ವಸು ಮೌನದಿಂದ ಇಡೀ ಮನೆ ಸ್ಮಶಾನ ಮೌನ ಆವರಿಸಿತ್ತು .ಇದ್ದಕ್ಕಿದ್ದಂತೆ ಹೊರಗೆ ಡಮಾರ್ ಸದ್ದಿನೊಂದಿಗೆ ಪಳ್ಳಂತ ಬೆಳಕು ಕಂಡಾಗ ಇವತ್ತು ದೀಪಾವಳಿ ! ಅನ್ನೋದು ನೆನಪಾಯ್ತು .ಹಾಗೆ ವಸುವಿನ ಮನದೊಳಗೂ ಬರೀ ದುಗುಡ ದುಃಖದಿಂದ ಸದ್ದು ಮಾಡುತ್ತಿತ್ತು . ಏನನ್ನೋ ನೆನದವಳಿಗೆ ಪಳಕ್ಕನೆ ಕಣ್ಣಿನ ಹನಿಗಳು ಜಾರಿ ಕೆಳಗುದುರಿದವು. ಚಕ್ಕನೆ ಎದ್ದು ಮಕ್ಕಳನ್ನು ಎಬ್ಬಿಸಿ,ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಬನ್ನಿ ಇವತ್ತು ದೀಪಾವಳಿ! ಎಂದು ಹೇಳಿ ಮಕ್ಕಳನ್ನು ರೆಡಿ ಮಾಡಿಸಿ ಪೋನ್ ಮಾಡಿದಳೆ ಅವಳಮ್ಮನೊಂದಿಗೆ ಜೊತೆ ಮಾಡಿ ಆಟೋ ಕರೆಸಿ ದೇವಸ್ಥಾನಕ್ಕೆ ಕಳುಹಿಸಿ ರೂಮಿಗೆ ಹೋದವಳೇ ದಡಾರ್ ಸದ್ದು ಮಾಡಿ ಬಾಗಿಲು ಹಾಕಿ ಹಾಗೆಯೇ ಮಂಚಕ್ಕೆ ಒರಗಿದಳು. ಕೋಣೆಯೊಳಗೆ ಗವ್ವೆನ್ನುವ ಕತ್ತಲು ಹಾಗೆ ಯೋಚಿಸುತ್ತಾ ಮಲಗಿದ್ದವಳಿಗೆ ಕಣ್ಣೀರು ದಿಂಬಿನೊಳಗೆ ತೋಯ್ದು ಹೋದವು.ಇದ್ದಕ್ಕಿದ್ದಂತೆ ಮಂಪರು ಹತ್ತಿತ್ತು.
ಮದುವೆ ಮಾತುಕತೆಗೆ ಬಂದಿದ್ರಂತೆ ಪಕ್ಕದ್ಮನೆ ಗಿರಿಜಕ್ಕ ಕೇಳಿದ್ದಕ್ಕೆ ವಸು ತಟಸ್ಥ ಮನಸ್ಸಿಂದ ಹಾ!.. ನಮ್ಮಾವ ಏನ್ಹೇಳ್ತಾರೋ ಗೊತ್ತಿಲ್ಲ ಎಂದಾಗ , ಆ ಮೂಗನ್ನ ಮದುವೆಯಾಗ್ತಿಯೇನೆ ? ರತಿಯಂತೆ ಮೈಕ್ ಮೈಕೈ ತುಂಬಿಕೊಂಡು ಚೆನ್ನಾಗಿದ್ದೀಯಾ ಯಾರಾದರೂ ತಗೊಂಡು ಹೋಗ್ತಾರೆ ಮಾಡು ಎಂದು ಹೇಳಿ ತೊಪ್ಪೆ ಮಂಕ್ರಿ ಹೊತ್ತು ಹೊರ್ಟ ಗಿರಿಜಕ್ಕೇನೆ ನೋಡ್ತಾ ಯೋಚ್ಸಿದ್ಲು .
ವಸು ಮನದಲ್ಲಿ ಬರೀ ಗೊಂದಲಗಳೇ ಗದ್ದಲ ಮಾಡ್ತಿತ್ತು . ಸುಮಾರು ವರ್ಷಗಳ ಹಿಂದೆಯಷ್ಟೇ ತನ್ನಪ್ಪನ ಗೋಳು ತಾಳಲಾರದೆ ಎಲ್ಲೋ ಮಹಾನಗರಕ್ಕೆ ಹೊರಟುಹೋಗಿದ್ದ ತನ್ನಮ್ಮ ಹಿಂದಿರುಗಿ ಒಮ್ಮೆಯೂ ಬಂದಿರಲಿಲ್ಲ .ತನ್ನಪ್ಪ ಮಹಾನ್ ಕುಡುಕ ಮಹಾಶಯ ! ಎಂಥದ್ದೋ ಹಾಸ್ಟಲ್ನಲ್ಲಿ ಹತ್ತನೇ ತರಗತಿ ಮುಗಿಸಿದ್ದ ವಸು ಸದ್ಯಕ್ಕೆ ಮನೆಗೆ ಬಂದು ಎರಡ್ ಮೂರು ವರ್ಷ ಆಗಿತ್ತು ತಂಗಿ ತಮ್ಮ ಇನ್ನೂ ಅಲ್ಲೇ ಇದ್ರು. ಕುಡುಕ ಅಪ್ಪ ಮನೆಗೆ ತಂದ್ರೆ- ತಂದ ಬಿಟ್ರೆ-ಬಿಟ್ಟ. ಅಲ್ಲಲ್ಲಿ ಕೆಲ್ಸ ಮಾಡ್ಕೊಂಡು ಅಮ್ಮನ ತವರು ಮನೆಯವರ ನೆರವಿನಿಂದ ಕಾಲ ಸವೆಸಿದ ವಸುಗೆ ಜೀವನವೇ ಸಾಕಾಗಿತ್ತು . ಅಚಾನಕ್ಕಾಗಿ ಬಂದ ಮದುವೆ ಯೋಗ ! ಯೋಗ್ಯತೆ ಅಳೆಯುತ್ತ ಕುಳಿತರೆ ಈಗಾಗ್ಲೇ ಮನೆತನದ ಕಥೆ ಕೇಳಿ! ಹೇಳ್ದೆ -ಕೇಳದೆ ಸುಮಾರು ಜನ ಸುದ್ದಿಗೂ ಮಾತಾಡಿರ್ಲಿಲ್ಲ.

