2024ರ ಅತ್ಯಂತ ನಿರೀಕ್ಷೆಯ ಚಿತ್ರಗಳಲ್ಲಿ ಒಂದಾದ ‘ಪುಷ್ಪ: ದಿ ರೂಲ್ʼ ಬಿಡುಗಡೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಈ ಚಲನಚಿತ್ರವನ್ನು ಆರಂಭದಲ್ಲಿ ಇದೇ ವರ್ಷ ಆಗಸ್ಟ್ ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿನ ವಿಳಂಬದಿಂದಾಗಿ, ಅದರ ಬಿಡುಗಡೆಯನ್ನು ಮುಂದೂಡಲಾಯಿತು. ಇದೀಗ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಹೌದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವುದು ಗಮನಾರ್ಹ. ಇದು ಡಿಸೆಂಬರ್ 5 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಟ್ರೇಲರ್ ನವೆಂಬರ್ 15ಕ್ಕೆ ಬಿಡುಗಡೆಯಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಇದರೊಂದಿಗೆ ಚಿತ್ರದ ಅದ್ಧೂರಿ ಪ್ರಚಾರವನ್ನು ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆರು ರಾಜ್ಯ ಪ್ರವಾಸಗಳನ್ನೂ ಯೋಜಿಸಲಾಗಿದೆ. ‘ಪುಷ್ಪ 2’ ನಲ್ಲಿ ಅಲ್ಲು ಅರ್ಜುನ್ ಮತ್ತು ನಟ ಫಹದ್ ಫಾಸಿಲ್ ನಡುವೆ ತೀವ್ರ ಕಾಳಗ ನಡೆಯಲಿದೆ.
ಇತ್ತೀಚೆಗಷ್ಟೇ ಸಿನಿಮಾದಲ್ಲಿನ ಸ್ಪೆಷಲ್ ಸಾಂಗ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಈ ಸೀಕ್ವೆಲ್ ನಲ್ಲಿ ಸ್ಪೆಷಲ್ ಸಾಂಗ್ ಮಾಡಲ್ಲ ಅಂತ ಸಮಂತಾ ಅವರಿಂದ ಸ್ಪಷ್ಟನೆ ಸಿಕ್ಕಿತ್ತು. ಇದಾದ ನಂತರ ಶ್ರದ್ಧಾ ಕಪೂರ್ ಅವರಂತಹ ನಟಿಯ ಹೆಸರು ಚರ್ಚೆಯಾಗುತ್ತಿತ್ತು. ಆದರೆ ಈಗ ಇದರಲ್ಲಿ ಕನ್ನಡದ ಬೆಡಗಿಯ ಡ್ಯಾನ್ಸ್ ಇರಲಿದೆ ಎಂಬುದು ಸ್ಪಷ್ಟವಾಗಿದೆ.
‘ಪುಷ್ಪ 2’ ತಯಾರಕರು ಸ್ಪೆಷಲ್ ಸಾಂಗ್ನ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ. ನಿರ್ಮಾಪಕರು ಸೀಕ್ವೆಲ್ ಬಗ್ಗೆ ಹೈಪ್ ಹೆಚ್ಚಿಸಿದ್ದಾರೆ. ಸೌತ್ ನಟಿ ಶ್ರೀಲೀಲಾ ಚಿತ್ರದಲ್ಲಿ ಸ್ಪೆಷಲ್ ಸಾಂಗ್ನಲ್ಲಿ ಇರಲಿದ್ದಾರೆ. ಶ್ರೀಲೀಲಾ ‘ಪುಷ್ಪಾ 2’ ನಲ್ಲಿ ಹೆಜ್ಜೆ ಹಾಕುವ ಸುದ್ದಿ ಅನೌನ್ಸ್ ಆದ ನಂತರ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇಲ್ಲ.
‘ಪುಷ್ಪ 2’ ಪೋಸ್ಟರ್ನಲ್ಲಿ ಶ್ರೀಲೀಲಾ ಕಪ್ಪು ಡ್ರೆಸ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಸುಂದರ ಲುಕ್ ನೋಡಿ ಅಭಿಮಾನಿಗಳಲ್ಲಿ ಹರ್ಷ ಮೂಡಿದೆ. ಹಾಡು ರಿಲೀಸ್ ಆಗದೇ ಬ್ಲಾಕ್ ಬಸ್ಟರ್ ಅಂತಿದ್ದಾರೆ ಅಭಿಮಾನಿಗಳು. ಒಟ್ಟಾರೆ ಶ್ರೀಲೀಲಾ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಶ್ರೀಲೀಲಾ ಸಮಂತಾಗೆ ಪೈಪೋಟಿ ನೀಡುತ್ತಾರಾ?
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಭಾಗ 1 ರಲ್ಲಿ ಸಮಂತಾ ರುತ್ ಪ್ರಭು ‘ಊ ಅಂಟಾವಾ’ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು. ಈ ಹಾಡಿನಲ್ಲಿ ಲಕ್ಷಾಂತರ ರೀಲ್ಗಳನ್ನು ಸಹ ತಯಾರಿಸಲಾಗಿದೆ. ಈ ಹಾಡು ಚಿತ್ರಕ್ಕೆ ಭರ್ಜರಿ ಹೈಪ್ ನೀಡಿತ್ತು. ಸಮಂತಾ ಫ್ಯಾನ್ಸ್ ಸಂಖ್ಯೆ ಕೂಡ ಹೆಚ್ಚಾಗಿತ್ತು. ಹೀಗಿರುವಾಗ ಶ್ರೀಲೀಲಾ ಅವರಿಗೆ ಪೈಪೋಟಿ ನೀಡಿ ಚಿತ್ರಕ್ಕೆ ಮೊದಲಿನಂತೆ ಹೈಪ್ ಕೊಡುತ್ತಾರೋ ಇಲ್ಲವೋ ನೋಡಬೇಕು.
2019 ರಲ್ಲಿ ಕಿಸ್ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ ಶ್ರೀಲೀಲಾ ಆ ನಂತರ ಟಾಲಿವುಡ್ನತ್ತ ಮುಖ ಮಾಡಿದರು. SIIMA ನಂತಹ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದುವರೆಗೆ ತೆಲುಗಿನಲ್ಲಿ ಆದಿಕೇಶವ, ‘ಧಮಾಕಾ’, ‘ಸ್ಕಂದ’, ‘ಭಗವಂತ ಕೇಸರಿ’ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ, ನಟಿ ಕೊನೆಯದಾಗಿ ಮಹೇಶ್ ಬಾಬು ಅವರೊಂದಿಗೆ ‘ಗುಂಟೂರು ಕಾರಂ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಮಹೇಶ್ ಬಾಬು ಜೊತೆ ನಟಿಯ ಕಮಿಸ್ತ್ರಿ ವರ್ಕ್ ಆಗಿತ್ತು.