸೂಪರ್ ಹಿಟ್ ಸಿನಿಮಾ ರಾಜಕುಮಾರ ಇದೇ ಶುಕ್ರವಾರದಂದು ರೀ ರಿಲೀಸ್ ಆಗ್ತಿದ್ರೆ, ಶನಿವಾರದಂದು ಯಜಮಾನ, ಭಾನುವಾರ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ -೧, ಸೋಮವಾರ ಶಿವಣ್ಣ ಶ್ರೀಮುರಳಿ ನಟನೆಯ ಮಫ್ತಿ, ಮಂಗಳವಾರದಂದು ಯಶ್ ನಟನೆಯ ಮಾಸ್ಟರ್ ಪೀಸ್, ಬುಧವಾರ ಅಪ್ಪು ಕನಸಿನ ಕೂಸು ಗಂಧದಗುಡಿ ಹಾಗೂ ಗುರುವಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಬಿಡುಗಡೆಯಾಗಲಿವೆ. ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಪ್ರೇಕ್ಷಕರಿಗೆ ಸಂಭ್ರಮಿಸುವ ಅವಕಾಶ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ www.pvrcinemas.com ಭೇಟಿ ನೀಡಿ ಹಾಗೂ ಬುಕ್ ಮೈ ಶೋ ನಲ್ಲಿ ಟಿಕೇಟ್ಸ್ ಲಭ್ಯವಿದೆ.