ಹಾಳಾದ ಹಣೆಬರಹ! ಅಂದುಕೊಳ್ಳುತ್ತಿದ್ದವಳಿಗೆ ಈಗ ಒಳ್ಳೆ ಮನೆತನದ ಹುಡುಗ ಕಟ್ಟುಮಸ್ತಾಗಿದ್ದ ಬೆಳ್ಳಗೆ ತಿಳಿ ಚಂದಿರನಂತಿದ್ದ ಆದ್ರೆ ಯಾವ ದ್ರೋಹಕ್ಕೋ ಏನೋ ಮಾತು ಬರ್ತಿರ್ಲಿಲ್ಲ ಕಿವೀನೂ ಕೇಳ್ತಿರಲಿಲ್ಲ ; ಆದ್ರೆ ಖಂಡಿತ ಸುಂದರವಾಗಿದ್ದ ಹುಡುಗನನ್ನು ನೋಡಿ ವಸು ಒಪ್ಪಿದ್ಲು.ಅಂತೂ ಇಂತೂ ತಕ್ಕಮಟ್ಟಿಗಿನ ಮನೆತನ ಸಿಕ್ಕಿದೆ. ಜೀವನ ಕಟ್ಕೊಂಡು ಹೋದ್ರಾಯ್ತು ಅಂತ ಯೋಚಿಸಿದ್ಲು, ಅದೇ ವರ್ಷ ದೀವಿಗೆ ತಿಂಗಳಲ್ಲೆ ಅಮ್ಮನ ತವರು ಮನೆಯವರ ನೆರವಿನಿಂದ ಸುಮಾರಾಗಿ ಮದ್ವೆನೂ ಆಗಿತ್ತು .ಅಪ್ಪನೂ ಬಂದು ಅಕ್ಕಿಕಾಳೆಸೆದು ಕೈತೊಳಕೊಂಡು ಹೋಗಿದ್ದ.
ಹೊಸದಾಗಿ ಹೋದ ಮನೆಯಲ್ಲಿ ಎಂದೋ ತೀರಿಹೋಗಿದ್ದ ಗಂಡನ ನೆನಪಲ್ಲೇ ಕಷ್ಟಪಟ್ಟು ಸಾಕಿದ ಮೂಗ ಮಗನೊಂದಿಗಿದ್ದ ಪಾತಮ್ಮನ ಮನೆ ಸೇರಿದ್ಲು ವಸು. ಆಗಿನ ಕಾಲಕ್ಕೆ ಸುಮಾರಾದ ಕೈಯಂಚಿನ ಮನೆ. ಚಿಕ್ಕದಾಗಿ ಚೊಕ್ಕದಾಗಿ ನೆಮ್ಮದಿಯಾಗಿದ್ದ ಮನೆ ಸೇರಿದ್ಲು ವಸು .ತನ್ನ ಮೂಕ ಮಗನ ವರಿಸಿದ್ದಕ್ಕೆ ವಸು ಮೇಲಿನ ಅನುಕಂಪ ಪಾತಮ್ಮಗೆ ಅತಿಯಾದ ನಂಬಿಕೆ ನೆ ಮೂಡಿಸಿತ್ತು . ವಸು ಕೂಡ ತನ್ನ ಅತ್ತೆ ಮನೆಯಲ್ಲಿ ನೆಮ್ಮದಿಯಾಗಿ ತನ್ನ ಗಂಡನ ಜೊತೆ ಸಂತಸವಾಗೇ ಇದ್ದವರಿಗೆ ಒಂದೆರಡು ವರ್ಷದ ನಂತರ 1ಗಂಡು ಮಗು ಸಹ ಆಗಿತ್ತು .ಪಾತಮ್ಮ ಗೆ ಎಲ್ಲಿಲ್ಲದ ಖುಷಿ ಇದ್ದ-ಬದ್ದ ದೇವರುಗಳೆಲ್ಲಾ ಮಾಡಿದ್ಲು. ತನ್ನ ವಂಶದ ಕುಡಿಯನ್ನೆ ಕಾಣಿಕೆ ನೀಡಿದ್ದ ವಸು! ಪಾತಮ್ಮಂಗೆ ದೇವತೆಯಾಗೆ ಕಂಡಿದ್ಲು . ಈ ಮಧ್ಯೆ ತನ್ನಪ್ಪ ಕುಡ್ದು ಕುಡ್ದು ಹೊತ್ತಿಗ್ ಹೊತ್ತಿಗೆ ಊಟ ಇಲ್ದೆ ಒಂದಿನ ಪರಂಧಾಮ ಸೇರಿದ್ದ. ವಸು ಮನೆಯವರೇ ಶ್ರದ್ಧಾ ಮಾಡಿ ಮನೆಸೇರಿದ್ರು. ತವರಿಲ್ಲದ ವಸುಗೆ ತಾನೆ ತಾಯಾಗಿ ಬಾಣಂತನ ಕೂಡ ಮಾಡಿದ್ಲು .
