ಚಂದನವನದ ಒಂದೆರಡು ಸಿನಿಮಾಗಳಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಗುರುತಿಸಿಕೊಂಡವರು ಪವಿತ್ರಾ ಗೌಡ. ಇವರಿಗೆ ನಟಿಯಾಗಿ ಜನಪ್ರಿಯತೆ ಸಿಕ್ಕಿದ್ದಕ್ಕಿಂತ ಹೆಚ್ಚಾಗಿ, ಇವರು ದರ್ಶನ್ ಅವರ ಜೊತೆಗಿನ ವಿಚಾರದಿಂದಲೇ ಹೆಚ್ಚು ಸುದ್ದಿಯಾದವರು. ಪವಿತ್ರಾ ಗೌಡ ಅವರು ದರ್ಶನ್ ಅವರೊಡನೆ ಪ್ರೀತಿಯಲ್ಲಿರುವ ವಿಚಾರ ಎಷ್ಟು ದೊಡ್ಡ ಮಟ್ಟಕ್ಕೆ ಚರ್ಚೆ ಆಯಿತು ಎಂದು ಗೊತ್ತೇ ಇದೆ. ಇತ್ತಿಚಿನ ತಿಂಗಳುಗಳಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿರುವ ಪವಿತ್ರಾ ಗೌಡ ಇದೀಗ ಮಗಳು ಖುಷಿ ಜೊತೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಸ್ ಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮೊದಲೇ ಪವಿತ್ರಾ ಗೌಡ ಅವರಿಗೆ ಮದುವೆಯಾಗಿ ಒಂದು ಮಗು ಸಹ ಇತ್ತು. ಅವರ ಮಗಳ ಹೆಸರು ಖುಷಿ ಗೌಡ. ಗಂಡನಿಂದ ದೂರವಾದ ಬಳಿಕ ಚಿತ್ರರಂಗಕ್ಕೆ ಬಂದಿದ್ದು ಇವರು. ಆದರೆ ಹೆಚ್ಚು ಸುದ್ದಿಯಾಗಿದ್ದು, ದರ್ಶನ್ ಅವರ ಜೊತೆಗಿರುವ ಸಂಬಂಧದ ಕಾರಣ. ಇವರಿಗೆ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬ ಅಸಭ್ಯವಾಗಿ ಮೆಸೇಜ್ ಮಾಡಿದ ವಿಷಯದ ಕಾರಣಕ್ಕಾಗಿಯೇ, ದರ್ಶನ್ ಅವರು ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯ ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದು. ದರ್ಶನ್ ಪವಿತ್ರಾ ಗೌಡ ಇಬ್ಬರು ಸಹ ಸುಮಾರು 6 ತಿಂಗಳ ಕಾಲ ಜೈ*ಲಿ ನಲ್ಲೇ ಇದ್ದರು.
