ಸಾಮಾನ್ಯರು ಕೂಡ ದಿನ ಕಳೆಯುತ್ತಿದ್ದಂತೆ ತಮ್ಮ ಪ್ರತಿಭೆಯ ಮೂಲಕ ದೊಡ್ಡ ಮಟ್ಟದ ಹೆಸರು ಮಾಡಬಹುದು ಎಂಬುದಕ್ಕೆ ಒಂದು ಉದಾರಣೆ ಎಂದರೆ ಅದು “ನಿವೇದಿತಾ ಗೌಡ”.ಈಕೆ ಮೈಸೂರಿನಲ್ಲಿ ಇದ್ದ ಒಬ್ಬ ಸುಂದರ ಸಾಮಾನ್ಯ ಹೆಣ್ಣು ಮಗು.ಎಲ್ಲರಂತೆ ಟಿಕ್ ಟಾಕ್ ಮಾಡುತ್ತ ಸಣ್ಣ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಈಕೆ. ಒಂದು ದಿನ ಬಿಗ್ ಬಾಸ್ ಸೀಸನ್ 5ರ ಪ್ರವೇಶ ಪಡೆಯುತ್ತಾಳೆ. ಇದ್ರಿಂದ ಈಕೆಯ ಲಕ್ ಹಾಗೂ ಹಣೆ ಬರಹ ಸಂಪೂರ್ಣ ಬದಲಾಗುತ್ತದೆ.ಇನ್ನು ನಿಮಗೆಲ್ಲ ತಿಳಿದುರುವ ಹಾಗೆ ಬಿಗ್ ಬಾಸ್ ಒಂದು ಸುಂದರ ವೇದಿಕೆ.ಈ ವೇದಿಕೆಯಲ್ಲಿ ನಮ್ಮ ಪ್ರತಿಭೆಗೆ ತಕ್ಕಂತೆ ನಾವು ಗುರುತಿಸಿಕೊಂಡರೆ ಇದ್ರಿಂದ ಹೊರ ಬಂದ ಕೂಡಲೇ ಒಂದು ಉತ್ತಮ ಭವಿಷ್ಯ ನಮ್ಮದಾಗುತ್ತದೆ ಎಂದು ಹೇಳಬಹುದು.ಅದರಂತೆಯೇ ನಿವೇದಿತಾ ಅವರು ಕೂಡ ತಮ್ಮ ಮುದ್ದು ಮಾತುಗಳಿಂದ ಎಲ್ಲರ ಗಮನ ಸೆಳೆದು ಟಾಪ್ ಫೈವ್ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡರು.

ಇನ್ನು ಈ ಬಿಗ್ ಬಾಸ್ ನಲ್ಲಿ ಒಳ್ಳೆಯ ಸ್ನೇಹಿತನಾಗಿದ್ದ ಸ್ಯಾಂಡಲ್ವುಡ್ ನ ರಾಪರ್ “ಚಂದನ್ ಶೆಟ್ಟಿ” ಅವರನ್ನು ಕೈ ಹಿಡಿದರು.ಇವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡ ಮರುದಿನ ದಿಂದಲೇ ದ್ ಜೋಡಿ ಟ್ರೋಲ್ ಬಾಯಿಗೆ ಸಿಲುಕಿಕೊಂಡರು.ಇವರಿಬ್ಬರು ಮಾಡಿದ ಪತ್ರಿಯೊಂದು ಕೆಲಸದಲ್ಲೂ ಕೂಡ ತಪ್ಪು ಹುಡುಕಿ ಟೀಕಿಸಿದರು. ಇದವುದಕ್ಕೋ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡರು. ನಿವೇದಿತಾ ಹಾಗೂ ಚಂದನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋ ನಲ್ಲೂ ಕೊಡ ಮೂರನೇ ಸ್ಥಾನ ಪಡೆದುಕೊಂಡರು.