ಹಾಗೆ ಒಂದಷ್ಟು ತಿಂಗಳು ಕಳಿತಿದ್ದಂಗೆ ಹೊಲ ಗದ್ದೆ ಕೆಲಸಗಳಿಗೆ ಪಾತಮ್ಮ ಅವರ ಮಗ ಹೋಗಿ ಬರ್ದಿದ್ರೂ ಹೀಗೆ ಜೀವನ ಸಾಗೋವಾಗ ಹಾಗೆ ಒಮ್ಮೆ ದೂರದೂರಿನಿಂದ ಪಾತಮ್ಮಳ ತಮ್ಮ ಮತ್ತು ಅವನ ಜೊತೆಗಾರರು ಬಂದಾಗ ವಸು ಮತ್ತು ಪಾತಮ್ಮ ಉಪಚಾರ ಮಾಡಿ ಕಲ್ಸಿದ್ರೂ. ಹಾಗೆ ತನ್ನ ತಮ್ಮ ಹಬ್ಬಕ್ಕೆ ಆಹ್ವಾನ ನೀಡಿದ್ದರಿಂದ ಪಾತಮ್ಮನ ಇಡೀ ಪರಿವಾರ ಊರಿಗ್ ಹೋಗಿತ್ತು . ಹಬ್ಬದಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ ವಸುಗೆ ಯಾರದ್ದೋ ದೃಷ್ಟಿ ತನ್ನ ಮೇಲೆ ಸುಳಿದಾಡಿದ ಹಾಗಾಗ್ತಿತ್ತು . ಗಂಡನೂ ಜೊತೆಲಿದಿದ್ರಿಂದ ವಸುಗೆ ಭಯ ಅನ್ನಿಸ್ಲಿಲ್ಲ.ಕಡೆಗೆ ಹಬ್ಬ ಮುಗ್ಸಿದ್ಮೇಲೆ ತಮ್ಮೂರಿಗೆ ಹೋಗಿದ್ರು.
ಈಚೆಗೆ ಒಂದಿನ ವಸು ಮುಸ್ಸಂಜೆ ಆಗಿದ್ರಿಂದ ದೇವರ ಮುಂದೆ ದೀಪ ಹಚ್ಚಿ ಅಡುಗೆ ಮನೆ ಸೇರಿದ್ದಳು ಯಾರೋ ಹೊರಗಿನಿಂದ ಕೂಗಿದ ಹಾಗಾಯಿತು ಯಾರೆಂದು ನೋಡಲು ಹೊರ ಹೋದವಳಿಗೆ ಒಬ್ಬ ಯುವಕ ನಿಂತಿದ್ದು ಕಾಣಿಸ್ತು.ಹಾಗೆ ಅವ ಪರಿಚಯ ಇದ್ದಂತೆನಿಸಿ ಒಳಗೆ ಕರೆದು ಕುರಿಸಿ ಪಕ್ಕದ ಮನೆ ಹುಡುಗ್ರಿಗೆ ತನ್ನತ್ತೆ ಕರೆದು ಬರುವಂತೆ ಹೇಳಿ ಬಂದವರನ್ನು ಆತ್ಮೀಯವಾಗೇ ಮಾತಾಡಿಸಿ . ಕಾಫಿಗಿಡಲು ಒಳ ಹೋದಳು ವಸು. ವಸಿ ಹೊತ್ತೊದ್ಮೇಲೆ ಪಾತಮ್ಮ ಕೂಡ ಮಗನೊಂದಿಗೆ ಬಂದ್ಲು, ಮನೆಗೆ ಬಂದಿದ್ದ ತನ್ನೂರಿನ ಸಂಬಂಧಿ ಜೊತೆ ನಗ್-ನಗ್ತಾ ಮಾತಿಗಿಳಿದ್ರು ಪಾತಮ್ಮ. ಹಾಗೆ ಮಾತಾಡುತ್ತಾ ವಿಚಾರಿಸಿದಾಗ ಯಾವುದೋ ಕೆಲಸಕ್ಕೆ ಹೀಗೆ ಬಂದಿದ್ದ ಅವನು ಕತ್ತಾಲಾಗಿದ್ರಿಂದ ಇವರ ಮನೆಗೆ ಬಂದಿದ್ದ. ಕೊಂಚ ಸಮಯದ ನಂತ್ರ ವಸು ಕಾಫಿ ಕೊಟ್ಟಳು. ಪಾತಮ್ಮ ಕೂಡ ಕಾಫಿ ಕುಡ್ದು ಎಲ್ಲರಿಗೂ ಅಡ್ಗೆ ಮಾಡಕೆ ಹೇಳಿದ್ರು , ವಸು ಎಲ್ಲರಿಗೂ ಅಡುಗೆ ಮಾಡಿ ಬಡಿಸಿದ್ಲು ಎಲ್ರೂ ಉಂಡೆದ್ದ ಮೇಲೆ ವಸು ಕೂಡ ಊಟ ಮಾಡಿ ಬಂದಿದ್ದ ಸಂಬಂಧಿಗೆ ಮಲಗಲು ಹಾಸಿಗೆ ಹಾಕ್ತಿದ್ದ ಅವಳಿಗೆ ಅವನ ನೋಟವೆ ಕಹಿ; ಎನಿಸಿತ್ತು. ಸಿಡುಕಿನಿಂದಲೇ ಕೋಣೆಗೆ ಹೋದ ವಸು ತನ್ನ ಗಂಡನ ಮುಖ ನೋಡಿ ನಾಚಿದ್ಲು ಯಂತ ಸಂದರ ತನ್ನ ಗಂಡ! ಶ್ವೇತ ವರ್ಣದ ಮುಖದಲ್ಲಿ ತುಸುವು ಕಾಣದ ಮಂಕು. ಮುಖ ಕ್ಕೊಪ್ಪುವ ಹಾಗಿದ್ದ ಕಪ್ಪನೆ ಮೀಸೆ , ಕಟ್ಟುಮಸ್ತಿನ ನಿಲುವು ಮುಗ್ದ ನೋಟ ಚಂದದ ಮನಸ್ಸು. ಒಮ್ಮೆಯೂ ವಸುಗೆ ನೋವಾಗೋ ಹಾಗೆ ನಡ್ಕೊಂಡಿರ್ಲಿಲ್ಲ. ತನ್ನ ಗಂಡನ ಮಾಸದ ನಗು ನೋಡಿ ವಸು ಕೊಂಚ ನಿರಳತೆಯಿಂದ ಮಲ್ಗಿದ್ಲು. ಬೆಳ್ಳಗೆ ಹೊತ್ತಿನಂತೆ ಹೊರಟ ಸಂಬಂಧಿಗೆ ಮನದಲ್ಲಿ ಅಳುಕಿದ್ರೂ ನಗುಮೊಗದಿಂದಲೇ ಕಳುಹಿದ್ದ ವಸು ಇನ್ನೊಮ್ಮೆ ಇತ್ತ ಬರ್ಬೇಡಪ್ಪ ಅಂತ ಮನದಲ್ಲಿ ಆಶಿಸಿದ್ಲು.

