ಬಾಕ್ಸ್ ಆಫೀಸ್ ನಲ್ಲಿ ಪುಷ್ಪ2 ಅಬ್ಬರ ಜೋರಾಗಿದೆ. ಈ ಸಿನಿಮಾದ ಜನಪ್ರಿಯತೆ ಹಾಗೂ ಹಣಗಳಿಕೆಯನ್ನ ನಿಲ್ಲಿಸಿವುದಕ್ಕೆ ಸಾಧ್ಯ ಆಗುತ್ತಲು ಇಲ್ಲ. ಅಶ್ಟರ ಮಟ್ಟಿಗೆ ಪುಷ್ಪ2 ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಹಣಗಳಿಕೆ ಮಾಡುತ್ತಾ ಸಾಗುತ್ತಿದೆ. ಪುಷ್ಪ2 ಸಿನಿಮಾ ತೆರೆಕಂಡು ಕೇವಲ 11 ದಿವಸಕ್ಕೆ ಕೆಜಿಎಫ್2 ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ದಾಖಲೆ ಪುಡಿ ಪುಡಿ ಮುಂದಕ್ಕೆ ಸಾಗುತ್ತಿದೆ. ಅಷ್ಟಕ್ಕೂ ಹೇಗಿದೆ ಪುಷ್ಪ2 ಕಲೆಕ್ಷನ್? ಈ ಸುದ್ದಿಗಳು ನಿಜವೇ? ಪೂರ್ತಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪೂರ್ತಿ ಲೇಖನವನ್ನು ತಪ್ಪಿಸದೆ ಎಲ್ಲರೂ ಓದಿ…

ಪುಷ್ಪ2 ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪ್ರಮುಖವಾದದ್ದು, 2021ರಲ್ಲಿ ತೆರೆಕಂಡ ಪುಷ್ಪ ಸಿನಿಮಾದ ಸೀಕ್ವೆಲ್ ಇದು. ನಟ ಅಲ್ಲು ಅರ್ಜುನ್ ಅವರ ಕೆರಿಯರ್ ನ ಮೊದಲ ಅತಿದೊಡ್ಡ ಸಿನಿಮಾ ಪುಷ್ಪ1 ಎಂದು ಹೇಳಿದರೆ ತಪ್ಪಲ್ಲ. ಕೆಜಿಎಫ್1 ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಅನ್ನು ಆಗ ಪುಷ್ಪ1 ಸಿನಿಮಾ ಬೀಟ್ ಮಾಡಿ, ಅತಿಹೆಚ್ಚು ಕಲೆಕ್ಷನ್ ಮಾಡಿತ್ತು. ಸಮಂತಾ ಅವರ ಸ್ಪೆಶಲ್ ಸಾಂಗ್, ಪುಷ್ಪ1 ಸಿನಿಮಾದ ಮುಖ್ಯವಾದ ಹೈಲೈಟ್ ಸಹ ಆಗಿತ್ತು. ಪುಷ್ಪ1 ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣ ಜನತು ಪುಷ್ಪ2 ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅಲ್ಲು ಅರ್ಜುನ್ ಅವರನ್ನು ಪುಷ್ಪ ಆಗಿ ಮತ್ತೆ ನೋಡಲು ಕಾಯುತ್ತಿದ್ದರು.
