ಕೆಲವರಿಗಂತೂ ಪ್ರಾಣಿ ಪಕ್ಷಿಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಅವುಗಳನ್ನು ಮನೆಯ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವುಗಳು ಒಂದು ಕ್ಷಣ ಕಣ್ಣ ಮುಂದೆ ಇಲ್ಲವಾದರೆ ನೋವಾಗುತ್ತದೆ, ಹೀಗಿರುವಾಗ ಮುದ್ದಾಗಿ ಸಾಕಿದ, ಮನೆಯ ಮಗಳಂತೆ ನೋಡಿಕೊಂಡ ಗಿಳಿಯೊಂದು ಏಕಾಏಕಿ ಕಾಣೆಯಾದರೆ ಮನೆಯವರ ಪರಿಸ್ಥಿತಿ ಹೇಹಿರಬೇಡ. ಇಂತಹದ್ದೊಂದು ಘಟನೆ ಇದೀಗ ಭಾರೀ ವೈರಲ್ ಆಗುತ್ತಿದ್ದು, ಗಿಳಿಯನ್ನು ಹುಡುಕಿ ಕೊಟ್ಟವರಿಗೆ ಮನೆಯವರು 10 ಸಾವಿರ ಬಹುಮಾನ ಘೋಷಿಸಿದ್ದಾರೆ.

ದಾಮೋಹನ್ ಸಿಟಿಯ ಇಂದ್ರಾ ಕಾಲೋನಿಯಲ್ಲಿ ವಾಸಿಸುತ್ತಿರುವ ಸೋನಿ ಎಂಬವರ ಕುಟುಂಬ ತಮ್ಮ ಪ್ರೀತಿಯ ಗಿಳಿಯನ್ನು ಕಳೆದುಕೊಂಡಿದ್ದು ಅದನ್ನು ಪತ್ತೆ ಹಚ್ಚಲು 10 ಸಾವಿರ ಬಹುಮಾನ ಘೋಷಣೆ ಮಾಡಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲ ಗಿಳಿಯ ಫೋಟೋ ಹಾಗೂ ಕುಟುಂಬಸ್ಥರ ವಿವರಗಳನ್ನು ಬ್ಯಾನರ್ ಮೂಲಕ ಅಳವಡಿಸುತ್ತಿದ್ದಾರೆ.
ಸೋನಿ ಎಂಬವರು ಇತ್ತೀಚೆಗೆ ತಮ್ಮ ಪ್ರೀತಿಯ ಗಿಳಿಯನ್ನು ಹಿಡಿದುಕೊಂಡು ವಾಕಿಂಗ್ ತೆರಳಿದ್ದರು ಈ ವೇಳೆ ಬೀದಿ ಬದಿಯ ನಾಯಿಗಳು ಗಿಳಿಯನ್ನು ಕಂಡು ಗಲಾಟೆ ಮಾಡಿದೆ. ಇದರಿಂದ ಹೆದರಿದ ಗಿಳಿ ಸೋನಿಯ ಕೈಯಿಂದ ಹಾರಿ ಮಾರೆಯಾಗಿದ್ದು, ಮನೆ ಹಿಂದಿರುಗಿಲ್ಲವಂತೆ. ರಾತ್ರಿ ಹಗಲು ಹುಡುಕಾಟ ನಡೆಸಿದ್ದರೂ ಗಿಳಿ ಪತ್ತೆಯಾಗಿಲ್ಲ. ಇದೇ ಕಾರಣಕ್ಕೆ ಸೋನಿ ಕುಟುಂಬಸ್ಥರು ಗಿಳಿಯ ಫೋಟೋ ಹಾಗೂ ವಿವರವನ್ನು ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ, ಹುಡುಕಿಕೊಟ್ಟವರಿಗೆ 10 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.