6 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪವಿತ್ರಾ ಗೌಡ ಹೊಸ ವರ್ಷ ಒಂದೆರಡು ದಿನ ಇದ್ದಾಗ ಜಾಮೀನು ಸಿಕ್ಕಿ ಹೊರಗಡೆ ಬಂದರು. ಪವಿತ್ರಾ ಗೌಡ ಹೊರಗಡೆ ಬಂದ ನಂತರ ಮುನೇಶ್ವರ ದೇವಸ್ಥಾನದಲ್ಲಿ ಕಾಣಿಸಿಕೊಂಡು, ದರ್ಶನ್ ಅವರ ಹೆಸರಿನಲ್ಲೂ ಅರ್ಚನೆ ಮಾಡಿಸಿ ಸುದ್ದಿಯಾಗಿದ್ದರು. ಬಳಿಕ ಹೊಸ ವರ್ಷದ ದಿವಸ ಬನಶಂಕರಿ ದೇವಸ್ಥಾನದಲ್ಲಿ ಸಹ ಕಾಣಿಸಿಕೊಂಡಿದ್ದರು. ಹೀಗೆ ದೇವಸ್ಥಾನ ಅದು ಇದು ಎಂದು ಸುತ್ತಾಡುತ್ತಿರುವ ಪವಿತ್ರಾ ಗೌಡ ಇದೀಗ ಮಗಳ ಜೊತೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ಅವುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮ್ಮ ಮಗಳು ಇಬ್ಬರು ಸಹ ಒಂದೇ ಥರದ ಡ್ರೆಸ್ ಹಾಕಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಪವಿತ್ರಾ ಗೌಡ ವೈಟ್ ಟೀ ಶರ್ಟ್ ಹಾಗೂ ಬ್ಲೂ ಪ್ಯಾಂಟ್ ಹಾಕಿಕೊಂಡಿದ್ದರೆ, ಮಗಳು ಖುಷಿ ಗೌಡ ಅಮ್ಮನ ಹಾಗೆಯೇ ವೈಟ್ ಟೀ ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಹಾಕಿಕೊಂಡಿದ್ದಾರೆ. ಇಬ್ಬರು ಸುಂದರವಾಗಿ ಸ್ಟೈಲಿಶ್ ಆಗಿ ಫೋಟೋಶೂಟ್ ಗೆ ಪೋಸ್ ನೀಡಿದ್ದಾರೆ. ಈ ಫೋಟೋಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಇವರಿಬ್ಬರು ಅಮ್ಮ ಮಗಳ ಹಾಗಿಲ್ಲ, ಅಕ್ಕ ತಂಗಿಯ ಹಾಗಿದ್ದಾರೆ ಎಂದು ಕಾಂಪ್ಲಿಮೆಂಟ್ ಕೊಡುತ್ತಿದ್ದಾರೆ, ಆದರೆ ಇನ್ನಷ್ಟು ಜನರು ಇವರಿಬ್ಬರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡುತ್ತಿದ್ದಾರೆ.. ಇವರಿಬ್ಬರ ವಯ್ಯಾರ ನೋಡಿ, ಕಂಡವರ ಮನೆ ಗಂಡ ಬೇಕಿತ್ತಾ ಎಂದು ಕಾಮೆಂಟ್ಸ್ ಬರೆಯುತ್ತಿದ್ದಾರೆ.
ಇನ್ನು ಇವರಿಬ್ಬರು ಜೊತೆಯಾಗಿ ಫೋಟೋಸ್ ಗಳಲ್ಲಿ ಬಹಳ ಸಂತೋಷದಿಂದ ಪೋಸ್ ನೀಡಿದ್ದು, ಒಬ್ಬ ವ್ಯಕ್ತಿಯ ಸಂಸಾರ ತನ್ನಿಂದ ಹಾಳಾಯ್ತು ಅನ್ನೋ ಪಶ್ಚಾತ್ತಾಪ ಸ್ವಲ್ಪ ಕೂಡ ಇಲ್ಲವಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಜಾ*ಮೀನು ಸಿಕ್ಕ ಬಳಿಕ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ ವಸ್ತುಗಳನ್ನು ತರುವುದಕ್ಕೆ ಹೊರ ರಾಜ್ಯಗಳಾದ ಮುಂಬೈ, ದೆಹಲಿ ಇಲ್ಲಿಗೆಲ್ಲಾ ಹೋಗುವುದಕ್ಕೆ ಕೋರ್ಟ್ ಇಂದ ಪರ್ಮಿಶನ್ ಸಿಕ್ಕಿದ್ದು, ಶೀಘ್ರದಲ್ಲೇ ಇವರು ಹೊರದೇಶಕ್ಕೆ ಕೂಡ ಹೋಗಿಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈಗ ಪವಿತ್ರಾ ಗೌಡ ದರ್ಶನ್ ಅವರಿಂದ ಸ್ವಲ್ಪ ದೂರವೇ ಇರುವ ಹಾಗೆ ಕಾಣಿಸುತ್ತಿದೆ.