ಗುತ್ತಿಗೆದಾರರ ಬಾಕಿ ಮೊತ್ತ ಪಾವತಿ ಮಾಡದ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರ ಸಂಘ ಗರಂ ಆಗಿದ್ದಾರೆ. ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಡಿಸಿಎಂ ಡಿಕೆಶಿ ವಿರುದ್ಧ ಪರ್ಸಂಟೇಜ್ ಆರೋಪ ಮಾಡಿದ್ದಾರೆ.. ಡಿಕೆ ಶಿವಕುಮಾರ್ ಮೇಲೆ ಗಂಭೀರ ಆರೋಪ ಮಾಡಿದ ಗುತ್ತಿಗೆದಾರರ ಈ ಅಲಿಗೇಶನ್ ಸದ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೆವಿ ಕ್ವಾಸ್ಟ್ಲಿ ಆಗಲಿದೆ… ರಾಜ್ಯ ರಾಜಕಾರಣದಲ್ಲಿ ಸದ್ಯ ಈ ವಿಚಾರ ಬಿಸಿ ಬಿಸಿ ಚರ್ಚೆ ಆಗುತ್ತಿದೆ..ಪೊಲಿಟಿಕಲ್ ಪಡಸಾಲೆಯಲ್ಲಿ ಈಗ ಕಮಿಷನ್ ಆರೋಪ ಜೋರಾಗಿಯೇ ಸದ್ದು ಮಾಡುತ್ತಿದೆ. ಬ್ರಾಂಡ್ ಬೆಂಗಳೂರು ಮಾಡ ಹೊರಟ ಡಿಸಿಎಂ ವಿರುದ್ಧ ಗಂಭೀರ ಆರೋಪ ಗುತ್ತಿಗೆದಾರರು ಮಾಡುತ್ತಿದ್ದಾರೆ.

ಈ ಹಿಂದೆ ಗವರ್ನರ್ ವರೆಗೂ ಕೂಡ ಈ ವಿಚಾರ ತಲುಪಿಸಿದ ಗುತ್ತಿಗೆದಾರರ ಸಂಘ ಈಗ ಇನ್ಮೇಲೆ ಯಾವುದೇ ಕೆಲಸ ಮಾಡಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಯಾವುದೇ ವಾರ್ನಿಂಗ್ ಗೂ ಗುತ್ತಿಗೆದಾರರು ಬಗ್ಗುತ್ತಿಲ್ಲ.. ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆಗೆ 15 ಪರ್ಸೆಂಟ್ ಡಿಮ್ಯಾಂಡ್ ಆರೋಪ ಮಾಡಿರುವ ಗುತ್ತಿಗೆದಾರರು ನಾವು ಕೆಲಸ ಮಾಡಿದ ದುಡ್ಡನ್ನ ನಮಗೆ ಕೊಡಲು ಯಾಕೀ ನಿಲುವು ಅಂತ ಕಿಡಿ ಕಾರಿದ್ದಾರೆ. ಜೊತೆಗೆ ರಾಷ್ಟ್ರ ನಾಯಕರ ಬಳಿ ನ್ಯಾಯ ಕೊಡಿಸಲು ಕೂಡ ಆಗ್ರಹ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಸಿಡಿದ ಗುತ್ತಿಗೆದಾರರು ಕಾಂಗ್ರೆಸ್ ರಾಷ್ಟ್ರ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಟ್ವೀಟ್ ಮಾಡಿ ಡಿಸಿಎಂ ವಿರುದ್ಧ ಕಿಡಿ ಕಾರಿದ ಗುತ್ತಿಗೆದಾರರು ರಾಷ್ಟ್ರ ನಾಯಕರನ್ನು ಕೂಡ ಈ ಟ್ವೀಟ್ ಅಲ್ಲಿ ಸೇರಿಸಿ ಕೊಂಡಿದ್ದಾರೆ. ಜಸ್ಟೀಸ್ ಕೊಡುವ ಹಾಗೇ ಡಿಮ್ಯಾಂಡ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರ ವಿರೋಧ ಮಾಡ್ತಾ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿರುವುದೇ ಈ ಕಮಿಷನ್ ಆರೋಪ ಮಾಡಿಯೇ.
ಆದ್ರೆ ಈಗ ನಾವು ನಿಯತ್ತಾಗಿ ಕೆಲಸ ಮಾಡಿದರೂ ಹಣ ಬಿಡುಗಡೆ ಮಾಡುತ್ತಿಲ್ಲ.ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರ ವಿರೋಧಿ ಅಂತ ಹೇಳಿಕೊಂಡು ಈ ರೀತಿಯಾದ ನಡವಳಿಕೆ ಎಷ್ಟರ ಮಟ್ಟಿಗೆ ಸರಿ ಅಂತ ಕಿಡಿ ಕಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಯವಿಟ್ಟು ರಾಷ್ಟ್ರ ನಾಯಕರು ಮಧ್ಯ ಪ್ರವೇಶ ಮಾಡಿ ನ್ಯಾಯ ಕೊಡಿ ಅಂತ ಆಗ್ರಹ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟ್ಯಾಗ್ ಮಾಡಿ ಕಿಡಿ ಕಾರಿದ್ದಾರೆ. ಸದ್ಯ ಈ ವಿಚಾರ ರಾಜಕಾರಣದಲ್ಲಿ ಈಗ ದೊಡ್ಡ ಸದ್ದು ಮಾಡುತ್ತಿದ್ದು ಕಮಲ ಪಾಳಯ ಇದನ್ನೇ ಅಸ್ತ್ರ ಮಾಡಿ ಕೊಂಡಿದೆ.