ಹೀಗೆ ಒಂದೆರಡು ಸಲ ಪಾತಮ್ಮನ ತಮ್ಮನೊಂದಿಗೆ ಮನೆಗೆ ಬಂದಿದ್ದ ಆ ಯುವಕ ಪ್ರತಿ ಸಲ ಬಂದಾಗಲು ಪಟಪಟ ಮಾತಿನಿಂದ ಎಲ್ಲರ ಗಮನ ಸೆಳಿತಿದ್ದ ,ನಗಿಸ್ತಿದ್ದ , ಮಾತುಗಳ ಮಹಾಪುರಾಣನೇ ಕುಯ್ದು ಎಲ್ಲರ ಚಿತ್ತ ತನ್ನತ್ತ ಸೆಳಿತಿದ್ದ ಒಮ್ಮೊಮ್ಮೆ ವಸು ಕೂಡ ಅವನ ಮಾತುಗಳಿಗೆ ಮರುಳಾಗಿ ಅಲ್ಲೆ ನಿಲ್ಲ್ತಿದ್ಲು.ಹೀಗೆ ಹಾಗೊಮ್ಮೆ ಇಗೊಮ್ಮೆ ಬಂದು ವಸು ಮನದಲ್ಲಿ ಚಿಟ್ಟೆ ಹಾರ್ಸಿ ಹೋಗ್ತಿದ್ದ.
ಅವತ್ತು ತನ್ನತ್ತೆ ಯಾರದ್ದೋ ಮದುವೆಗೆಂದು ಊರಿಗ್ ಹೋಗಿದ್ರು . ವಸು ಅಷ್ಟಾಗಿ ಮದುವೆ -ಮುಂಜಿ ಹೋಗ್ತಾ ಇರ್ಲಿಲ್ಲ ಅದ್ರಿಂದ ವಸು ಮತ್ತು ಅವಳ ಗಂಡ ಮನೆಲೇ ಇದ್ರು . ಸಂಜೆ ಸುಮಾರು 6-7 ರ ಸಮಯ ವಸು ಅಡುಗೆ ಗೆ ಬೇಳೆ ತರಲು ತನ್ನ ಗಂಡನನ್ನು ಊರೋಳಗಿದ್ದ ಅಂಗಡಿ ಕಲ್ಸಿ ಸಂದೆಲೇ ಮಗುಗೆ ಸ್ವಲ್ಲ ಅನ್ನ ತಿನ್ಸಿ ಮಲ್ಗಿಸಿದ್ರಿಂದ ಬೇಗ ಅಡ್ಗೆ ಮಾಡಿ ತಿಂದು ಮಲ್ಗೋಣ ಅಂತೇಳಿ ಅಡುಗೆಕೋಣೆ ಸೇರಿದ್ಲೂ . ಅನ್ನಕಿಟ್ಟು ಎದ್ದ ವಸು ಬೆರಕೆಸೊಪ್ಪು ಹಾಕಿ ಬೇಳೆ ಉಪ್ಸಾರು ಮಾಡೋಣ ಅಂತ ಒಲೆ ಮೇಲೆ ನೀರಿಟ್ಟು ಬೇಳೆ ತರೋದ್ರೊಳಗೆ ಉಪ್ಸಾರ್ ಕಾರ ಇದ್ಯ ಅಂತ ಕಾರದ ಕಂಟ ಹುಡುಕ್ತಿದ್ಲು , ಹಾಗೆ ಮಣ್ಣಿನ ಗೋಡೆಯೊಳಗಿದ್ದ ಗೂಡೊಳಗೆ ಇಟ್ಟಿದ್ ನೆನ್ಪಾಗಿ ಕಾರದ ಕಂಟಕ್ಕೆ ಕೈಇಟ್ಟಿದ್ದ ವಸುಗೆ ಹಿಂದೆ ಹಿಂದ ಬಂದು ಸೊಂಟ ಬಳಸಿದ್ದ ಯಾರದ್ದೊ ತಣ್ಣಾನೆಯ ಸ್ವರ್ಶಕ್ಕೆ ಬೆಚ್ಚಿದ್ಲು . ತನ್ನ ಗಂಡ ಒಮ್ಮೆಯೂ ಹಾಗೆ ಮಾಡಿದ್ದ ನೆನ್ಪಿರದ ವಸು ಕೊಂಚ ಹೆದರಿಯೇ ಹಿಂದಕ್ಕೆ ತಿರುಗಿದಳು , ತಟ್ಟನೆ ಬೆಚ್ಚಿದ ಅವಳು ಹಿಂದೆ ಗೋಡೆಗೊರಗಿದಳು. ಹಾಗೆ ಮುಂದೆ ಬಂದ ಅದೇ ಮಾತುಗಾರ ಯುವಕ ಅವಳತ್ತ ನಸು ನಗುತ್ತ ಮಂದಹಾಸ ಬೀರಿದ್ದ. ಕೆಳಗೆ ಜಾರಿದ ವಸು ಅವನ ಹಿಡಿತದಿಂದ ಬಿಡಿಸಿಕೊಂಡು ನಡುಮನೆಗೆ ಬಂದಳು. ಅಷ್ಟಾರಲ್ಲೆ ತನ್ನ ಗಂಡ ಬರುವ ಸದ್ದಾಗಿ ಸ್ವಲ್ಪ ಭಯದಲ್ಲೇ ನಡುಗಿದ ವಸು ಹಿಂದೆ ಸರಿದು ಕೋಣೆಯೊಳಗೆ ಓಡಿದ್ಲು. ಕೆಲಹೊತ್ತಿನ ನಂತರ ವಸು ಗಂಡ ಮೂಕ ಭಾಷೆಲೀ ವಸು ಜೊತೆ ಮಾತಾಡ್ತಿದ್ದ ವಿಷಯ ನೆಂಟರು ಮನೆಗ್ ಬಂದಿದ್ದಾರೆ ಅವರನ್ನು ಮಾತಾಡ್ಸು ಬಾ..ಽ ಊಟ ಮಾಡಿ ಬಡ್ಸು ಎಂದು ತನ್ನ ಮೂಕ ಭಾಷೆಯಲ್ಲೆ ತಿಳಿಸಿದ್ದ. ವಸು ಸ್ವಲ್ವ ಸುಧಾರಿಸಿದವಳಂತೆ ಬಂದು ಅಡ್ಗೆ ಮಾಡಿ ಊಟಕ್ಕೂ ಕೊಟ್ಟಿದ್ಲು. ಅದನ್ನೆ ಕಾಯ್ದಿದ್ದ ಆ ಯುವಕ ವಸುಳೊಂದಿಗೆ ಆತ್ಮೀಯವಾಗಿ ಮಾತಾಡ ತೊಡಗಿದ. ಪ್ರತಿ ಮಾತಿನಲ್ಲೂ ವಸುಳನ್ನು ಹೊಗಳಿಯೇ ತೀರಿದ್ದ. ಅವಳ ಅಂದ-ಚಂದಗಳನ್ನೆ ವರ್ಣಿಸಿದ್ದ ಅವನು ವಸುಳನ್ನು ದೇವತೆಗೆ ಹೋಲಿಸಿದ್ದ. ಅವನ ಪ್ರಬುದ್ಧ ಮಾತುಗಳಿಗೆ ವಸು ಒಳಗೊಳಗೆ ಕೊಂಚ ನಾಚಿದ್ರೂ. ಹೊರ ತೋರದ ನಿರ್ಲಿಪ್ತ ಭಾವದಲ್ಲೇ ವತ್ತಾರೆಯಾಯ್ತಲೇ ಬೀಳ್ಗೊಟ್ಟಿದ್ದಳು.
