ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಜೋಡಿಗಳಲ್ಲಿ ತ್ರಿವಿಕ್ರಂ ಹಾಗೂ ಭವ್ಯ ಜೋಡಿ ಸಹ ಒಂದು. ಇವರಿಬ್ಬರು ಮನೆಯ ಒಳಗಡೆ ಫ್ರೆಂಡ್ಸ್ ಥರ ಇರೋದಾಗಿ ಹೇಳಿಕೊಂಡರು ಸಹ, ನೋಡೋರಿಗೆ ಅದು ಕೇವಲ ಫ್ರೆಂಡ್ಶಿಪ್ ಅನ್ನಿಸುತ್ತಿರಲಿಲ್ಲ. ಇವರಿಬ್ಬರ ನಡುವೆ ಹೆಚ್ಚು ಸ್ನೇಹ ಇದೆ ಎಂದು ಅನ್ನಿಸಿದ್ದಂತೂ ನಿಜ. ಭವ್ಯ ಅವರು ಆಡುವ ಮಾತುಗಳು, ವೀಕೆಂಡ್ ಸಂಚಿಕೆಗಳಲ್ಲಿ ಏನೇ ಕೇಳಿದರು ತ್ರಿವಿಕ್ರಂ ಹೆಸರನ್ನೇ ತೆಗೆದುಕೊಳ್ಳುವುದು ಇದೆಲ್ಲವೂ ಸಹ ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಇರುವುದು ಖಂಡಿತ ಎನ್ನುವ ಅಭಿಪ್ರಾಯ ತರಿಸಿತ್ತು. ಆದರೆ ಬಿಗ್ ಬಾಸ್ ಶೋ ಮುಗಿದು ಹೊರಗಡೆ ಬಂದ ನಂತರ ಈ ಸ್ಟೋರಿಯಲ್ಲಿ ಹೊಸ ಟ್ವಿಸ್ಟ್ ಬಂದಿದೆ, ಭವ್ಯ ಗೌಡ ಅಕ್ಕ ದಿವ್ಯ ಜೊತೆಗೆ ತ್ರಿವಿಕ್ರಂ ಮದುವೆ ಮಾಡಿಸುವ ಪ್ಲಾನ್ ಶುರುವಾಗಿದೆ..
ಬಿಬಿಕೆ11 ಶುರುವಾದಾಗ ತ್ರಿವಿಕ್ರಂ ಅವರ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಪದ್ಮಾವತಿ ಧಾರಾವಾಹಿ ಮೂಲಕ ಹೆಸರುವಾಸಿ ಆಗಿದ್ದ ತ್ರಿವಿಕ್ರಂ, ಸಿಸಿಎಲ್ ನಲ್ಲಿ ಆಡುವ ಮೂಲಕ ಕ್ರಿಕೆಟ್ ನಲ್ಲಿ ಸಹ ಚೆನ್ನಾಗಿ ಗುರುತಿಸಿಕೊಂಡಿದ್ದರು. ಇಂಥ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು ಎಂದರೆ ಖಂಡಿತ ತಪ್ಪಲ್ಲ. ಇವರು ಫಿನಾಲೆ ತಲುಪಿ, ವಿನ್ನರ್ ಸಹ ಆಗುತ್ತಾರೆ ಎನ್ನುವ ನಿರೀಕ್ಷೆ ತುಂಬಾ ಇತ್ತು. ಅಂದುಕೊಂಡ ಫಿನಾಲೆ ತಲುಪಿದರು ಸಹ ತ್ರಿವಿಕ್ರಂ ವಿನ್ನರ್ ಆಗಲಿಲ್ಲ. ಮೊದಲ ರನ್ನರ್ ಅಪ್ ಆಗಿ, ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇವರ ಅಭಿಮಾನಿಗಳಿಗೆ ತ್ರಿವಿಕ್ರಂ ಗೆಲ್ಲಬೇಕು, ಗೆಲ್ಲುವುದಕ್ಕೆ ಅರ್ಹತೆ ಇರುವ ಸ್ಪರ್ಧಿ ಇವರೇ ಎನ್ನುವ ಮಾತುಗಳು ಸಹ ಕೇಳಿಬರುತ್ತಿತ್ತು. ಹಾಗೆಯೇ ತ್ರಿವಿಕ್ರಂ ಭವ್ಯ ಫ್ರೆಂಡ್ಶಿಪ್ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು, ಇವರಿಬ್ಬರಿಗೆ ಫ್ಯಾನ್ ಪೇಜ್ ಗಳು ಸಹ ಇದೆ.

