ಸಿನಿಮಾ ಸ್ಟಾರ್ ಸೆಲೆಬ್ರಿಟಿಗಳು ಅಥವಾ ನಿರ್ದೇಶಕರು ಏನೇ ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಇದೀಗ ಚಂದನವನದ ನಿರ್ದೇಶಕ ಪವನ್ ಒಡೆಯರ್ ಮಗಳ ನಾಮಕರಣ ಸುದ್ದಿಯಲ್ಲಿದೆ. ಅದ್ದೂರಿಯಾಗಿ ನಡೆದ ಎರಡನೇ ಪುತ್ರಿಯ ನಾಮಕರಣದ ವಿಡಿಯೋ ಹಾಗೂ ಸುಂದರ ಫೋಟೋಗಳು ಇಲ್ಲಿವೆ ನೋಡಿ.

ಡೈರೆಕ್ಟರ್ ಪವನ್ ಒಡೆಯರ್ ದಂಪತಿ ತಮ್ಮ ಮುದ್ದಾದ ಮಗಳಿಗೆ ಚೆಂದದ ಹೆಸರಿಟ್ಟು ಸಂಭ್ರಮಿಸಿದ್ದಾರೆ. ಇತ್ತೀಚೆಗಷ್ಟೇ 2ನೇ ಮಗುವನ್ನ ಪವನ್- ಅಪೇಕ್ಷಾ ಜೋಡಿ ಬರಮಾಡಿಕೊಂಡರು. ಈಗ ಅದ್ದೂರಿಯಾಗಿ ಮಗಳ ನಾಮಕರಣ ಮಾಡಿದ್ದಾರೆ. ತಮ್ಮ ಮುದ್ದು ಮಗಳಿಗೆ ಯಾದ್ವಿ ಎಂದು ಹೆಸರಿಟ್ಟಿದ್ದಾರೆ. ನಾಮಕರಣದ ಚೆಂದದ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಪವನ್ ದಂಪತಿ ಶೇರ್ ಮಾಡಿದ್ದಾರೆ.
ಇವಳೇ ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಮತ್ತು ಶೌರ್ಯನ ತಂಗಿ. ನಾವು ಇವಳನ್ನು ಯಾದ್ವಿ ಒಡೆಯರ್ ಎಂದು ಕರೆಯುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪವನ್ ಪತ್ನಿ ಅಪೇಕ್ಷಾ ಪುರೋಹಿತ್ ಬರೆದುಕೊಂಡಿದ್ದಾರೆ. ಈ ಸಮಾರಂಭದಲ್ಲಿ ‘ಗಾಳಿಪಟ’ ನಟಿ ಭಾವನಾ ರಾವ್ ಸೇರಿದಂತೆ ಚಿತ್ರರಂಗದ ಅನೇಕ ನಟ-ನಟಿಯರು ಭಾಗಿಯಾಗಿದ್ದಾರೆ. 2018ರಲ್ಲಿ ಅಪೇಕ್ಷಾ ಪುರೋಹಿತ್- ಪವನ್ ಒಡೆಯರ್ ಮದುವೆಯಾದರು.