ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಬಂದಿದ್ದ ನಿವೇದಿತಾ ಗೌಡ, ಫಿನಾಲೆ ವರೆಗು ತಲುಪಿದ ವಿಷಯ ನಮಗೆಲ್ಲಾ ಗೊತ್ತೇ ಇದೆ. ಈ ಹುಡುಗಿ ಬೆಳಕಿಗೆ ಬಂದಿದ್ದೇ ಬಿಗ್ ಬಾಸ್ ಮೂಲಕ. ಆದರೆ ಇವರು ಇಂದು ವಿಚ್ಛೇದನ ಹಾಗೂ ಸೋಷಿಯಲ್ ಮೀಡಿಯಾದ ಟ್ರೋಲ್ ವಿಚಾರದಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ನಿವೇದಿತಾ ಜೀವನದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ, ಬಿಗ್ ಬಾಸ್ ಗೆ ಬರುವುದಕ್ಕಿಂತ ಮೊದಲು ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾ ಭಾರಿ ವೈರಲ್ ಆಗಿದ್ದರು. ಬಿಗ್ ಬಾಸ್ ಇಂದ ಇನ್ನಷ್ಟು ಜನಪ್ರಿಯತೆ ಗಳಿಸಿಕೊಂಡರು. ಆದರೆ ಹೆಚ್ಚು ಸುದ್ದಿ ಆಗಿದ್ದು ಚಂದನ್ ಶೆಟ್ಟಿ ಅವರಿಂದ ಎಂದರೆ ತಪ್ಪಲ್ಲ.

ಹೌದು, ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇವರಿಬ್ಬರು ಸಹ ಮೊದಲು ಭೇಟಿ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ. ಆಗ ಇಬ್ಬರೂ ಫ್ರೆಂಡ್ಸ್ ಥರ, ಅಣ್ಣ ತಂಗಿ ಥರ ಎಂದುಕೊಂಡೆ ಇದ್ದರು. ಆದರೆ ಬಿಗ್ ಬಾಸ್ ಇಂದ ಹೊರಬಂದ ಮೇಲೆ ಇಬ್ಬರು ಭೇಟಿ ಮಾಡುವುದು ಹೆಚ್ಚಾಯಿತು, ಚಂದನ್ ಹಲವು ಸಾರಿ ಮೈಸೂರಿಗೆ ಬಂದು ನಿವೇದಿತಾರನ್ನು ಭೇಟಿ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ಫೋಟೋಸ್ ಶೇರ್ ಮಾಡುತ್ತಿದ್ದರು. ಫ್ರೆಂಡ್ಶಿಪ್ ಪ್ರೀತಿಗೆ ಚೇಂಜ್ ಆಗಿತ್ತು. ಮೈಸೂರಿನಲ್ಲಿ ಯುವದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ನಿವೇದಿತಾಗೆ ಪ್ರೊಪೋಸ್ ಮಾಡಿದ್ದರು ಚಂದನ್.
ಇಬ್ಬರು 2020ರ ಫೆಬ್ರವರಿಯಲ್ಲಿ ಮದುವೆಯಾದರು, ಆದರೆ ಇವರ ದಾಂಪತ್ಯ ಜೀವನ ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ.. ಈ ವರ್ಷ ಇವರಿಬ್ಬರು ವಿಚ್ಛೇದನ ಪಡೆದರು. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದ ಕಾರಣ ದೂರವಾಗುತ್ತಿರುವುದಾಗಿ ಹೇಳಿಕೊಂಡರು. ಇಬ್ಬರೂ ಬೇರೆಯಾದ ಮೇಲೆ ಸಿಂಗಲ್ ಆಗಿರುವ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮೊದಲಿನ ಹಾಗೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋಸ್ ಮತ್ತು ರೀಲ್ಸ್ ಇದೆಲ್ಲವನ್ನು ಶೇರ್ ಮಾಡುತ್ತಿರುತ್ತಾರೆ. ಇವರಿಗೆ ಪಾಸಿಟಿವ್ ಕಾಮೆಂಟ್ಸ್ ಗಿಂತ ನೆಗಟಿವ್ ಕಾಮೆಂಟ್ಸ್ ಗಳು ಬರುವುದೇ ಹೆಚ್ಚು ಎಂದರು ತಪ್ಪಲ್ಲ..

ವಿಚ್ಛೇದನ ಪಡೆದ ಬಳಿಕ ಕೆರಿಯರ್ ಬಗ್ಗೆ ಹೆಚ್ಚು ಗಮನ ಹರಿಸಿರುವ ನಿವೇದಿತಾ ಗೌಡ ಇತ್ತೀಚೆಗೆ ಮನಸಾರೆ ನಿನ್ನ ಆಲ್ಬಮ್ ಸಾಂಗ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗಿದ್ದು, ಈ ಹಾಡಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ ನಿವೇದಿತಾ ಗೌಡ. ಇನ್ನು ಯೂಟ್ಯೂಬ್ ನಲ್ಲಿ ಈ ಹಾಡು ಬಿಡುಗಡೆ ಆಗಿದ್ದು, 60 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವ ಪ್ಲಾನ್ ಸಹ ಹೊಂದಿದ್ದಾರೆ ನಿವೇದಿತಾ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಲಿದ್ದಾರೆ. ಇತ್ತ ಚಂದನ್ ಶೆಟ್ಟಿ ಸಹ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಇದೀಗ ಬ್ಯಾಕ್ ಲೆಸ್ ಫೋಟೋಸ್ ಗಳನ್ನು ಶೇರ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ವಿಮಿಂಗ್ ಎದುರು ನಿಂತು ಬ್ಯಾಕ್ ಲೆಸ್ ಆಗಿ ಫೋಟೋಸ್ ಗಳಿಗೆ ಪೋಸ್ ನೀಡಿದ್ದಾರೆ ನಿವೇದಿತಾ. ಇವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ಫೋಟೋಸ್ ನೋಡಿರುವ ನೆಟ್ಟಿಗರಲ್ಲಿ, ನಿವೇದಿತಾ ಅವರನ್ನು ಇಷ್ಟ ಪಡುವವರು ಪಾಸಿಟಿವ್ ಆಗಿ ಕಾಮೆಂಟ್ಸ್ ಬರೆಯುತ್ತಿದ್ದರೆ, ಇನ್ನಷ್ಟು ಜನರು ನೆಗಟಿವ್ ಆಗಿ ಬರೆದಿದ್ದಾರೆ. ಡೈವೋರ್ಸ್ ತಗೊಂಡಿದ್ದು, ಈ ರೀತಿ ಇರೋದಕ್ಕಾ ಎಂದು ನಿವೇದಿತಾ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.