ಆ ನಂತರ ಚಂದನ್ ಶೆಟ್ಟಿ ಸ್ಯಾಂಡಲ್ವುಡ್ ನಲ್ಲಿ ಪೂರ್ಣ ಪ್ರಮಾಣದ ನಟನಾಗಿ ಆಯ್ಕೆ ಆಗಿ ಒಂದರ ಹಿಂದೆ ಸಿನಿಮಾ ಮಾಡುತ್ತಿದ್ದಾರೆ. ಇತ್ತಾ ನಿವೇದಿತಾ ಮಿಸ್ ಇಂಡಿಯಾ ಆಗಲು ಎಲ್ಲಾ ತರಬೇತಿ ಪಡೆದು ರನ್ನರ್ ಸ್ಥಾನವನ್ನು ಅಲಂಕರಿಸಿದ್ದರು.ಅದಾದ ಬಳಿಕ ಮತ್ತೊಮ್ಮೆ ಕಲರ್ಸ್ ಕನ್ನಡ ದಲ್ಲಿ ಗಿಚ್ಚಿ ಗಿಳಿಗಿಲಿಯ ಶೋ ರನ್ನರ್ ಎಂದು ಗುರುತಿಸಿಕೊಂಡರು.ಇದೆಲ್ಲದುರಿಂದ ಬ್ರೇಕ್ ತೆಗೆದುಕೊಳ್ಳಲು ನಿವೇದಿತಾ ಮಾಲ್ಡಿವ್ಸ್ ಸೋಲೊ ಟ್ರಿಪ್ ಹೋಗಿದ್ದರು.
ಅಲ್ಲಿನ ಸುಂದರ ವಾತಾವರಣ ದಲ್ಲಿ ಕ್ಲಿಕ್ಕಿಸಿಕೊಂಡ ಪೋಟೋಗಳನ್ನು ಹಂಚಿಕೊಂಡ ಈಕೆಗೆ ಸಾಕಷ್ಟು ಲೈಕ್ಸ್ ಜೊತೆಗೆ ಟೀಕೆಗಳ ಮಾತುಗಳು ಸಹ ಕೇಳಿ ಬಂತು.ಈ ಬಾರಿ ಸುಮ್ಮನಾಗದ ನಿವೇದಿತಾ ಟೀಕಿಸಿದವರಿಗೆ ಟಾಂಗ್ ನೀಡಿದ್ದಾರೆ. ಟೀಕಿಸುವವರಿಗೆ ಕಾರವಾದ ಮಾತುಗಳಿಂದ ತಿರುಗೇಟು ನೀಡಿದ್ದಾರೆ. ತಮ್ಮ ಸಮಾಜಿಕ ಜಾಲತಾಣಗಳಲ್ಲಿ ಏನೆಂದು ಬರೆದುಕೊಂಡಿದ್ದಾರೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಚಂದನ್ ಅವರ ದುಡ್ಡಲ್ಲಿ ಮಜಾ ಮಾಡುತ್ತಿದ್ದಿಯಾ ಫೋಟೋ ತೆಗೆತ್ತಿರುವವರು ಯಾರು ಎಂದು ಬಹಳ ಹೀನಾಯವಾಗಿ ಮಾತನಡಿದವ್ರಿಗೆ ನಿವೇದಿತಾ “ಮನೆಯಲ್ಲಿ ಕುರುವುದನ್ನು ಬಿಟ್ಟು ಪ್ರಪಂಚ ಸುತ್ತಿ.ಅಂತಹ ಜಾಗಗಳಲ್ಲಿ ಫೋಟೋ ತೆಗೆಸಿಕೊಳ್ಳುವುದಕ್ಕೆ ದುಡ್ಡು ಕೊಟ್ಟು ನಾವು ಕರೆಸಿಕೊಳ್ಳುತ್ತೇವೆ.ಹುಡುಗ ಒಬ್ಬನೇ ಸೋಲೊ ಟ್ರಿಪ್ ಹೋದರೆ ತಪ್ಪೇನಿಲ್ಲ ಆದರೆ ಹುಡುಗಿ ಹೋದರೆ ಯಾಕೆ ಇಷ್ಟು ಸಮಸ್ಯೆ. ಒಂದು ಕೋಣೆಯ ಒಳಗೆ ಕೂತು ಬೇಕಾ ಬಿಟ್ಟಿ ಮಾತನಾಡುವುದಕ್ಕಿಂತ ಒಮ್ಮೆ ಹೊರ ಪ್ರಪಂಚವನ್ನು ನೋಡಿ” ಎಂದಿದ್ದಾರೆ.