ಟಾಲಿವುಡ್ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ರಿಲೀಸ್ಗೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪುಷ್ಪ ಪಾರ್ಟ್ 1 ಹಿಟ್ ಆಗಿರೋ ಕಾರಣ ಪಾರ್ಟ್ 2 ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಬೆಟ್ಟದಷ್ಟಿದೆ. ಈ ನಡುವೆ ಪುಷ್ಪ 2 ಚಿತ್ರೀಕರಣದ ಸೆಟ್ ವಿಡಿಯೋವೊಂದು ಲೀಕ್ ಆಗಿದೆ. ಭಾಗ 2ರ ಬಗ್ಗೆ ಯಾವುದೇ ಸುಳಿವನ್ನು ತಂಡ ಬಿಟ್ಟು ಕೊಟ್ಟಿರಲಿಲ್ಲ. ಸೆಟ್ನ ವಿಡಿಯೋ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾದಲ್ಲಿ ಹೀರೋ, ಸಾಮಾನ್ಯ ವ್ಯಕ್ತಿ ಆಗಿರುವ ಪುಷ್ಪರಾಜ್ ರಕ್ತ ಚಂದನದ ದಂಧೆಗೆ ಇಳಿಯುತ್ತಾನೆ. ಆ ಬಳಿಕ ಆತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಎರಡನೇ ಭಾಗದಲ್ಲಿ ಇದೇ ಕಥೆ ಹೈಲೈಟ್ ಆಗಲಿದೆ. ಇದರ ಜೊತೆ ರಕ್ತ ಚಂದನದ ಕಳ್ಳ ಸಾಗಣೆ ಕಥೆ ಮತ್ತಷ್ಟು ಹೈಲೈಟ್ ಆಗಲಿದೆ ಎನ್ನುವುದಕ್ಕೆ ಲೀಕ್ ಆಗಿರುವ ವಿಡಿಯೋದಲ್ಲಿ ಕಾಣಿಸುತ್ತಿರುವ ಟ್ರಕ್ ಗಳೇ ಸಾಕ್ಷಿ .
ರಕ್ತ ಚಂದನದ ದಂಧೆಯಲ್ಲಿ ಬೆಳೆದು ನಿಂತ ಮೇಲೆ ಸಿನಿಮಾದಲ್ಲಿ ಏನೆಲ್ಲಾ ತಿರುವು ಇರಲಿದೆ ಎಂಬುದನ್ನ ಪಾರ್ಟ್ 2ನಲ್ಲಿ ತೋರಿಸಲಾಗುತ್ತದೆ. ಪುಷ್ಪ 2 ಸಿನಿಮಾದ ಚಿತ್ರೀಕರಣ ಶುರುವಾದಗಿನಿಂದ ತಂಡದ ಕಡೆಯಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಸಿನಿಮಾ ಅದೆಷ್ಟರ ಮಟ್ಟಿಗೆ ಕಂಪ್ಲೀಟ್ ಆಗಿದೆ. ಯಾವಾಗ ಬೆಳ್ಳಿತೆರೆಯ ಮೇಲೆ ನೋಡಬಹುದು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಸದ್ಯ ಲೀಕ್ ಆಗಿರುವ ವಿಡಿಯೋ ನೋಡಿ ಫ್ಯಾನ್ಸ್ ಖುಷಿ ಕೊಟ್ಟಿದ್ದಾರೆ.