ಇಚೀಚೆಗೆ ವಸು ಕನ್ನಡಿ ಮುಂದೆ ನಿಂತು ತನ್ನನ್ನೇ ತಾನು ನೋಡಿ ನಾಚುತಿದ್ದಳು. ಹೌದಲ್ಲ ನಾನೆಷ್ಟು ಸುಂದರವಾಗಿದ್ದೀನಿ. ತಿಳಿ ವರ್ಣದ ದುಂಡಾಗಿನ ಕೆನ್ನೆಗಳು, ಕಾಮನಬಿಲ್ಲಿನಂತೆ ಬಾಗಿದ್ದ ಕಣ್ಣುಬ್ಬುಗಳು, ತುಸು ಕೆಂಪೇರಿದ್ದ ತುಟಿಗಳು, ನಡುವಿನಂಚಿಗೂ ಮೀರಿ ಬೆಳೆದಿದ್ದ ಕಪ್ಪಾಗಿನ ಜಡೆ ತುಸು ಗುಂಗುರು ಗುಂಗುರಾಗಿ ರಾಶಿಯಂತೆ ಕಾಣ್ತಿತ್ತು ಇವೆಲ್ಲವೂ ಅವಳ ಯವ್ವನವನ್ನು ಕೊಂಚ ಹೆಚ್ಚಿಸಿದ್ದವು… ಒಂದು ಮಗುವಿನ ತಾಯಿಯಾಗಿದ್ರೂ ವಸು ಯುವತಿಯಾಗೇ ಕಾಣ್ತಿದ್ಲು, ಸದಾ ಮನೆ ತುಂಬೆಲ್ಲ ನಗ್ ನಗ್ತಾ ಹೋಡಾಡಿಕೊಂಡಿದ್ದ ವಸು ಇತ್ತೀಚಿಗೆ ಕೋಣೆಯಲಿದ್ದ ಕನ್ನಡಿ ಮುಂದೆಯೇ ಸ್ವಲ್ವ ಹೆಚ್ಚಿಗೆ ಕಾಲ ಕಳೆಯತೊಡಗಿದ್ಲು. ಪಾತಮ್ಮ ಕೂಡ ಇದ್ದನ್ನು ಕಂಡು ರೇಗಿದ್ರೂ .
ಒಂದಷ್ಟು ತಿಂಗಳು ಆ ತರುಣ ಊರ್ಕಡೆ ಬಂದಿರ್ಲಿಲ್ಲ .ವಸು ಮನಸ್ಸು ಅವನನ್ನ ನೆನಪಿಸಿದ್ರೂ ಮರೆತಂತೆ ಇದ್ಲು. ಕಡೆಗೆ ಊರಬ್ಬ ಹತ್ತಿರಾ ಹಾಗ್ತಿತ್ತು ಪಾತಮ್ಮ ತಮ್ಮೂರಿನ ಎಲ್ಲ ನೆಂಟರಿಷ್ಟರಿಗೂ ಆಹ್ವಾನ ನೀಡಿದ್ಲು.ಆ ತರುಣನಿಗೂ ಆಹ್ವಾನ ಸಿಕ್ಕಿತ್ತು. ಹಬ್ಬಕ್ಕೆ ಆ ಯುವಕ ಕೂಡ ಬಂದಿದ್ದ ಹಬ್ಬದಲ್ಲಿ ವಸು ಸ್ವಲ್ವ ಹೆಚ್ಚಾಗೆ ಅಲಂಕಾರ ಮಾಡ್ಕೊಂಡಿದ್ದರಿಂದ ಅಪ್ಸರೆ ತರನೇ ಕಾಣ್ತಿದ್ಲು. ಹಬ್ಬ ಅಂದಮೇಲೆ ಕೇಳ್ಬೇಕಾ ಹೋಡಾಟ ಜಾಸ್ತಿನೇ. ಆ ಯುವಕನಿಗಂತೂ ವಸು ಸೌಂದರ್ಯ ಆಹ್ಲಾದಿಸೋದೆ ಹಬ್ಬ ಆಗೋಯ್ತು. ಆಗಾಗ ಅವರಿಬ್ಬರ ಕಣ್ಣು ಕಲಿತಿತ್ತು ಮುಗುಳುನಗೆಯಲ್ಲಿ ಮರೆಯಾಗ್ತಿತ್ತು. ಹಬ್ಬದ ಕೊನೆದಿನ ಮನೆಲಿದ್ದ ಎಲ್ಲರೂ ದೇವರ ಮೆರವಣಿಗೆ ನೋಡಲು ಹೋಗಿದ್ರೂ ಆ ಯುವಕ ಕೂಡ ಹೋಗಿದ್ದ ವಸು ಒಬ್ಲೆ ಮನೆಲೀ ಆರತಿ ಸಿದ್ದ ಮಾಡ್ಕೊತಿದ್ಲೂ. ಇದ್ದಂಕ್ಕಿಂದಂತೆ ಆ ತರುಣ ವಾಪಸ್ ಬಂದ ವಸುಗೆ ಕೊಂಚ ಭಯವಾದ್ರೂ ಎನಾದ್ರೂ ಬೇಕಿತ್ತಾ ? ಕೇಳಿದ್ಲೂ ವಸು. ತರುಣ ಚೂರು ಹಿಂದೆ ನಿಂತಿದ್ದೋನು ಮುಂದೆ ಬಂದೋನೆ ಮೊಣಕಾಲೂರಿ ನಿಂತು ಸಿನಿಮೀಯಾ ರೀತಿಯಲ್ಲಿ ನೀವು ನನ್ನ ಮದ್ವೆ ಆಗ್ತೀರಾ ನಿಮ್ನ ರಾಣಿ ತರ ನೋಡ್ಕೋತೀನಿ. ನಿಮ್ಮಂತ ಚೆಲುವೆಗೆ ಇದು ಸರಿಹೊಂದೊ ಮನೆ ಅಲ್ಲ ನಾವಿಬ್ಬರೂ ಪಟ್ಟಣಕ್ಕೆ ಹೋಗೋಣ ನಂಗಂತೂ ಒಳ್ಳೆ ಕೆಲ್ಸ ಇದೆ .