ಪಾರ್ವತಮ್ಮ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ್ಸ್ ಧೀಮಂತ ಮಹಿಳೆ. ಒಂದು ಕಾಲದಲ್ಲಿ ಅಣ್ಣಾವ್ರಿಗೆ ಸಿಗಬೇಕಾದ ಗೌರವ ಸಿಗದಿದ್ದ ವೇಳೆ, ತಾವೇ ಮುಂದೆ ಬಂದು, ವಿತರಣಾ ಸಂಸ್ಥೆ ಶುರು ಮಾಡಿ, ನಿರ್ಮಾಣ ಸಂಸ್ಥೆ ಶುರು ಮಾಡಿ, ಸುಮಾರು 80 ಸಿನಿಮಾಗಳನ್ನು ನಿರ್ಮಿಸಿ, ಕನ್ನಡದ ಧೀಮಂತ ನಿರ್ಮಾಪಕಿಯಾಗಿ ಹೆಸರು ಮಾಡಿದವರು. ಅಣ್ಣಾವ್ರ ಜೊತೆಯಾಗಿದ್ದು, ಹೊಸ ಸಾಮ್ರಾಜ್ಯ ಕಟ್ಟಿದ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್ ಅವರು. ಇವರು ತಮ್ಮ ಬ್ಯಾನರ್ ಮೂಲಕ ಹಲವು ನಾಯಕಿಯರನ್ನು ಪರಿಚಯಗೊಳಿಸಿದರು..
ಅವರೆಲ್ಲರೂ ಇಂದು ಚಂದನವನದಲ್ಲಿ ಸ್ಟಾರ್ ಹೀರೋಯಿನ್ ಗಳಾಗಿ ಹೆಸರು ಮಾಡಿದ್ದಾರೆ. ಹಾಗಿದ್ದರೆ ಪಾರ್ವತಮ್ಮ ಅವರು ಚಿತ್ರರಂಗಕ್ಕೆ ಪರಿಚಯಿಸಿದ ಆ ನಟಿಯರು ಯಾರ್ಯಾರು ಎಂದು ನೋಡೋಣ.. ಪಾರ್ವತಮ್ಮ ರಾಜ್ ಕುಮಾರ್ ಅವರು ಪರಿಚಯಿಸಿದ ಮೊದಲ ನೂತನ ಪ್ರತಿಭೆ ನಟಿ ಸುಧಾರಾಣಿ, ಇವರು ಶಿವಣ್ಣ ಅವರ ಮೊದಲ ಸಿನಿಮಾ ಆನಂದ್ ನಲ್ಲಿ ಹೀರೋಯಿನ್ ಆಗಿ ನಟಿಸುವ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 80 ಹಾಗೂ 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದಾರೆ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಾ ಆಕ್ಟಿವ್ ಆಗಿದ್ದಾರೆ.
ಎರದನೆಯವರು ಆಶಾ ರಾಣಿ. ಶಿವಣ್ಣ ಅವರ ಎರಡನೇ ಸಿನಿಮಾ ರಥಸಪ್ತಮಿ, ಈ ಸಿನಿಮಾದ ನಾಯಕಿ ಇವರು. ಆಶಾ ರಾಣಿ ಅವರು ಕನ್ನಡದ ಹಿರಿಯ ನಟ ರಾಜೇಶ್ ಅವರ ಮಗಳು. ರಥಸಪ್ತಮಿ ಬಳಿಕ ಆಶಾ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಅರ್ಜುನ್ ಸರ್ಜಾ ಅವರೊಡನೆ ಮದುವೆಯಾದ ನಂತರ ಶಾಂಪೂರ್ಣವಾಗಿ ನಟನೆ ಇಂದ ದೂರವೇ ಉಳಿದರು. ಸಂಸಾರದ ಜವಾಬ್ದಾರಿ ತೆಗೆದುಕೊಂಡು ಬಣ್ಣದ ಲೋಕದಿಂದ ಹೊರಗೆ ಉಳಿದಿದ್ದಾರೆ. ನಟಿ ಮಾಲಾಶ್ರೀ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಪಾರ್ವತಮ್ಮನವರೇ, ರಾಘಣ್ಣ ಅವರ ಮೊದಲ ಸಿನಿಮಾ ನಂಜುಂಡಿ ಕಲ್ಯಾಣ ಮೂಲಕ ಮಾಲಾಶ್ರೀ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ನಟಿ ಶ್ರುತಿ ಅವರು ಅಭಿನಯಿಸಿದ ಮೊದಲ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ. ಈ ಸಿನಿಮಾದಲ್ಲಿ ಶಿವಣ್ಣ ಅವರಿಗೆ ತಂಗಿಯ ಪಾತ್ರದಲ್ಲಿ ನಟಿಸಿದ್ದರು, ಶ್ರುತಿ ಅವರನ್ನು ಪಾರ್ವತಮ್ಮನವರು ಪರಿಚಯಿಸಿದರು. ಮಲಯಾಳಂ ನಟಿ ಮೋನಿಷ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಪಾರ್ವತಮ್ಮನವರು, ರಾಘಣ್ಣ ಅವರ ಚಿರಂಜೀವಿ ಸುಧಾಕರ ಸಿನಿಮಾ ಮೂಲಕ ಇವರು ಕನ್ನಡಕ್ಕೆ ಎಂಟ್ರಿ ಕೊಟ್ಟರು. ಮತ್ತೊಬ್ಬ ಮಲಯಾಳಂ ನಟಿ ಶಿಲ್ಪಾ ಅವರು ಜನುಮದ ಜೋಡಿ ಸಿನಿಮಾ ಮೂಲಕ ಕನ್ನಡಕ್ಕೆ ಬಂದರು, ಇವರನ್ನು ಆಯ್ಕೆ ಮಾಡಿದ್ದು ಪಾರ್ವತಮ್ಮನವರೇ.
ಇನ್ನು ಅಪ್ಪು ಸಿನಿಮಾ ಮೂಲಕ ರಕ್ಷಿತಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು, ಅಭಿ ಸಿನಿಮಾ ಮೂಲಕ ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಷ್ಟೇ ಅಲ್ಲದೇ, ಸವ್ಯಸಾಚಿ ಚಿತ್ರದ ಮೂಲಕ ನಟಿ ಪ್ರೇಮಾ ಅವರನ್ನು, ಹೃದಯ ಹೃದಯ ಸಿನಿಮಾ ಮೂಲಕ ನಟ ಅನು ಪ್ರಭಾಕರ್ ಇವರೆಲ್ಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ ರಾಜ್ ಕುಮಾರ್ ಅವರೇ. ಇವರೆಲ್ಲರೂ ಚಂದನವನದಲ್ಲಿ ಸ್ಟಾರ್ ನಟಿಯರಾಗಿ ಹೆಸರು ಮಾಡಿದ್ದಾರೆ. ಇವರೆಲ್ಲರೂ ಇಂದಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಮರೆತಿಲ್ಲ.