ಸಾನ್ವಿ ಸುದೀಪ್ ಪ್ರೀತಿಯ ಅಜ್ಜಿಯ ನಿ*ಧನದಿಂದ ಬೇಸರಗೊಂಡಿದ್ದಾರೆ. ತಾಯಿ ಸರೋಜಾ ಅವರನ್ನು ಕಳೆದುಕೊಂಡ ದುಃಖದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ ಸಾನ್ವಿ.
ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಕೊ*ನೆಯುಸಿರೆಳೆದ್ರು. ಸರೋಜಾ ಮೂವರು ಮಕ್ಕಳನ್ನು ಅಗ*ಲಿದ್ರು.
ಸುದೀಪ್ ಅವರ ಜೆಪಿ ನಗರ ನಿವಾಸದಲ್ಲಿ ಸರೋಜ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಅಂತಿಮ ದರ್ಶನ ಪಡೆದ್ರು. ಅಂತಿಮಯಾತ್ರೆ ಬಳಿಕ ವಿಲ್ಸನ್ ಗಾರ್ಡನ್ ಚಿತಾಗಾರದ ಹೊರಗೆ ಸರೋಜ ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿದ್ರು. ಮಗ ಸುದೀಪ್ ಅವರು ಅಂ*ತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದ್ರು.

ಕೆಲ ಜನರು ಫೋಟೋ, ವಿಡಿಯೋಗಳಿಗಾಗಿ ಮಾಡಿದ ಹುಚ್ಚಾಟಕ್ಕೆ ಸಾನ್ವಿ ಸಿಟ್ಟಾಗಿದ್ದಾರೆ. ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸಾವಿರಾರು ಜನರು ಸುದೀಪ್ ಮನೆ ಮುಂದೆ ಜಮಾಯಿಸಿದ್ರು. ಸಾವಿನ ಮನೆಯಲ್ಲೂ ಕೂಗಾಟ, ಚೀರಾಟ ಸರಿನಾ ಎಂದು ಪ್ರಶ್ನೆ ಮಾಡಿ ಪೋಸ್ಟ್ ಶೇರ್ ಮಾಡಿದ್ದಾರೆ.
ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದ್ರೆ ಜನರು ನಮ್ಮನ್ನು ತಳ್ಳಿ-ನೂಕ್ಕಿದ್ದಾರೆ ಎಂದು ಸಾನ್ವಿ ಬರೆದಿದ್ದಾರೆ.
ಅವರನ್ನು ಗೌರವದಿಂದ ಕಳುಹಿಸಲು ನಾವು ತುಂಬಾ ತೊಂದರೆಗೆ ಒಳಗಾಗುವಂತೆ ಆಯ್ತು. ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಅಳುತ್ತಿದ್ದೇನೆ. ಆದ್ರೆ ಕೆಲ ಜನರು ಅವರು ಪೋಸ್ಟ್ ಮಾಡಬಹುದಾದ ರೀಲ್ಸ್ಗಳ ಬಗ್ಗೆ ಯೋಚಿಸಿ ತೊಂದರೆ ಕೊಟ್ಟಿದ್ದು ಎಷ್ಟು ಸರಿ ಎಂದು ಸಾನ್ವಿ ಇನ್ಸ್ಟಾ ಸ್ಟೋರಿಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.