ನೀವೇ ರಾಣಿ ನಾನೇ ರಾಜ ಆಯಾಗಿರ್ಬಹುದು . ಆ ಯುವಕ ಕೂಡ ಇದಾಗಲೇ ಮದುವೆಯಾಗಿದ್ದ ವಿಷಯ ತಿಳಿಸಿ ಅವಳೊಂದಿಗಿನ ಸಂಬಂಧಕ್ಕೆ ವಸುಳ ಯೋಚನೆಯಲ್ಲೆ ಪೂರ್ಣವಿರಾಮ ಇಟ್ಟ ಕತೆಕೂಡ ತೋಡಿಕೊಂಡಿದ್ದ. ಅವನು ವಸು ಇಲ್ಲದೆ ಸಾಯುವ ಯೋಚನೆ ಮಾಡಿದ್ದಾಗಿಯೂ ಕೂಡ ತಿಳಿಸಿ. ಯೋಚ್ನೆ ಮಾಡು ಅಂತೇಲಿ ಬೆನ್ತಟ್ಟಿ ಹೋಗಿದ್ದ . ಅದಾದ ಮೂರೇ ದಿನಗಳಲ್ಲಿ ಯಾರಿಗೂ ಹೇಳದೆ ಎರಡು ವರುಷದ ಮಗುವನ್ನು ಮರೆತು ಪಟ್ಟಣದ ಬಸ್ ಹತ್ತಿ ಹೊಂಟಿದ್ದ ವಸು ಮತ್ತೆ ವಾಪಸ್ ಆ ಊರಿಗೆ ಹೆಜ್ಜೆ ಇಟ್ಟಿರ್ಲಿಲ್ಲ. ಮತ್ತೆ ಅದೇ ತರುಣನನ್ನೆ ಮರು ಮದ್ವೆ ಆದ್ಲು. ಅದೇ ದೊಡ್ಡ ಸುದ್ದಿಯಾಗಿ ಸಂಜೆ ಹೊತ್ತಿಗೆ ಊರವರಿಗೆ ಬಜ್ಜಿಸಾಮೇತ ಮಸಾಲೆ ಸುದ್ದಿ ಆಯ್ತು. ಅವಳ್ಗೆನ್ ಬಂದಿದ್ದು ಆ ಎಳೆ ಮಗಿನ್ ಬಿಟ್ಟೊಗವ್ಳಲ್ಲ,ಅವಳ್ ಮೊಕಮುಚ್ಚ ಅವಳ್ ಕರುಳೇನ್ ಕಲ್ಲಾಗದಾ ಅಂತ ಮಾತಾಡ್ಕೊಂಡ್ರು. ಅಮೇಲೆ ಒಂದಷ್ಟು ದಿನ ಕಳೆದಂಗೆ ಎಲ್ಲರೂ ವಸುನೇ ಮರ್ತೆಬಿಟ್ರು.
ಹೋದ ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು ವಸುವಿನ ಪ್ರತಿ ದಿನ ಸೊಗಸು ಅನ್ನಿಸ್ತಿತ್ತು .ಆ ತರುಣ ಕೂಡ ಅವಳನ್ನ ರಾಣಿ ತರನೇ ನೋಡ್ಕೋತಿದ್ದ. ಅವನು ಕೂಡ ಅವನ ಮೊದಲ ಹೆಂಡತಿಯನ್ನು ಇವಳಿಗಾಗಿಯೇ ಬಿಟ್ಟಿದ್ದ . ಅವನಿಂದ 2 ಮಕ್ಕಳು ಕೂಡ ಪಡ್ಕೊಂಡು ಸುಖವಾಗಿದ್ದ ಅವಳು. ತೀರ ಶೋಕಿ ಬದುಕು ಬದುಕತೊಡಗಿದಳು. ಅವಳ ಮೊದಲ ಮಗುನೇ ಅವಳ ಮೊದಲ ಗಂಡನ ಮನೆ ಬೆಳಕಾಗಿತ್ತು ಕೇಳಿ ಕೊಂಚ ನೆಮ್ಮದಿಯಾಗೇ ಇದ್ದಳು .ಆದ್ರೆ ಅವಳ ಮೊದಲ ಗಂಡನ ಮೂಕ ಮನಸ್ಸು ವಸು ಮಾಡಿದ ಮೋಸಕ್ಕೆ ಬೇಸತ್ತು ನೋವಿನ ನೆಪಕ್ಕೆ ಸಾರಾಯಿ ಮೊರೆಹೋಗಿ ಮನಸೋ ಇಚ್ಚೆ ಸಾರಾಯಿ ದಾಸನಾಗಿದ್ದ . ಪಾತಮ್ಮ ಇವೆಲ್ಲದರಿಂದ ಕೊರಗಿ ಕೊರಗಿ ಬಡವಾಗಿ ವಸು ಮಾಡಿದ ಮೋಸಕ್ಕೆ ಪ್ರತಿ ದಿನ ಶಾಪವಿಡುತಿದ್ದಳು .

