ಆ್ಯಪಲ್ ಕಂಪನಿಯ ಹೊಸ ಐ-ಫೋನ್ 15 ಜಗತ್ತಿನಾದ್ಯಂತ ಭರ್ಜರಿ ಬೇಡಿಕೆಯನ್ನು ಹೊಂದಿದೆ. ಐ-ಫೋನ್ 15ಗೆ ಡಿಮ್ಯಾಂಡ್ ಎಷ್ಟಿದೆ ಅಂದ್ರೆ ಮಾರುಕಟ್ಟೆಗೆ ಬಂದ ದಿನವೇ ಗ್ರಾಹಕರು ಕ್ಯೂ ನಿಂತು ಖರೀದಿ ಮಾಡಿದ್ದರು. ಸದ್ಯ, ಅಮೆರಿಕಾದಲ್ಲಿ ಯುವಕರ ಗುಂಪು ಆ್ಯಪಲ್ ಸ್ಟೋರ್ಗೆ ನುಗ್ಗಿ ಐ-ಫೋನ್ 15 ಲೂಟಿ ಮಾಡಿ, ರಾಶಿ ರಾಶಿ iPhone ಹಾಗೂ ಐಪ್ಯಾಡ್ಗಳನ್ನು ದೋಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಐ-ಫೋನ್ ದರೋಡೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಮೆರಿಕಾದ ಫಿಲಡೆಲ್ಫಿಯಾದ ಆ್ಯಪಲ್ ಸ್ಟೋರ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ್ಯಪಲ್ ಮಳಿಗೆಗೆ ನುಗ್ಗಿರುವ ಯುವಕರ ಗುಂಪು, ಐಫೋನ್ಗಳು, ಐಪ್ಯಾಡ್ಗಳು ಮತ್ತು ಇತರ ಉತ್ಪನ್ನಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಕೊಂಡು ಓಡಿ ಹೋಗಿದ್ದಾರೆ. ಪೊಲೀಸರ ಆಗಮನಕ್ಕೂ ಮುನ್ನ ಯುವಕರು ಆ್ಯಪಲ್ ಸ್ಟೋರ್ ಮೇಲೆ ದಾಳಿ ಮಾಡಿರೋ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ರಾತ್ರಿ 8ಗಂಟೆ ಸುಮಾರಿಗೆ ನೂರಾರು ಯುವಕರು ಆ್ಯಪಲ್ ಸ್ಟೋರ್ಗೆ ನುಗ್ಗಿದ್ದಾರೆ. ಮುಖವಾಡ ಧರಿಸಿರುವ ಯುವಕರು ಸಿಕ್ಕ, ಸಿಕ್ಕ ಐಫೋನ್, ಐಪ್ಯಾಡ್ಗಳನ್ನು ದೋಚಿದ್ದಾರೆ. ಪೊಲೀಸರು ಈ ಸ್ಥಳಕ್ಕೆ ಆಗಮಿಸುವ ಮುನ್ನವೇ ಲೂಟಿ ಮಾಡಿದ್ದು, ಲೂಟಿಕೋರರನ್ನು ಬಂಧಿಸಲು ಹರಸಾಹಸ ಪಡಲಾಗಿದೆ. ವೈರಲ್ ಆದ ವಿಡಿಯೋಗಳಲ್ಲಿ ಮುಸುಕುಧಾರಿ ವ್ಯಕ್ತಿಗಳು ಓಡುತ್ತಿರುವುದು ಹಾಗೂ ಪೊಲೀಸ್ ಅಧಿಕಾರಿಗಳು ಕೆಲವರನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಎಲಾನ್ ಮಸ್ಕ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.