ಸದ್ಯ ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿವಿಚಾರ ಚರ್ಚೆ ಬದಲಿಗೆ ಮತ್ತೊಂದು ವಿಚರ ಜೋರಾಗಿ ಚರ್ಚೆ ಆಗುತ್ತಿದೆ. ಸಿನಿಮಾ ರಂಗದ ಕೆಲವರಿಗೆ ನಟ್ಟು ಬೋಲ್ಟ್ ಸರಿ ಮಾಡಬೇಕು ಅನ್ನೋ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ಪರ ವಿರೋಧಕ್ಕೆ ಕಾರಣವಾಗುತ್ತಿದೆ. ಡಿಕೆ ಶಿವಕುಮಾರ್ ಹೇಳಿಕೆಯನ್ನ ಕೆಲವೊಂದಿಷ್ಟು ಜನ ಸಮರ್ಥನೆ ಮಾಡಿಕೊಂಡರೆ ಮತ್ತೊಂದಿಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಮೊನ್ನೆ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೆಯಿತು. ಸಿನಿಮಾ ಕಾರ್ಯಕ್ರಮ ಆದರೂ ಕೂಡ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಯಾಗಿರಲಿಲ್ಲ. ಈ ವಿಚಾರಕ್ಕೆ ಗರಂ ಆದ
ಡಿಕೆ ಶಿವಕುಮಾರ್ ವೇದಿಕೆ ಮೇಲೆಯೇ ಸಿನಿಮಾ ರಂಗದವರಿಗೆ ಜಾಡಿಸಿದರು ಯಾವ ನಟನಿಗೆ, ಯಾವ ನಟಿಗೆ ಎಲ್ಲೆಲ್ಲಿ ನಟ್ಟು, ಬೋಲ್ಟು ಟೈಟ್ ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಗುಡುಗಿದರು.

ಈ ಸಿನಿಮಾ ರಂರಗದರ ಮೇಲೆ ನನಗೆ ಬೇಸರ ಇದೆ. ಇದು ಕೇವಲ ಕಾರ್ಯಕ್ರಮಕ್ಕೆ ಬರದೇ ಇರೋದಕ್ಕೆ ಅಲ್ಲ. ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ನಿಮ್ಮ ಬೆಂಬಲ ಸಿಗಲಿಲ್ಲ. ಈ ಬಗ್ಗೆ ನೋವು ಮತ್ತು ಸಿಟ್ಟು ಎರಡೂ ಇದೆ. ಇದರ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೂ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದ್ದೆವು. ಆದರೆ ಅದಕ್ಕೆ ಇವರ ಸಹಕಾರ ಸಿಗಲಿಲ್ಲ. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ ಎಂದು ಹೇಳಿದ್ದರು.
ಡಿಕೆ ಶಿವಕುಮಾರ್ ಹೇಳಿಕೆಗೆ ಈಗ ಮಿಶ್ರ ಪ್ರತಿಕ್ರಿಯೆ ಬರ್ತಾ ಇದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಕೂಡ ಅವರ ಹೇಳಿಕೆ ವಿರೋಧಿಸಿದ್ದರು. ಈ ಬಗ್ಗೆ ಇಂದು ಮಾತನಾಡಿದ ಶಾಸಕ ರವಿ ಗಣಿಗ ನರಸಿಂಹಲು ಡಿಸಿಎಂ ಮಾತು ಸರಿ ಅಲ್ಲ. ಆಂದ್ರಪ್ರದೇಶದಿಂದ ಬಂದೂ ದುಡ್ಡು ದೋಚಿಕೊಂಡು ಹೋಗಿ ನಮ್ಮ ಬಗ್ಗೆ ಮಾತಾನಾಡ್ತಾನೆ. ಮೊನ್ನೆ ಸಿಸಿಎಲ್ ಮ್ಯಾಚ್ ನಡಿತೂ ಅಲ್ವಾ ಅವಾಗ ನಿಲ್ಲಿಸಬೇಕಿತ್ತು ಇದು ಲಾಸ್ಟ್ ವಾರ್ನಿಂಗ್. ಚಲನಚಿತ್ರ ಮಂಡಳಿಯವರು ಬಾಯಿ ಮುಚ್ಚಿಕೊಂಡು ಇರಬೇಕು. ಸಿನಿಮಾ ರಂಗದರಿಗೆ ಇದೇ ಲಾಸ್ಟ್ ವಾರ್ನಿಂಗ್, ಸಿನಿಮಾಗಳಿಗೆ ಸಬ್ಸಿಡಿ ನೀಡಬೇಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಸಿನಿಮಾದವರಿಗೆ ಎಂದು ವಾರ್ನಿಂಗ್ ಮಾಡಿದ್ದಾರೆ.

ಅಷ್ಟೆ ಅಲ್ಲ ರಶ್ಮಿಕಾ ಮಂದಣ್ಣ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿರೋ ರವಿ ಗಣಿಗ ಕಳೆದ ಬಾರಿಯ ಫಿಲಂ ಫೆಸ್ಟಿವಲ್ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕರೆಯಲು ಶಾಸಕರು ಕರೆಯಲು ಹೋದಾಗ ಟೈಮ್ ಇಲ್ಲ ಅಂತಾ ಹೇಳಿದ್ದರು. ರಶ್ಮಿಕಾ ಮಂದನಾ ಕಿರಿಕ್ ಪಾರ್ಟಿಯಿಂದ ಚಿತ್ರದಿಂದ ಬೆಳೆವದವರು ನಾನು ಹೈದ್ರಾಬಾದ್ ನಲ್ಲಿ ಇರೋದು. ನನಗೆ ಟೈಂ ಇಲ್ಲ ಅಂತಾರೆ ಇವರಿಗೆ ಬುದ್ದಿ ಕಲಿಸಬೇಕಲ್ವಾ..? ಎಂದು ಕಿಡಿ ಕಾರಿದರು.
ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಮಾತಿಗೆ ಬಿಜೆಪ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಟಿ ರವಿ, ಅವರ ಮಾತು ಡಿಸಿಎಂ ಸ್ಥಾನಕ್ಕೆ ತಕ್ಕಂತೆ ಇರಲಿಲ್ಲ. ಬೆದರಿಕೆ ಹಾಕುವುದು ಪ್ರಜಾಪ್ರಭುತ್ವದ ಸಂಸ್ಕೃತಿ ಅಲ್ಲ. ಕಾಂಗ್ರೆಸ್ ಕರೆ ಕೊಟ್ಟ ತಕ್ಷಣ ಬರೋಕೆ ಅವರು ಜೀತದಾಳುಗಳು ಅಲ್ಲ. ಸಿನಿಮಾ ರಂಗದವರಿಗೆ ಅಪಮಾನಿಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡ ಕಾರಿದರು.