ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋ ಗಳು ಆರಂಭಗೊಂಡಿದೆ.ಇದ್ರಿಂದ ಹಲವಾರು ಕಲಾವಿಧರಿಗೆ ತಮ್ಮ ನಟನೆಯ ಕನಸನ್ನು ನನಸಾಗಿಸಿಕೊಳ್ಳಲು ವೇದಿಕೆ ಮಾಡಿಕೊಳ್ಳುತ್ತಿದೆ.ಇನ್ನು ಇದರಿಂದ ಅದೆಷ್ಟೋ ಜನ ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದರ ಜೊತೆಗೆ ತಮ್ಮ ಜೀವನಕ್ಕೆ ನೆಲೆ ಮಾಡಿಕೊಳ್ಳುತ್ತಿದ್ದಾರೆ.ತಮ್ಮ ಕನಸಿನಂತೆ ಶುರು ಮಾಡಿದ ಈ ಕೆಲಸ ಇಂದು ಅದೆಷ್ಟೋ ಜನರ ಬಾಳಿಗೆ ದಾರಿದೀಪವಾಗಿ ಅನುವು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಇನ್ನು ಕಿರುತೆರೆಯಲ್ಲಿ ಎಲ್ಲಾ ವಾಹಿನಿಯಲ್ಲೂ ಕೂಡ ಸಾಕಷ್ಟು ರಿಯಾಲಿಟಿ ಶೋ ಗಳು ಆರಂಭವಾಗಿದೆ.
ಎಲ್ಲದುರ ಪೈಕಿ ಹೆಚ್ಚಿನ ಪ್ರಮುಕ್ಯತೆ ಎಂದರೆ ಕಾಮಿಡಿ ಹಾಗೂ ಮಕ್ಕಳ ರಿಯಾಲಿಟಿ ಶೋ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೇ.ಅದ್ರಲ್ಲಿ ಎಲ್ಲದುರ ಪೈಕಿ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಶೋ ಗಳು ಎಂದರೆ ‘ಜೀ ಕನ್ನಡ’ದಲ್ಲಿ ಪ್ರಸಾರವಾಗುವ “ಕಾಮಿಡಿ ಕಿಲಾಡಿಗಳು”. ಇನ್ನು ಈ ಶೋ ಶುರುವಾಗಿ 5ಸೀಸನ್ ಗಳು ಕಳೆದಿವೆ.ಒಂದಕ್ಕಿಂತ ಮತ್ತೊಂದು ಬಹಳ ಮನೋರಂಜನೆ ನೀಡುತ್ತಾ ದಿನದಿಂದ ದಿನಕ್ಕೆ ತಮ್ಮ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ.ಈ ಶೋ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದೆ ಎಂದರೆ ಈ ಶೋ ನ್ ಮೊದಲ ಸೀಸನ್ ಸ್ಪರ್ದಿಗಳು ಕೂಡ ಇಂದಿಗೂ ಜನರ ಮನಸ್ಸಿನಲ್ಲಿ ಉಳಿಯುವಷ್ಟು.
