ನಮಗೆಲ್ಲಾ ಗೊತ್ತಿರುವ ಹಾಗೆ ಕಳೆದ ತಿಂಗಳು ಮಹಾಕುಂಭಮೇಳ ಶುರುವಾಗಿದೆ. 144 ವರ್ಷಗಳಿಗೆ ಒಂದು ಸಾರಿ ನಡೆಯುವ ಕುಂಭಮೇಳದಲ್ಲಿ ಭಾಗಿಯಾಗುವುದು ಜೀವಮಾನದಲ್ಲಿ ಸಿಗುವ ಪುಣ್ಯ. ಈ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ನಮ್ಮ ಜೀವಮಾನದಲ್ಲಿ ಕುಂಭ ಮೇಳ ನಡೆಯುತ್ತಿದೆ, ಅದರಲ್ಲಿ ನಾವು ಭಾಗವಹಿಸುತ್ತಿದ್ದೇವೆ ಎನ್ನುವುದು ನಮ್ಮ ಪುಣ್ಯ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಾಕಷ್ಟು ಜನರು ಹೋಗಿ ಪುಣ್ಯಸ್ನಾನ ಮಾಡಿ, ಪಾಪಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರು, ಸಾಧು ಸಂತರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಎಲ್ಲರೂ ಸಹ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಚಂದನವನದ ಸ್ಟಾರ್ ಗಳು ಇದಕ್ಕೆ ಹೊರತಾಗಿಲ್ಲ..
ಆಂಕರ್ ಅನುಶ್ರೀ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್ ಇವರೆಲ್ಲರ ಗ್ಯಾಂಗ್ ಸಹ ಕುಂಭ ಮೇಳಕ್ಕೆ ಹೋಗಿ ಬಂದಿದ್ದಾರೆ. ಹಾಗೆಯೇ ನಟ ಶೈನ್ ಶೆಟ್ಟಿ ಸೇರಿದಂತೆ ಇನ್ನಷ್ಟು ಕಲಾವಿದರು ಕುಂಭಮೇಳದಲ್ಲಿ ಪಾಲ್ಗೊಂಡು, ಅಲ್ಲಿನ ಫೋಟೋಸ್ ಶೇರ್ ಮಾಡಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಮತ್ತೊಬ್ಬ ಸುಂದರವಾದ ನಟಿ ಸಹ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು, ಇವರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋಸ್ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. ಇವರ ಕಣ್ಣುಗಳನ್ನು ನೋಡಿಯೇ ಈಕೆ ಯಾರೆಂದು ಕಂಡು ಹಿಡಿಯಬಹುದು. ಈಕೆ ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಆಗಿದ್ದರು ಸಹ, ಆ ಎರಡು ಸಿನಿಮಾಗಳು ಭಾರತೀಯ ಚಿತ್ರರಂಗದ ಮಟ್ಟದಲ್ಲಿ ದೊಡ್ಡದಾಗಿ ಹೆಸರು ಮಾಡಿದೆ. ಹಾಗಿದ್ದಲ್ಲಿ ಈ ನಟಿ ಯಾರು ಅಂತ ಗೊತ್ತಾಯ್ತ?

ಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನದ ಪಡೆದಿರುವ ಪ್ಯಾನ್ ಇಂಡಿಯಾ ನಟಿ ಮತ್ಯಾರು ಅಲ್ಲ. ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರು..ಇವರು ಸಹ ಮೌನಿ ಅಮಾವಾಸ್ಯೆಯ ದಿವಸ ಹೋಗಿ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು.. “ಮೌನಿ ಅಮಾವಾಸ್ಯೆಯ ಮಹಾಕುಂಭಮೇಳದಲ್ಲಿ ಮುಳುಗೆದ್ದು, ಇಂಥದ್ದೊಂದು ಲೈಫ್ ಟೈಮ್ ಅನುಭವವನ್ನು ನಾನು ಪಡೆಯುತ್ತೇನೆ ಎಂದು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಇದೆ ಜೀವನ ಎಂದು ಅನ್ನಿಸುತ್ತದೆ. ನೀವು ಯಾವತ್ತೂ ಊಹೆ ಮಾಡಿಕೊಳ್ಳದೇ ಇರುವುದು ನಿಮ್ಮ ಜೀವನದಲ್ಲಿ ನಡೆಯುತ್ತದೆ. ಈ ಆಶೀರ್ವಾದ ಮತ್ತು ಅನುಭವದಿಂದ ನನ್ನ ಬದುಕಿನಲ್ಲಿ ಕೃತಜ್ಞತಾ ಮನೋಭಾವ ಮತ್ತು ಪ್ರೀತಿ ತುಂಬಿದೆ..” ಎಂದು ಶ್ರೀನಿಧಿ ಶೆಟ್ಟಿ ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇವರ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶ್ರೀನಿಧಿ ಅವರ ಫ್ಯಾನ್ಸ್ ಇವರ ಆಧ್ಯಾತ್ಮದ ಮನಸ್ಸನ್ನು ನೋಡಿ ಸಂತೋಷಪಟ್ಟಿದ್ದು ಇವರಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ. ಕನ್ನಡದ ಕಲಾವಿದರು ಈ ರೀತಿ ಕುಂಭ ಮೇಳಕ್ಕೆ ಹೋಗಿ ಬರುತ್ತಿರುವುದನ್ನು ನೋಡುವುದಕ್ಕೆ ಸಂತೋಷ ಆಗುತ್ತದೆ. ಇನ್ನು ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಹೇಳುವುದಾದರೆ, ರಾಕಿ ಭಾಯ್ ಅವರ ಚೆಲುವೆ ಇವರು. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್2 ಸಿನಿಮಾಗಳಲ್ಲಿ ರಾಕಿ ಭಾಯ್ ಮನಗೆದ್ದ ರೀನಾ ಪಾತ್ರದಲ್ಲಿ ನಟಿಸಿ, ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡ ಲಕ್ಕಿ ಹುಡುಗಿ ಶ್ರೀನಿಧಿ ಶೆಟ್ಟಿ. ಕೆಜಿಎಫ್2 ನಂತರ ಶ್ರೀನಿಧಿ ಅವರು ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದರು..

ವಿಕ್ರಂ ಅವರ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಮಟ್ಟಕ್ಕೆ ತಲುಪಿ ರೀಚ್ ಆಗಲಿಲ್ಲ. ಯಶಸ್ಸು ಪಡೆಯಲಿಲ್ಲ. ಇನ್ನು ಕನ್ನಡದಲ್ಲಿ ಸಹ ಯಾವುದೇ ಸಿನಿಮಾ ಸೈನ್ ಮಾಡಿರುವ ಹಾಗೆ ಕಾಣುತ್ತಿಲ್ಲ. ಬೇರೆ. ಭಾಷೆಯಲ್ಲಿ ಶ್ರೀನಿಧಿ ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಷಯ ಸುದ್ದಿಯಾಗಿದೆ. ನಮ್ಮ ಕನ್ನಡದ ಹುಡುಗಿ ಕನ್ನಡದಲ್ಲಿ ಸಹ ಸಿನಿಮಾ ಮಾಡಲಿ ಎನ್ನುವುದು ಎಲ್ಲರ ಆಸೆ. ಇವರಿಗೆ ಕನ್ನಡದಲ್ಲಿ ಕೂಡ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡದಲ್ಲಿ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಶ್ರೀನಿಧಿ. ಅದರ ಇನ್ನು ಸಿನಿಮಾದಲ್ಲಿ ನಟಿಸಿಲ್ಲ. ಇವರು ಆದಷ್ಟು ಬೇಗ ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡಲಿ ಎನ್ನುವುದು ಇವರ ಅಭಿಮಾನಿಗಳ ಆಸೆ ಆಗಿದೆ.