ಟಾಲಿವುಡ್ ನಲ್ಲಿ ಎಲ್ಲರೂ ತುಂಬಾ ಇಷ್ಟಪಡುವ ಜೋಡಿಗಳಲ್ಲಿ ಒಂದು ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ. ಇವರಿಬ್ಬರ ಜೋಡಿಯ ಸಿನಿಮಾಗಳು ತೆಲುಗು ಚಿತ್ರ ಪ್ರೇಮಿಗಳ ಫೇವರೆಟ್. ನಿಜ ಜೀವನದಲ್ಲಿ ಕೂಡ ಈ ಜೋಡಿ ಪ್ರೀತಿ ಮಾಡುತ್ತಿದ್ದಾರೆ, ಇಬ್ಬರ ಮದುವೆ ನಡೆಯುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಅನುಷ್ಕಾ ಜೋಡಿ ಬಗ್ಗೆ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇರುವ ವಿಷಯ. ಈ ಜೋಡಿ ಈ ವಿಚಾರದ ಬಗ್ಗೆ ಬೇರೆ ಬೇರೆ ಕಡೆ ಸ್ಪಷ್ಟನೆ ನೀಡಿದ್ದರೂ ಸಹ ಅಭಿಮಾನಿಗಳು ಮಾತ್ರ ತಮ್ಮ ನಿರೀಕ್ಷೆಯನ್ನು ಬಿಟ್ಟಿಲ್ಲ. ಅನುಷ್ಕಾ ಪ್ರಭಾಸ್ ಮದುವೆ ಇಂದಲ್ಲ ನಾಳೆ ನಡೆದೇ ನಡೆಯುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಇವರಿಬ್ಬರ ವಿಚಾರದ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಪ್ರಭಾಸ್ ಅನುಷ್ಕಾ ಜೋಡಿ ಜೊತೆಯಾಗಿ ನಟಿಸಿದ ಸಿನಿಮಾ ಮಿರ್ಚಿ. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಬಾಹುಬಲಿ 1 ಹಾಗೂ ಬಾಹುಬಲಿ 2 ಸಿನಿಮಾಗಳು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತೆರೆಕಂಡ ಬಾಹುಬಲಿ ಸಿನಿಮಾ ಇವತ್ತಿಗೂ ಎಲ್ಲರ ಫೇವರೆಟ್ ಸಿನಿಮಾ ಆಗಿದೆ. ಈ ಸಿನಿಮಾಗಾಗಿ ಅನುಷ್ಕಾ ಹಾಗೂ ಪ್ರಭಾಸ್ 4 ವರ್ಷಗಳ ಸಮಯ ಕೊಟ್ಟಿದ್ದರು. ಆ ಸಮಯಕ್ಕೆ ತಕ್ಕ ಪ್ರತಿಫಲವು ಸಿಕ್ಕಿತು. ಆದರೆ ಈ ಜೋಡಿಯ ಬಗ್ಗೆ ಸಿನಿಮಾ ವೇಳೆಯಲ್ಲೇ ಅನೇಕ ಸುದ್ದಿಗಳು ಕೇಳಿಬಂದಿದ್ದು. ಪ್ರಭಾಸ್ ಅನುಷ್ಕಾ ಪ್ರೀತಿ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದರ ಬಗ್ಗೆ ಕೆಲವು ಸ್ಪಷ್ಟನೆಗಳು ಸಿಕ್ಕಿದೆ.

ಪ್ರಭಾಸ್ ಅನುಷ್ಕಾ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು, ಸಿನಿಮಾ ಪ್ರೊಮೋಷನ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಾಗ, ಒಂದೇ ಬಣ್ಣದ ಡ್ರೆಸ್ ಗಳನ್ನು ಧರಿಸುವುದು, ಹೀಗೆ ಅನೇಕ ಕಾರಣಕ್ಕೆ ಪ್ರಭಾಸ್ ಮತ್ತು ಅನುಷ್ಕಾ ಜೋಡಿ ಎಲ್ಲರ ಫೇವರೆಟ್ ಆಗಿದ್ದರು. ಈಗಲೂ ಸಹ ಈ ಜೋಡಿ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್ ಕಡಿಮೆ ಆಗಿಲ್ಲ. ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಯಾವುದೋ ಕಾರಣಕ್ಕೆ ಇನ್ನು ಕೂಡ ಇಬ್ಬರು ಮದುವೆ ಆಗಿಲ್ಲ, ಆದಷ್ಟು ಬೇಗ ಮದುವೆ ಆಗುತ್ತಾರೆ ಎನ್ನುತ್ತಾರೆ ಫ್ಯಾನ್ಸ್. ಪ್ರಭಾಸ್ ಅನುಷ್ಕಾ ಮದುವೆ ಬಗ್ಗೆ ಅನೇಕ ಎಡಿಟ್ ಗಳನ್ನು ಫ್ಯಾನ್ಸ್ ಮಾಡಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಈ ವಿಚಾರದ ಬಗ್ಗೆ ಅಸಲಿ ಸುದ್ದಿ ಬೇರೆಯೇ ಇದೆ. ಇದು ಫ್ಯಾನ್ಸ್ ಗೆ ಬೇಸರ ತರಬಹುದು.

