ಅಣ್ಣ-ತಂಗಿಯ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ 30 ವರ್ಷಗಳಿಂದಲೂ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸುತ್ತಿದ್ದಾರೆ. ಈ ಬಾರಿ ರಕ್ಷಾ ಬಂಧನಕ್ಕೆ ನೇರವಾಗಿ ಮೋದಿಯವರನ್ನು ಭೇಟಿಯಾಗಿ ರಕ್ಷಾ ಬಂಧನ ಕಟ್ಟಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ನರೇಂದ್ರ ಮೋದಿಯವರ ಈ ಮುಸಲ್ಮಾನ್ ಸಹೋದರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮೂಲತಃ ಪಾಕಿಸ್ತಾನದವರಾದ ಖಮರ್ ಮೊಹ್ಸಿನ್ ಶೇಖ್ ಗುಜರಾತ್ ಮೂಲದ ವ್ಯಕ್ತಿಯನ್ನು ವಿವಾಹವಾಗಿ ಅಲ್ಲೇ ನೆಲೆಸಿದ್ದಾರೆ. 30 ವರ್ಷಗಳ ಹಿಂದೆ ಮೋದಿಯವರು ಸಂಘದಲ್ಲಿದ್ದಾಗ ಮೊದಲ ಬಾರಿಗೆ ರಾಖಿ ಕಟ್ಟಿದ್ದರು. ಅಂದಿನಿಂದ ಇಂದಿನ ವರೆಗೆ ಪ್ರತಿ ವರ್ಷವೂ ಮೊಹ್ಸಿನ್ ಶೇಖ್ ಮೋದಿಯವರಿಗೆ ರಾಖಿ ಕಳುಹಿಸುತ್ತಿದ್ದಾರೆ.
ಈ ಬಾರಿ ನೇರವಾಗಿ ಮೋದಿಯವರಿಗೆ ರಾಖಿ ಕಟ್ಟಲು ತಯಾರಿ ನಡೆಸಿರುವ ಮೊಹ್ಸಿನ್ ಶೇಖ್ ಶಕ್ತಿಯ ಸಂಕೇತವಾಗಿರುವ ಕೆಂಪು ಬಣ್ಣದ ರಾಖಿ ತಯಾರಿಸಿದ್ದಾರಂತೆ. ಅದರೊಂದಿಗೆ ಕೃಷಿ ಸಂಬಂಧಿತ ಪುಸ್ತಕವೊಂದನ್ನು ಮೋದಿಯವರಿಗೆ ನೀಡಲಿದ್ದಾರಂತೆ. ಆಗಸ್ಟ್ 30 ರಂದು ರಕ್ಷಾ ಬಂಧನ ನಡೆಯಲಿದ್ದು, ಈ ವೇಳೆ ಮೊಹ್ಸಿನ್ ಶೇಖ್ ಮೋದಿಯವರಿಗೆ ರಾಖಿ ಕಟ್ಟಿ ಶುಭಾಶಯ ತಿಳಿಸಲಿದ್ದಾರೆ.