ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಓಂ ಸಹ ಒಂದು. ಈ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಶಿವಣ್ಣ ಅವರನ್ನು ಮಾಸ್ ಲುಕ್ ನಲ್ಲಿ ನೋಡಲು ಸಿಕ್ಕ ಮೊದಲ ಸಿನಿಮಾ. ಉಪೇಂದ್ರ ಅವರಿಗೆ, ಶಿವಣ್ಣ ಅವರಿಗೆ, ಪ್ರೇಮ ಅವರಿಗೆ ಎಲ್ಲರಿಗೂ ಕೂಡ ಈ ಸಿನಿಮಾ ದೊಡ್ಡ ಯಶಸ್ಸು ಮತ್ತು ಒಳ್ಳೆಯ ಸ್ಥಾನವನ್ನೇ ತಂದುಕೊಟ್ಟಿತು. ಓಂ ಸಿನಿಮಾ ಬಿಡುಗಡೆಯಾಗಿ ಇನ್ನೇನು 30 ವರ್ಷ ತುಂಬುತ್ತದೆ, ಆದರೆ ಇಂದಿಗೂ ಸಹ ಈ ಸಿನಿಮಾ ಬಗ್ಗೆ ಇರುವ ಕ್ರೇಜ್ ಮಾತ್ರ ಒಂದಿಷ್ಟು ಕಡಿಮೆ ಆಗಿಲ್ಲ. ಓಂ ಸಿನಿಮಾದಲ್ಲಿ ಶಿವಣ್ಣ ಅವರು ಪ್ರೇಮಾ ಅವರು ಹೀರೋ ಹೀರೋಯಿನ್ ಎನ್ನುವ ವಿಷಯ ಗೊತ್ತೇ ಇದೆ. ಇವರ ಜೊತೆಗೆ ದೊಡ್ಮನೆಯ ಇನ್ನಿಬ್ಬರು ಕುಡಿಗಳು ಓಂ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ.

ಹೌದು, ಓಂ ಸಿನಿಮಾದಲ್ಲಿ ದೊಡ್ಮನೆ ಕುಟುಂಬಕ್ಕೆ ಸೇರಿದ ಇನ್ನಿಬ್ಬರು ಕಲಾವಿದರು ನಟಿಸಿದ್ದಾರೆ. ಇಂಥದ್ದೊಂದು ಅದ್ಭುತ ಸಿನಿಮಾವನ್ನು ಕನ್ನಡ ಚಿತ್ರಪ್ರೇಮಿಗಳಿಗೆ ನೀಡಿದವರು ನಿರ್ದೇಶಕ ಉಪೇಂದ್ರ. ಉಪೇಂದ್ರ ಅವರು ತರ್ಲೆ ನನ್ಮಗ ಹಾಗೂ ಶ್ ಸಿನಿಮಾಗಳ ನಂತರ ನಿರ್ದೇಶನ ಮಾಡಿದ ಸಿನಿಮಾ ಓಂ. ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ ಸಿನಿಮಾ ಇದು ಎಂದರೂ ತಪ್ಪಲ್ಲ. ಓಂ ಸಿನಿಮಾ ಅಷ್ಟರ ಮಟ್ಟಿಗೆ ಯಶಸ್ವಿಯಾಗಿ ಸದ್ದು ಮಾಡಿತು. ಓಂ ಸಿನಿಮಾದಲ್ಲಿ ಶಿವಣ್ಣ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡರು. ಪೌರೋಹಿತ್ಯ ಮಾಡುವ ಕುಟುಂಬದ ಹುಡುಗನಾಗಿ, ಜೊತೆಗೆ ಗ್ಯಾಂಗ್ಸ್ಟರ್ ಆಗಿ. ಈ ಎರಡು ಶೇಡ್ ಗಳನ್ನು ಇಂದಿಗೂ ಸಹ ಮರೆಯುವ ಹಾಗಿಲ್ಲ.
ಇನ್ನು ಶಿವಣ್ಣ ಅವರು ಲಾಂಗ್ ಹಿಡಿದುಕೊಂಡು ಬರುವ ಆ ಒಂದು ಲುಕ್ ಅಂತೂ ಇಂದಿಗೂ ಎಲ್ಲರ ಮೆಚ್ಚಿನ ಲುಕ್. ಆ ದೃಶ್ಯಗಳಿಗೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಓಂ ಸಿನಿಮಾ ಹಲವು ರೆಕಾರ್ಡ್ ಗಳನ್ನು ಮಾಡಿದೆ ಎನ್ನುವುದು ಸಹ ಗೊತ್ತೇ ಇದೆ. ಅವುಗಳಲ್ಲಿ ಒಂದು ರೀರಿಲೀಸ್ ಗಳು, ಈವರೆಗೂ ಓಂ ಸಿನಿಮಾ 552 ಸಾರಿ ರಿಲೀಸ್ ಆಗಿದೆ. ಇದುವರೆಗೂ ಯಾವುದೇ ಸಿನಿಮಾ ಇಷ್ಟು ಸಾರಿ ರೀರಿಲೀಸ್ ಆಗಿಲ್ಲ. ಇದು ಸಹ ದೊಡ್ಡ ದಾಖಲೆ, ಈ ಸಿನಿಮಾ ಈಗ ರಿಲೀಸ್ ಆದರೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ಅಷ್ಟರ ಮಟ್ಟಿಗೆ ಇದೆ ಓಂ ಸಿನಿಮಾ ಕ್ರೇಜ್. ಇನ್ನು ಈ ಸಿನಿಮಾ ದೃಶ್ಯಗಳು ಈಗಲೂ ಸಹ ಟ್ರೆಂಡಿಂಗ್ ಆಗುತ್ತದೆ.

ಇತ್ತೀಚೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‘ ವೇದಿಕೆಯಲ್ಲಿ ಓಂ ಸಿನಿಮಾ ದೃಶ್ಯಗಳನ್ನು ರೀಕ್ರಿಯೆಟ್ ಮಾಡಲಾಯಿತು. ಶಿವಣ್ಣ ಅವರು ಈ ಶೋಗೆ ಜಡ್ಜ್ ಆಗಿದ್ದಾರೆ, ಇನ್ನು ಪ್ರೇಮಾ ಅವರು ಡಿಕೆಡಿ ಶೋಗೆ ಗೆಸ್ಟ್ ಆಗಿ ಬಂದಿದ್ದರು. ಆಗ ಪ್ರೇಮಾ ಅವರು ಹಾಗೂ ಶಿವಣ್ಣ ಅವರಿಗೆ ಓಂ ಸಿನಿಮಾದ ದೃಶ್ಯವನ್ನು ರೀಕ್ರಿಯೆಟ್ ಮಾಡಬೇಕು ಎಂದು ರಿಕ್ವೆಸ್ಟ್ ಮಾಡಿಕೊಂಡಾಗ, ಇಬ್ಬರು ಓಂ ಸಿನಿಮಾದ ಮೊದಲ ದೃಶ್ಯವನ್ನು ರೀಕ್ರಿಯೆಟ್ ಮಾಡಿದರು. ಆ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಅದೇ ರೀತಿ ಯೂಟ್ಯೂಬ್ ನಲ್ಲಿ ಸಹ ಸೂಪರ್ ವ್ಯೂಸ್ ಕಂಡುಬರುತ್ತಿದೆ. ಈಗಲೂ ಟ್ರೆಂಡ್ ಆಗುತ್ತದೆ.
ಓಂ ಸಿನಿಮಾದ ಹಾಡುಗಳು ಹಾಗು ಪ್ರತಿ ದೃಶ್ಯಗಳು ಸಹ ಅಷ್ಟೇ ಫೇಮಸ್. ಓಂ ಸಿನಿಮಾದಲ್ಲಿ ಶಿವಣ್ಣ ಅವರು ನಟಿಸಿರುವುದರ ಜೊತೆಗೆ ದೊಡ್ಮನೆಯ ಕುಡಿಗಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಅವರು ಸಹ ನಟಿಸಿದ್ದಾರೆ. ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯ, ಹೌದು ಇವರಿಬ್ಬರು ಸಹ ಬಾಲನಟರಾಗಿ ಓಂ ಸಿನಿಮಾದಲ್ಲಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಬರುವ ದೃಶ್ಯದಲ್ಲಿ ಇಬ್ಬರು ಬರುತ್ತಾರೆ, ಶಿವಣ್ಣ ಅವರ ಸತ್ಯ ಪಾತ್ರ ಹಾಗೂ ನಾಯಕಿ ಮಾಧುರಿ ಅವರ ಮಕ್ಕಳ ಪಾತ್ರದಲ್ಲಿ ಇವರಿಬ್ಬರು ನಟಿಸಿದ್ದಾರೆ. ಹೆಚ್ಚು ಜನರಿಗೆ ಇದು ಗೊತ್ತಿಲ್ಲ.