ತ್ರಿವಿಕ್ರಂ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಾಗ, ನೀನು ನನ್ನ ಮಗನನ್ನ ತಾಯಿ ನೋಡಿಕೊಳ್ಳೋ ಹಾಗೆ ನೋಡಿಕೊಂಡಿದ್ದೀಯಾ, ನೀವಿಬ್ಬರೂ ರಾಧಾ ಕೃಷ್ಣ ಥರ ಇದ್ದೀರಾ ಎಂದು ಮೆಚ್ಚುಗೆ ಕೂಡ ಸೂಚಿಸಿದ್ದರು. ಇದರಿಂದ ಭವ್ಯ ಬಹಳ ನಾಚಿಕೆಯಿಂದ ನಕ್ಕಿದ್ದು ಇದೆ. ತ್ರಿವಿಕ್ರಂ ಅವರ ತಾಯಿ ಈ ರೀತಿ ಹೇಳಿದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಬ್ಬರ ಫೋಟೋವನ್ನು ರಾಧಾ ಕೃಷ್ಣ ಥರ ಎಡಿಟ್ ಮಾಡಿ, ಅಭಿಮಾನಿಗಳು ಪೋಸ್ಟ್ ಮಾಡಿದ್ದು ಇದೆ. ಇದೆಲ್ಲವೂ ಒಂದು ತ್ರಿವಿಕ್ರಂ ಭವ್ಯ ಫ್ಯಾನ್ಸ್ ಅಂತ ಒಂದಷ್ಟು ಸುದ್ದಿಗಳು ನಡೀತಾ ಇದ್ರೆ, ಇನ್ನೊಂದು ಕಡೆ ಭವ್ಯ ತಮ್ಮ ಅಕ್ಕ ದಿವ್ಯ ಅವರನ್ನು ತ್ರಿವಿಕ್ರಂ ಜೊತೆಗೆ ಮದುವೆ ಮಾಡಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಈ ವಿಷಯ ಇಂಟರ್ವ್ಯೂ ಒಂದರಲ್ಲಿ ರಿವೀಲ್ ಆಗಿದ್ದು, ತ್ರಿವಿಕ್ರಂ ಹಾಗೂ ಭವ್ಯ ಫ್ಯಾನ್ಸ್ ಗೆ ಇದರಿಂದ ಸ್ವಲ್ಪ ಬೇಸರ ಆದರೂ ಆಗಬಹುದು.
ಇಂಟರ್ವ್ಯೂ ನಲ್ಲಿ ಈ ವಿಷಯ ರಿವೀಲ್ ಆಗಿದ್ದು, ಮೊದಲು ಭವ್ಯ ಅವರು ಇಂಟರ್ವ್ಯೂ ಗೆ ಬಂದಿದ್ದರು, ನಂತರ ತ್ರಿವಿಕ್ರಂ ಬಂದರು ಭವ್ಯ ಗೌಡ ಅಕ್ಕ ಆಕೆಯ ಜೊತೆಗೆ ಮಾತನಾಡುತ್ತಾ ಇದ್ದಾಗ, ನ್ಯೂಸ್ ಆಂಕರ್ ಆಗಿರುವವರು ಇದಕ್ಕಿಂತ ಮುಂಚೆ ಧನರಾಜ್ ಫೋನ್ ಮಾಡಿದ್ರು, ಅವರು ಭವ್ಯ ಅವರ ಅಕ್ಕನ್ನ ನಿಮಗೆ ಗಂಟು ಹಾಕೋಕೆ ಪ್ಲಾನ್ ಮಾಡ್ತಿರೋ ಬಗ್ಗೆ ಹೇಳಿದ್ರು ಎಂದು ತ್ರಿವಿಕ್ರಂ ಅವರಿಗೆ ಕೇಳಿದಾಗ .. ನಗುತ್ತಾ ಉತ್ತರ ಕೊಟ್ಟ ತ್ರಿವಿಕ್ರಂ ಅವರ ಅಕ್ಕ ಮನೆಗೆ ಬರೋವಾಗ ಭವ್ಯ ಹೇಳಿದ್ರು, ನಮ್ಮಕ್ಕ ಬರ್ತಾಳೆ ನಿಮಗೆ ಅವರಿಗೂ ಮ್ಯಾಚ್ ಆಗತ್ತೆ ಅಂತ, ನಾನು ಸರಿ ನೋಡೋಣ ಬರ್ಲಿ ಮಾತಾಡಿಸೋಣ ಅಂತ ಅನ್ಕೊಂಡಿದ್ದೆ. ಇವರು ನೋಡಿದ್ರೆ ಬರ್ತಿದ್ದ ಹಾಗೆ ರಜತ್ ರಜತ್ ಅಂತ ಅನ್ಕೊಂಡು ರಜತ್ ಜೊತೆ ಮಾತಾಡ್ತಾ ಕೂತ್ಕೊಂಡರು. ಈಗಲೂ ಅಷ್ಟೇ ಎಲ್ಲರ ಜೊತೆ ಮಾತಾಡಿದ್ರು ನನ್ ಜೊತೆ ಮಾತಾಡಿಲ್ಲ.. ಪರವಾಗಿಲ್ಲ ಆದರೂ ತುಂಬಾ ಚೆನ್ನಾಗಿದ್ದಾರೆ ಎಂದಿದ್ದಾರೆ ತ್ರಿವಿಕ್ರಂ.

ಭವ್ಯ ತ್ರಿವಿಕ್ರಂ ಒಂದಾಗಲಿ ಅಂದುಕೊಳ್ತಿರೋ ಫ್ಯಾನ್ಸ್ ಗೆ ಈ ಸುದ್ದಿ ಒಂದು ರೀತಿ ಶಾಕ್ ಹಾಗೂ ಬೇಸರ ಎರಡನ್ನು ತಂದಿದೆ. ಇದೇನಪ್ಪಾ ಭವ್ಯ ತ್ರಿವಿಕ್ರಂ ಜೋಡಿ ಅಂದ್ರೆ ಭವ್ಯ ಅವರ ಅಕ್ಕನ ಜೊತೆಗೆ ಗಂಟು ಹಾಕೋ ಪ್ರಯತ್ನ ನಡೀತಿದ್ಯಲ್ಲ ಅನ್ನೋ ಮಾತುಕತೆ ಅಭಿಮಾನಿಗಳ ನಡುವೆ ಶುರುವಾಗಿದೆ. ಬಿಗ್ ಬಾಸ್ ಮನೆಯ ಹೊರಗಡೆ ನಡೆದ ಇನ್ನೊಂದು ವಿಷಯ ತ್ರಿವಿಕ್ರಂ ಹಾಗೂ ಮೋಕ್ಷಿತಾ ಫ್ಯಾನ್ಸ್ ಕುರಿತು. ಮನೆಯ ಒಳಗಡೆ ತ್ರಿವಿಕ್ರಂ ಹಾಗೂ ಮೋಕ್ಷಿತಾ ಇವರಿಬ್ಬರು ಕೂಡ ಹೇಳಿಕೊಳ್ಳುವಷ್ಟು ಕ್ಲೋಸ್ ಆಗಿ ಇದ್ದವರೇನು ಅಲ್ಲ. ನಿಜ ಹೇಳಬೇಕು ಎಂದರೆ ಮೋಕ್ಷಿತಾ ಅವರಿಗೆ ತ್ರಿವಿಕ್ರಂ ಅವರನ್ನು ಕಂಡರೆ ಆಗುತ್ತಲೇ ಇರಲಿಲ್ಲ. ಇಬ್ಬರು ಹಲವು ಸಾರಿ ವಾದ ಮಾಡಿದ್ದರು, ಮೋಕ್ಷಿತಾ 10 ವಾರದ ನಂತರ ಇರೋದಿಲ್ಲ ಎಂದು ತ್ರಿವಿಕ್ರಂ ಹೇಳಿದ್ದಾರೆ ಅನ್ನೋ ಮಾತು ಗೊತ್ತಾಗಿ ಮೋಕ್ಷಿತಾ ದೊಡ್ಡ ಜಗಳವನ್ನೇ ಆಡಿದ್ದರು.