ಅನುಷ್ಕಾ ಶೆಟ್ಟಿ ಅವರ ಜೊತೆಗಿನ ರಿಲೇಶನ್ಷಿಪ್ ಬಗ್ಗೆ ಖುದ್ದು ಪ್ರಭಾಸ್ ಅವರು ಸಹ ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ, ಅದು ಬಿಟ್ಟು ತಮ್ಮ ನಡುವೆ ಇನ್ನೇನು ಇಲ್ಲ ಎಂದು ಪ್ರಭಾಸ್ ಅವರು ಸ್ಪಷ್ಟನೆ ಕೊಟ್ಟಿದ್ದರು. ಇದು ಈಗ ಕೊಟ್ಟ ಸ್ಪಷ್ಟನೆ ಅಲ್ಲ, ಬಹಳ ವರ್ಷಗಳ ಹಿಂದೆಯೇ ಪ್ರಭಾಸ್ ಅವರು ಸ್ಪಷ್ಟನೆ ಕೊಟ್ಟು, ತಾವು ಹಾಗೂ ಅನುಷ್ಕಾ ಡೇಟಿಂಗ್ ಮಾಡುತ್ತಿಲ್ಲ, ಪ್ರೀತಿ ಮಾಡುತ್ತಿಲ್ಲ ಎಂದು ಹೇಳಿದ್ದರು. ಆದರೆ ಇವರಿಬ್ಬರ ಪ್ರೀತಿ ಪ್ರೇಮದ ಸುದ್ದಿಗಳು ಅಂತೂ ಕಡಿಮೆ ಆಗಲಿಲ್ಲ. ಇವತ್ತಿಗೂ ಇಬ್ಬರ ಮದುವೆ ಯಾವಾಗ ಎನ್ನುವ ಕೆಲವು ನ್ಯೂಸ್ ವೈರಲ್ ಆಗುತ್ತಲೇ ಇರುತ್ತದೆ. ಆದರೆ ಇಬ್ಬರೂ ಕೂಡ ಈ ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ, ತಮ್ಮ ಕೆರಿಯರ್ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಇಬ್ಬರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಭಾಸ್ ಒಬ್ಬರೇ ಅಲ್ಲ, ಅನುಷ್ಕಾ ಶೆಟ್ಟಿ ಅವರು ಸಹ ಸ್ಪಷ್ಟನೆ ನೀಡಿದ್ದರು. ಒಂದು ಸಂದರ್ಶನದಲ್ಲಿ ತಮ್ಮ ಹಾಗೂ ಪ್ರಭಾಸ್ ಅವರ ಲವ್ ಬಗ್ಗೆ ಮದುವೆ ಬಗ್ಗೆ ಕೇಳಿದಾಗ ಮಾತನಾಡಿದ ಅನುಷ್ಕಾ ಶೆಟ್ಟಿ ಅವರು, ಆ ರೀತಿ ಏನಾದರು ಇದ್ದಿದ್ದರೆ ಇಷ್ಟು ವರ್ಷಗಳ ಕಾಲ ಕಾಯುವ ಅವಶ್ಯಕತೆ ಇರಲಿಲ್ಲ. ನಮ್ಮ ನಡುವೆ ಅಂಥದ್ದೇನು ಇಲ್ಲ, ಪ್ರಭಾಸ್ ನನಗೆ ಆಪ್ತ ಗೆಳೆಯ ಅಷ್ಟೇ ಎಂದು ಅನುಷ್ಕಾ ಶೆಟ್ಟಿ ಅವರು ಸಹ ಸ್ಪಷ್ಟನೆ ಕೊಟ್ಟಿದ್ದರು. ಇಬ್ಬರು ಹೀಗೆ ಹೇಳಿಕೆ ಕೊಟ್ಟಿದ್ದಾರೆ, ಇನ್ನು ಬಾಹುಬಲಿ ಸಿನಿಮಾ ನಿರ್ದೇಶನ ಮಾಡಿದ್ದ ಎಸ್.ಎಸ್. ರಾಜಮೌಳಿ ಅವರು ಕೂಡ ಪ್ರಭಾಸ್ ಅವರ ಮದುವೆ, ಅನುಷ್ಕಾ ಪ್ರಭಾಸ್ ರಿಲೇಶನ್ಷಿಪ್ ಇದೆಲ್ಲದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಪ್ರಭಾಸ್ ಅವರ ಮದುವೆ ಬಗ್ಗೆ ರಾಜಮೌಳಿ ಅವರನ್ನು ಕೇಳಲಾಯಿತು.