ಆನಂದವಾಗಿದ್ದ ವಸು ಬಾಳಲ್ಲಿ ಅಚಾನಕ್ ಘಟನೆಯೊಂದು ಸಂಭವಿಸಿತು. ಅವಳ 5 ವರ್ಷದ ಮಗನಿಗೆ ಜ್ವರ ಬಂದದ್ದೆ ಎಣೆಯಾಗಿ ಅದು ಒಳ ಜ್ವರದಂತೆ ವಾರವೆಲ್ಲ ತೀವ್ರವಾಗಿ ಮಗುವಿನ ಎರಡು ಕಣ್ಣುಗಳ ಮಂಕಾಗಿ ಯಾವ ಚಿಕಿತ್ಸೆಯು ಫಲಾಕಾರಿಯಾಗದೆ ಮಗುವಿನ ಎರಡು ಕಣ್ಣುಗಳು ಶಾಶ್ವತ ಕುರುಡಾಗಿ ಹೋದವು . ಇದಾರಿಂದ ವಸು ಕುಸಿದು ಹೋದಳು. ಇವೆಲ್ಲದರ ನಡುವೆ ವಸುವಿನ ಬದುಕಲ್ಲಿ ತೀರ ಇತ್ತೀಚಿಗೆ ಅವನ ಎರಡನೇ ಗಂಡ ತನ್ನ ವರಸೆ ತೋರಿದ್ದ . ಸುಖಸುಮ್ಮನೆ ಕ್ಯಾತೆ ತೆಗಿತಿದ್ದ ಅವನು ಬೇಕಾಬಿಟ್ಟಿ ಕುಡಿದು ಮನೆಲೆಲ್ಲ ರಂಪ ಮಾಡಿ ಸಿಕ್ಕ ಸಿಕ್ಕಿದ್ರಲೆಲ್ಲ ಹೊಡಿತಿದ್ದ .ವಸು ಬಾಳು ಪ್ರತಿದಿನ ನರಕ ಆಗ್ತಿತ್ತು. ಇಚೀಚೆಗೆ ಅವನು ಅವನ ಮೊದಲ ಹೆಂಡತಿ ಜೊತೆ ಇರೋದು ಗೊತ್ತಾಗಿ ಗೋಳಾಡಿದ್ದ ವಸು ಇಂದು ರಂಪಾನೇ ಮಾಡಿದ್ಲು. ಇದರಿಂದ ಸಿಟ್ಟಾದವ ಡಿವರ್ಸ್ ನೋಟಿಸ್ ಕೊಟ್ಟು ಅವಳ ಮತ್ತು ಅವಳ ಮಕ್ಕಳ ಅಷ್ಟು ದಿನದ ಸಂಬಂಧಕ್ಕೆ ಕೊಳ್ಳಿ ಇಟ್ಟಿದ್ದ. ಇದರಿಂದ ಬಹುಪಾಲು ಬೀದಿಗೆ ಬಂದಿದ್ದ ವಸು ಮುಂದಿನ ಬದುಕು ಶೂನ್ಯವಾಗಿ ಕಾಣುತಿತ್ತು. ಹೊರಗೆ ಯಾರೋ ಪಟಾಕಿ ಹಚ್ಚಿದ್ದರಿಂದ ಸಿಡಿಮದ್ದಿನ ಸಿಡಿತಕ್ಕೆ ಬೆಚ್ಚಿದ ವಸು ಕಣ್ ಬಿಟ್ಟಳು ಸುತ್ತಲೂ ಗಾಡ ಕತ್ತಲು. ಹೊಟ್ಟೆಯೊಳಗೆ ಯಾವುದೋ ಸಂಕಟವೆನಿಸಿ ಮಲಗಿದ್ದ ಮಂಚದ ತುದಿ ಇಡಿದು ಮೇಲೆದ್ದಳು ಕತ್ತಲೆಯ ಕೋಣೆಯೊಳಗೆ ತನ್ನ ಮೊದಲ ಗಂಡ ನಿನಗಿದು ಹಾಗಬೇಕಾದ್ದದ್ದೆ ಎಂದು ಮೂದಲಿಸಿ ಹೇಳಿ ಜೋರಾಗಿ ನಕ್ಕಾಂತಾಯಿತು. ಅವಳ ಮೊದಲ ಪುಟ್ಟ ಮಗ ಬಂದು ಛಟೀರನೇ ಕೆನ್ನೆಗೆ ತಟ್ಟಿದಾಂತಾಯಿತು. ಭಯದಿ ನಡುಗಿದ ವಸುವಿಗೆ ಮನೋವ್ಯತೆ ಕಾಡತೊಡಗಿತು. ಕೊಂಚ ಸರಿದು ಮಂಚವೊರಗಿ ಕೂತವಳಿಗೆ ಇದು ಯಾರ ಶಾಪವೋ ಅಥವ ತಾನೇ ಮಾಡಿದ ಪಾಪವೋ ತಿಳಿಯದಾಯ್ತು . ಹಿಂದೆ ಇವಳು ಎರಡನೇ ಮದುಯಾದಾಗ ಅವನ ಮೊದಲ ಹೆಂಡತಿ ಎದೆಯೊಡೆದುಕೊಂಡು ಗೋಳಾಡಿ ಹಾಕಿದ್ದರ ಶಾಪವೋ ಅಥವ ಮೂಕಗಂಡನ, ಪುಟ್ಟ ಕಂದನ ಬಿಟ್ಟು ಬಂದ ಪಾಪವೋ! ಸರಿಯಾದ ಪ್ರಾಯಶ್ಚಿತ್ತವಾಗಿದೆ… ಹೃದಯ ಚಿದ್ರವಾದಂತೆ ಅನಿಸಿತು ಮುಂದೇನು ? ಯೋಚಿಸಿದವಳಿಗೆ ಇನ್ನಿಬ್ಬರು ಮಕ್ಕಳ ಯೋಚನೆಯಾಯ್ತು .