ಇದೆಲ್ಲಾ ನಡೆಯುತ್ತಿದ್ದರೂ ಸಹ, ಮೋಕ್ಷಿತಾ ಜೊತೆ ತ್ರಿವಿಕ್ರಂ ಜಗಳ ಆಡೋದಿಲ್ಲ, ಮೋಕ್ಷಿತಾ ಏನು ಹೇಳಿದ್ರು ತ್ರಿವಿಕ್ರಂ ಸರಿ ಅನ್ಕೊಂಡು ಸುಮ್ನೆ ಆಗ್ತಾರೆ ಅಂತ ಅವರಿಬ್ಬರ ಫ್ಯಾನ್ ಪೇಜ್ ಸಹ ಹೊಸದಾಗಿ ಶುರುವಾಯಿತು. ತ್ರಿಮೋಕ್ಷಿ ಅನ್ನೋ ಹ್ಯಾಶ್ ಟ್ಯಾಗ್ ಮಾಡಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರನ್ನು ನೋಡುವ ದೃಷ್ಟಿಯೇ ಬದಲಾಯಿತು. ಹಾಗೆಯೇ ಅವರಿಬ್ಬರ ಫೋಟೋಸ್ ಹಾಗೂ ವಿಡಿಯೋ ಹಾಕಿ ಸ್ಪೆಷಲ್ ಎಡಿಟ್ ಗಳನ್ನು ಸಹ ಮಾಡಲಾಯಿತು. ಇದೆಲ್ಲವೂ ವೈರಲ್ ಆಗಿರೋ ವಿಷಯ ತ್ರಿವಿಕ್ರಂ ಹಾಗೂ ಮೋಕ್ಷಿತಾ ಇಬ್ಬರಿಗೂ ಗೊತ್ತಾಗಿದ್ದು ಫಿನಾಲೆ ದಿವಸ. ಸುದೀಪ್ ಅವರು ವಿಡಿಯೋ ಪ್ಲೇ ಮಾಡಿ ತೋರಿಸಿದಾಗ ಇಬ್ಬರು ಶಾಕ್ ಆದರೂ, ಭವ್ಯ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ನಗುತ್ತಿದ್ದರು. ಈ ಬಗ್ಗೆ ಸಹ ತ್ರಿವಿಕ್ರಂ ಅವರಿಗೆ ಕೇಳಿದಾಗ ತಮಾಷೆ ಆಗಿಯೇ ಉತ್ತರ ನೀಡಿದ್ದಾರೆ.

ಅವರ ಜೊತೆ ನಾನು ಮಾತನಾಡಿದ್ದೆ ಕಮ್ಮಿ, ರಜತ್ ಜೊತೆಗೆ ರಂಜನ್ ಜೊತೆಗೆ ಜಗಳ ಆಡೋಕೆ ಹೋದರೆ ಆಗ ಒಂದು ರೀತಿ ಸರಿ ಇರುತ್ತೆ, ಮೋಕ್ಷಿತಾ ಜೊತೆಗೆ ಜಗಳ ಹೇಗೆ ಆಡಲಿ ಅದಕ್ಕೆ ಸುಮ್ಮನೆ ಆಗುತ್ತಿದ್ದೆ, ಜನ ಅದನ್ನ ಈ ಥರ ತಗೋತಾರೆ ಅಂತ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ ತ್ರಿವಿಕ್ರಂ. ಇನ್ನು ಭವ್ಯ ಸಹ ಇದನ್ನೆಲ್ಲಾ ನೋಡಿ ತುಂಬಾ ಖುಷಿ ಆಯಿತು, ಹೊರಗಡೆ ಜನ ಈ ಥರ ನೋಡಿದ್ದಾರೆ ಅಂತ ಗೊತ್ತೇ ಇರಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ತ್ರಿವಿಕ್ರಂ ಹಾಗೂ ಮೋಕ್ಷಿತಾ ಇಬ್ಬರು ಸಹ ಹೊರಗಡೆ ಬಂದ ನಂತರ ಈ ವಿಷಯದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ, ಅದಕ್ಕೆ ತಮಾಷೆಯಾಗಿಯೇ ಉತ್ತರವನ್ನು ಸಹ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಹೊಸ ಪ್ರಾಜೆಕ್ಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.