ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಕಾಮನ್ ಕಂಟೆಸ್ಟಂಟ್ ಆಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಗೌಡ, ಫಿನಾಲೆ ವರೆಗು ತಲುಪಿದ್ದು, ಎಲ್ಲರಿಗೂ ಗೊತ್ತೇ ಇದೆ. ನಿವೇದಿತಾ ಗೌಡ ಬಿಗ್ ಬಾಸ್ ನಂತರ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ತಮ್ಮ ಕೋ ಕಂಟೆಸ್ಟಂಟ್ ಆಗಿದ್ದ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆಯೂ ನಡೆಯಿತು. ಆದರೆ ಇವರಿಬ್ಬರ ದಾಂಪತ್ಯ ಜೀವನ ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಈ ಜೋಡಿ ಜೊತೆಯಾಗಿ ಇದ್ದಾಗಲು ಇಬ್ಬರು ಟ್ರೋಲ್ ಆಗಿದ್ದೆ ಹೆಚ್ಚು. ನಿವೇದಿತಾ ಗೌಡ ಧರಿಸುವ ಬಟ್ಟೆ ವಿಚಾರಕ್ಕೂ ಹಲವು ಬಾರಿ ಟ್ರೋಲ್ ಆಗಿದ್ದಿದೆ. ಇಬ್ಬರು ವೈಯಕ್ತಿಕ ಕಾರಣಗಳಿಂದ ವಿಚ್ಚೇದನ ಪಡೆದರೂ ಸಹ ಇವರಿಬ್ಬರ ಹೆಚ್ಚಾಗಿ ಚರ್ಚೆ ನಡೆದಿದೆ. ವಿಚ್ಚೇದನ ಪಡೆದ ನಂತರ ನಿವೇದಿತಾ ಗೌಡ ಅವರು ನಟನೆ ಕಡೆಗೆ ಮುಖ ಮಾಡಿದ್ದಾರೆ.. ಮೊದಲನೇ ಬಾರಿ ಆಲ್ಬಮ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಮತ್ತು ತೆಲುಗು ಎರಡು ಭಾಷೆಗಳ ಆಲ್ಬಮ್ ಸಾಂಗ್ ಇದಾಗಿದ್ದು, ಸಾಂಗ್ ಕಂಪೋಸರ್ ಹಾಗೂ ಸಿಂಗರ್ ಎರಡು ಆಗಿರುವ ಗೌರಿ ನಾಯ್ಡು ಅವರೊಡನೆ ಈ ಆಲ್ಬಮ್ ಸಾಂಗ್ ಗೆ ಕೋಲ್ಯಾಬೊರೇಟ್ ಆಗಿದ್ದಾರೆ ನಿವೇದಿತಾ ಗೌಡ. ಈ ಆಲ್ಬಮ್ ಸಾಂಗ್ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಕನ್ನಡದಲ್ಲಿ ಮನಸಾರೆ ನಿನ್ನ ಎಂದು ಹಾಡಿನ ಹೆಸರು, ತೆಲುಗಿನಲ್ಲಿ ವಾಲು ಕಳ್ಳತೋ, ಈ ಆಲ್ಬಮ್ ಸಾಂಗ್ ನ ಫಸ್ಟ್ ಲುಕ್ ಪೋಸ್ಟರ್ ಶೇರ್ ಮಾಡಿದ್ದಾರೆ ನಿವೇದಿತಾ ಗೌಡ

ಫಸ್ಟ್ ಲುಕ್ ನಲ್ಲಿಯೇ ಇದೊಂದು ಅಪ್ಪಟ ರೊಮ್ಯಾಂಟಿಕ್ ಆಲ್ಬಮ್ ಸಾಂಗ್ ಎನ್ನುವುದು ಗೊತ್ತಾಗುತ್ತಿದ್ದು, ಈ ಕಾರಣಕ್ಕೆ ನಿವೇದಿತಾ ಗೌಡ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಚಂದನ್ ಶೆಟ್ಟಿಗೆ ವಿಚ್ಛೇದನ ಕೊಟ್ಟಿದ್ದು, ಈ ಅವತಾರ ಆಡೋದಕ್ಕಾ ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಿವೇದಿತಾ ಗೌಡ ಸದಾ ಸುದ್ದಿಯಲ್ಲಿ ಇರುತ್ತಿದ್ದಾರೆ. ಜನರ ಮಾತಿಗೆ ತಲೆಕೆಡಿಸಿಕೊಳ್ಳದೇ, ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿದ್ದಾರೆ.
ಸಿನಿಮಾಗಳಲ್ಲಿ ಕೂಡ ನಟಿಸಬೇಕು ಎನ್ನುವ ಆಸೆ ನಿವೇದಿತಾ ಅವರಿಗೆ ಇದ್ದು, ಈಗಾಗಲೇ ಚಂದನ್ ಶೆಟ್ಟಿ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾದು ನೋಡಬೇಕಿದೆ. ಕನ್ನಡದ ಜೊತೆಗೆ ಇನ್ನುಮುಂದೆ ಇವರು ತೆಲುಗಿನಲ್ಲಿ ಕೂಡ ಫೇಮಸ್ ಆಗುವುದರಲ್ಲಿ ಸಂಶಯವಿಲ್ಲ.