ಪಟ್ಟಣ್ಣಕ್ಕೆ ಬಂದವಳಿಗೆ ಅವಳಮ್ಮ ಕೂಡ ಜೊತೆಯಾದವರು ಸಂಪರ್ಕದಲ್ಲೆ ಇದ್ದರು. ವಸು ಮನೆಯ ರಸ್ತೆಯ ಮನೆಯೊಂದರಲ್ಲೆ ಬಾಡಿಗೆಗೆ ಇದ್ದರು ಅವಳ ತಮ್ಮ ಮತ್ತು ತಂಗಿಯರೂ ಕೂಡ ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಅವಳಮ್ಮನ ಜೊತೆಯಲ್ಲೆ ಇದ್ದರು. ವಸುವಿನ ತಲೆ ಯೋಚಿಸಿದಂತೆಲ್ಲ ರಣ ರಣವಾಗಿ ಸಿಡಿತಿತ್ತು. ಮೇಲೆದ್ದವಳೇ ಮಲಗಿದ್ದ ಕೋಣೆ ಒಳಗಿನ ಫ್ಯಾನ್ ಕೊನೆಗೆ ಅವನೆ ಕೊಡಿಸಿದ್ದ ರೇಶ್ಮೆ ಸೀರೆ ಕಟ್ಟಿದ್ಲು. ಯಾವ ಸೌಂದರ್ಯದ ಜಂಬಕ್ಕೆ ತನ್ನ ಮೂಕ ಗಂಡನ ಬಿಟ್ಟು ಪುಟ್ಟ ಕಂದಮ್ಮ ನ ಬಿಟ್ಟು ಬಂದಿದ್ದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅವಳ ನೆಮ್ಮದಿಯ ಜೀವನ ಮತ್ತು ಮತ್ತೇರಿದ ಸೌಂದರ್ಯ ಬೀದಿ ಹೆಣ ಆಗಲು ಒದ್ದಾಡ್ತಿತ್ತು. ಪ್ಯಾನಿನ ಕೆಳಗೆ ನೇತಾಡುತಿದ್ದ ಕುಣಿಕೆಗೆ ತಲೆಯೊಡ್ಡಿದಳಿಗೆ ಕ್ಷಣ ಮಾತ್ರದಲ್ಲಿ ಎಲ್ಲವೂ ಕಣ್ಣ ಮುಂದೆ ಚಿತ್ರಪಟದಂತೆ ಸುಳಿಯಿತು. ಒಂದು ಕ್ಷಣ ತನ್ನ ಕುರುಡು ಮಗನ ಮುಖ ನೆನದವಳಿಗೆ ನಿಂತಿದ್ದ ಕಾಲುಗಳುಗಳು ತರ ತರನೇ ನಡುಕಹತ್ತಿತು. ಕುರ್ಚಿಯ ಕಾಲುಗಳು ಅಲ್ಲಾಡತೊಡಗಿದವು. ಮರುಕ್ಷಣವೇ ಕುಣಿಕೆಯಲ್ಲಿದ್ದ ಕತ್ತು ಹೊರತೆಗೆದು ಸಾವರಿಸಿಕೊಂಡು ಕೆಳಗಿಳಿದಳು. ಅಯ್ಯೋ ಮತ್ತೊಮ್ಮೆ ಎಂತ ಪಾಪ ಮಾಡಲು ಹೊರಟೇ. ಅಂದು ತನ್ನ ನೆಮ್ಮದಿಗೆ ಮೊದಲ ಮಗುವ ಬಿಟ್ಟು ಬಂದು, ಇಂದು ಸಾಯಿಸಲಾಗದ ದುಃಖಕ್ಕೆ ಸತ್ತು ಮತ್ತಿಬ್ಬರು ಮಕ್ಕಳನ್ನು ಬಿಕಾರಿ ಮಾಡಿ ಕಂಡವರ ಕಾಲಕಸಕ್ಕೆ ದೂಡುವುದೇ?
ವಸುವಿಗೆ ದುಃಖ ಉಮ್ಮಳಿಸಿ ಬಂತು. ಸಾದ್ಯವಾದಷ್ಟು ಜೋರಾಗಿ ಎದೆ ಬಡಿದುಕೊಂಡು ಅತ್ತಳು . ಸುಮಾರು ಹೊತ್ತೆ ಕಳೆದು ಹೋಯ್ತು . ತಸು ಸಮದಾನಗೊಂಡತೆ ಎದ್ದ ವಸು ಕಟ್ಟಿದ್ದ ನೇಣು ಕುಣಿಕೆಯನ್ನು ಕಿತ್ತು ಹೊರಗೆ ತಂದು
ಕಾಂಪೊಂಡ್ನಲ್ಲಿಟ್ಟು ಸೀಮೆಎಣ್ಣೆ ಸುರಿದು ಬೆಂಕಿಕೊಟ್ಟಳು. ಧಗ ಧಗ ಹೊತ್ತಿ ಉರಿಯಿತ್ತಿದ್ದ ಜ್ವಾಲೆಗೆ ಎದುರು ದೇವಾಸ್ಥಾನದಿಂದ ಹಿಂದುಗಿದ ಕುರುಡು ಮಗನ ಕಣ್ಣುಗಳೆರಡು ಮಿಂಚಿದಂತೆ ವಸುಗೆ ಭಾಷವಾಗಿತ್ತು. ಓಡಿಹೋಗಿ ಮಕ್ಕಳನ್ನು ತಬ್ಬಿ ಎದೆಗವಿಚಿಕೊಂಡಳು.