ಪುಷ್ಪ2 ಸಿನಿಮಾ ಡಿಸೆಂಬರ್ 5ರಂದು ವಿಶ್ವಾದ್ಯಂತೆ ತೆರೆಕಂಡಿದೆ. ಪುಷ್ಪ2 ಸಿನಿಮಾ ಹಾಡುಗಳು ಹಾಗೂ ಟ್ರೇಲರ್ ನ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು, ಸಿನಿಮಾ ಬಗ್ಗೆ ನಿರೀಕ್ಷೆ ಸಹ ಜಾಸ್ತಿ ಇತ್ತು. ಸಿನಿಮಾ ಬಿಡುಗಡೆಯಾದ ನಂತರ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಕೆಲವರಿಗೆ ಪುಷ್ಪ2 ಇಷ್ಟವಾಗಿದೆ, ಇನ್ನು ಕೆಲವರಿಗೆ ಪುಷ್ಪ2 ಇಷ್ಟವಾಗಿಲ್ಲ. ಆದರೆ ಹಣಗಳಿಕೆಯಲ್ಲಿ ಮಾತ್ರ ಈ ಸಿನಿಮಾ ಹಿಂದಕ್ಕೆ ಹೋಗಿಲ್ಲ, ಜನರಲ್ಲಿ ಪುಷ್ಪ ಕ್ರೇಜ್ ಇದ್ದು, ಪದೇ ಪದೇ ಬಂದು ಸಿನಿಮಾ ನೋಡುತ್ತಿದ್ದಾರೆ. 2ಡಿ ಮತ್ತು 3ಡಿ ಎರಡು ವರ್ಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿದ್ದು, ಅದ್ಭುತವಾಗಿ ಸದ್ದು ಮಾಡುತ್ತಿದೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಪುಷ್ಪ2 ಸಿನಿಮಾ ಮೊದಲ ವಾರದಲ್ಲೇ ಸುಮಾರು 750 ಕೋಟಿ ಹಣಗಳಿಕೆ ಮಾಡಿತ್ತು, ಇದೀಗ 11 ದಿನಗಳ ಸಮಯಕ್ಕೆ 1292 ಕೋಟಿ ಹಣಗಳಿಕೆ ಮಾಡಿದೆ, ಈ ಮೂಲಕ ಕೆಜಿಎಫ್2 ಸಿನಿಮಾದ ಲೈಫ್ ಟೈಮ್ ಹಣಗಳಿಕೆಯನ್ನ ಮೀರಿ, ಯಶಸ್ಸು ಸಾಧಿಸಿದೆ ಪುಷ್ಪ2. ಅತಿಹೆಚ್ಚು ಹಣಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಲಿಸ್ಟ್ ನಲ್ಲಿ 1240 ಕೋಟಿ ಹಣಗಳಿಕೆ ಮಾಡಿದ ಕೆಜಿಎಫ್3 ಮೂರನೇ ಸ್ಥಾನದಲ್ಲಿತ್ತು, 1700 ಕೋಟಿ ಕಲೆಕ್ಷನ್ ಮಾಡಿರುವ ಬಾಹುಬಲಿ2 ಎರಡನೇ ಸ್ಥಾನದಲ್ಲಿದೆ. 2000 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿರುವ ಆಮೀರ್ ಖಾನ್ ಅವರ ದಂಗಲ್ ಸಿನಿಮಾ ಇನ್ನು ಕೂಡ ಮೊದಲ ಸ್ಥಾನದಲ್ಲಿದೆ.

ಪುಷ್ಪ2 ಸಿನಿಮಾ ಈಗಾಗಲೇ ಕೆಜಿಎಫ್ ಸಿನಿಮಾದ ಹಣದ ದಾಖಲೆಯನ್ನು ಬೀಟ್ ಮಾಡಿ, ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದು, ಮುಂದಿನ ಟಾರ್ಗೆಟ್ ಬಾಹುಬಲಿ2 ಆಗಿದೆ. ಬಾಹುಬಲಿ ಸಿನಿಮಾದ ಕ್ರೇಜ್ ಹಾಗೂ ಹಣಗಳಿಕೆಯನ್ನ ಪುಶ್ಪ2 ಸಿನಿಮಾ ಬ್ರೇಕ್ ಮಾಡುತ್ತಾ ಎನ್ನುವ ಕುತೂಹಲ ಜನರಲ್ಲಿದೆ. ಆ ರೀತಿ ಆಗುತ್ತಾ ಎಂದು ತಿಳಿದುಕೊಳ್ಳಲು ಇನ್ನು ಕೆಲ ದಿವಸ ಕಾಯಬೇಕಿದೆ. ಒಟ್ಟಿನಲ್ಲಿ ತೆರೆಕಂಡು 2 ವಾರಗಳ ಹತ್ತಿರಕ್ಕೆ ಬರುತ್ತಿದ್ದರು ಸಹ ಪುಷ್ಪ2 ಕ್ರೇಜ್ ಕಡಿಮೆ ಆಗಿಲ್ಲ. ಅಲ್ಲು ಅರ್ಜುನ್ ಅವರ ಅಭಿಮಾನಿಗಳು ತುಂಬಾ ಇಷ್ಟಪಟ್ಟು ಸಿನಿಮಾ ನೋಡುತ್ತಿದ್ದಾರೆ.