ಇನ್ನು ಈ ಶೋ ನ ಮೂಲಕ ಸಾಕಷ್ಟು ಕಲಾವಿಧರು ಜನತೆಗೆ ಪರಿಚಯಿಸಿಕೊಂಡು ಇಂದು ಬೆಳ್ಳಿ ತೆರೆಯಲ್ಲಿ ಹಾಗೂ ಕಿರುತೆರೆಯ ಧಾರಾವಾಹಿಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾಮಿಡಿ ಕಿಲಾಡಿಗಳಲ್ಲಿ ಎಲ್ಲಾ ಸೀಸನ್ ಒಂದು ತೂಕವಾದರೆ ಸೀಸನ್ 3 ಇನ್ನೊಂದು ತೋಕವಾಗಿತ್ತು.ಆ ಸೀಸನ್ ನಲ್ಲಿ ಪಡೆದ ಮನೋರಂಜನೆ ಇನ್ನು ಯಾವ ಸೀಸನ್ ಸ್ಪರ್ದಿಗಳಿಂದ ಮೀರಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ “ಮಡೇನೂರ್ ಮನು,ನಯನ,ಸದಾನಂದ ಹಾಗೂ ಸೂರಜ್” ಇಂದು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಇವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಇವರ ನೈಜ ನಟನೆಗೆ ಬೆರೆಯಾಗಾಗಿ ಇಂದು ಬೆಳ್ಳಿ ತೆರೆಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕೂಡ ಅವಕಾಶ ಕೂಡ ಪಡೆದುಕೊಂಡು ಕಿರುತೆರೆಯಲ್ಲಿ ಬೇರೆ ವಾಹಿನಿಗಳ ಕಾಮಿಡಿ ಶೋ ನಲ್ಲಿ ತೊಡಗಿಸಿಕೊಂಡಿದ್ದಾರೆ.ಸದ್ಯದಲ್ಲಿ ಈ ಕಾಮಿಡಿ ಕಿಲಾಡಿಗಳು “ಸುವರ್ಣ ವಾಹಿನಿ”ಯಲ್ಲಿ “ಕಾಮಿಡಿ ಗ್ಯಾಂಗ್ಸ್” ನಲ್ಲಿ ಭಾಗವಹಿಸಿದ್ದರು.ಇನ್ನು ಈ ಶೋ ಉತ್ತಮ ಪ್ರದರ್ಶನ ಪಡೆದು ಸ್ವಲ್ಪ ದಿನಗಳ ಹಿಂದೆ ಮುಗಿದಿತ್ತು.ಇದೀಗ ಅದರದೇ ವಿಚಾರವಾಗಿ ನಟಿ ನಯನ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಏನು ಯಾಕೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಈ ಕಾಮಿಡಿ ಗ್ಯಾಂಗ್ಸ್ ನಲ್ಲಿ “ಪಿಯುಸಿ ತಂಡ” ಅಂದರೆ ನಯನಾ ಅವರ ತಂಡ ರನ್ನರ್ ಸ್ಥಾನ ಪಡೆದುಕೊಂಡಿತ್ತು.ಅದರ ಹಣವಾಗಿ ವಿಜೇತರಿಗೆ ಮೂರು ಲಕ್ಷ ನೀಡಲಾಗಿತ್ತು.ಆ ಮೊತ್ತವನ್ನು ಪಿಯುಸಿ ತಂಡದ ಸಾದ್ಯನಾಗಿದ್ದ “ಸೋಮಶೇಖರ್” ಅವರಿಗೆ ನೀಡಲಾಗಿತ್ತು.ಇದೀಗ ಅವರು ಆ ಮೊತ್ತವನ್ನು ಆ ತಂಡದ ಇನ್ನಿಬ್ಬರು ನೀಡುತ್ತಿಲ್ಲ ಎಂದು ನಯನಾ ಅವರು ಈತನಿಗೆ ಕರೆ ಮಾಡಿ ಹಾಗೂ ಮೆಸೇಜ್ ಮಾಡುತ್ತಾ ಅವ್ಯಚಾ ಪದಗಳಿಂದ ಬೈದು ಬೆದರಿಸುತ್ತಿರುವ ಸಾಕ್ಷಿ ಇಟ್ಟು ಕೊಂಡು ಸೋಮಶೇಖರ್ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ನಯನಾ ಅವರು ಸಂಭಾವನೆ ಪಡೆದಿದ್ದರು ಮತ್ತಷ್ಟು ಮೊತ್ತವನ್ನು ಕೇಳುತ್ತಿದ್ದಾರೆ ಕೊಡದೆ ಇದ್ದಲ್ಲಿ ನಾನು ಏನು ಮಾಡುತ್ತಿನೊ ಗೊತ್ತಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.