ಅದಕ್ಕೆ ಉತ್ತರ ಕೊಟ್ಟ ರಾಜಮೌಳಿ ಅವರು, ಇಂಥ ವಿಷಯಗಳಲ್ಲಿ ಪ್ರಭಾಸ್ ತುಂಬಾ ಸೋಂಬೇರಿ, ಅವನು ಮದುವೆಯಾಗದೇ ಹೀಗೆ ಇದ್ದುಬಿಡುವುದೇ ಒಳ್ಳೆಯದು ಎಂದು ತಮಾಷೆ ಮಾಡಿದ್ದರು. ಈ ರೀತಿಯಾಗಿ ಹರಡಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದರು. ಈ ರೀತಿ ಎಲ್ಲರೂ ಸಹ ಸ್ಪಷ್ಟನೆ ಕೊಟ್ಟಿದ್ದರೂ ಕೂಡ ಈ ಜೋಡಿಯ ಮದುವೆ, ಲವ್ ಬಗ್ಗೆ ಸುದ್ದಿಗಳು ಬರುವುದು ಮಾತ್ರ ಕಡಿಮೆ ಆಗಿಲ್ಲ. ಇನ್ನು ಪ್ರಸ್ತುತ ಇವರ ಕೆರಿಯರ್ ಹೇಗೆ ಸಾಗುತ್ತಿದೆ ಎಂದು ನೋಡುವುದಾದರೆ, ನಟ ಪ್ರಭಾಸ್ ಅವರು ಬಾಹುಬಲಿ ಸಿನಿಮಾ ನಂತರ ನಟಿಸಿದ ಸಿನಿಮಾಗಳು ಸೋತವು. ಇವರಿಗೆ ಬಿಗ್ ಬ್ರೇಕ್ ತಂದುಕೊಟ್ಟಿದ್ದು ಸಲಾರ್. ಸಲಾರ್ ಇಂದ ಪ್ರಭಾಸ್ ಅವರು ಗೆಲುವಿನ ಲಯ ಕಂಡುಕೊಂಡರು. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಲ್ಕಿ 2898AD, ಸಲಾರ್ 2, ರಾಜ ಸಾಬ್, ಸಂದೀಪ್ ರೆಡ್ಡಿ ವಂಗ ಜೊತೆಗೆ ಸ್ಪಿರಿಟ್, ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಅನುಷ್ಕಾ ಅವರು ಬಾಹುಬಲಿ2 ನಂತರ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಕಳೆದ ವರ್ಷ ಇವರ ಬರ್ತ್ ಡೇ ದಿವಸ ಕೆಲವು ಸಿನಿಮಾಗಳು ಅನೌನ್ಸ್ ಆಗಿದೆ. ಘಾಟಿ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಹಾಗೆ ರಗಡ್, ಮಾಸ್ ಲುಕ್ ನಲ್ಲಿ ಅನುಷ್ಕಾ ಅವರು ಕಾಣಿಸಿಕೊಂಡಿದ್ದು, ಈ ಸಿನಿಮಾ ಏಪ್ರಿಲ್ ತಿಂಗಳಿನಲ್ಲಿ ತೆರೆ ಕಾಣುತ್ತದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಇನ್ನು ಒಂದೆರಡು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದು, ಇವರನ್ನು ಥಿಯೇಟರ್ ನಲ್ಲಿ ನೋಡೋದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅನುಷ್ಕಾ ಅವರು ಅರುಂಧತಿ ಅಂಥ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ.



