ಸಿನಿಮಾ ನಟಿಯರು ಅಂದರೆ ನಟನೆಯಿಂದ ಹಿಡಿದು ತೊಡುವ ಬಟ್ಟೆಯ ತನಕ ಎಲ್ಲಾ ವಿಚಾರಕ್ಕೂ ಸುದ್ದಿಯಾಗುವವರೆ. ಇತ್ತೀಚೆಗಷ್ಟೇ ನಟಿ ಭೂಮಿ ಶೆಟ್ಟಿ ಎದೆ ಕಾಣುವಂತೆ ಬಟ್ಟೆ ಧರಿಸಿ ತೆಗೆಸಿಕೊಂಡ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು ಜೊತಗೆ ಸುದ್ದಿ ವಾಹಿನಿಗಳು ಕೂಡ ನಟಿಯನ್ನು ಟೀಕಿಸಿದ್ದರು. ಇದೀಗ ಟೀಕೆಗಳಿಗೆ ಭೂಮಿ ಶೆಟ್ಟಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟು ಸುದ್ದಿಯಲ್ಲಿದ್ದಾರೆ.

ಸುದ್ದಿ ವಾಹಿನಿಗಳು ಹೇಳಿದ್ದೇನು?
ಭೂಮಿ ಶೆಟ್ಟಿಯ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಈಕೆಯನ್ನು ವಿರೋಧಿಸಿದ್ದರು. ಜೊತೆಗೆ ಖಾಸಗಿ ಸುದ್ದಿ ವಾಹಿನಿಗಳಾದ ಸುವರ್ಣ ನ್ಯೂಸ್ ಹಾಗೂ ಪಬ್ಲಿಕ್ ಟಿವಿ ವಾಹಿನಿಯವರು ಭೂಮಿ ಶೆಟ್ಟಿ ಧರಿಸಿದ ಬಟ್ಟೆಯ ಬಗ್ಗೆ ಅವಹೇಳನ ಮಾಡುವ ಧಾಟಿಯಲ್ಲಿ ಸುದ್ದಿ ಮಾಡಿದ್ದರು.ಇದರಿಂದ ನಟಿ ತೀವ್ರ ಅಸಮಾಧಾನಗೊಂಡಿದ್ದು ಸುದ್ದಿ ವಾಹಿನಿಗಳ ವೇಲೆ ಹರಿಹಾಯ್ದಿದ್ದಾರೆ.
ಭೂಮಿ ಶೆಟ್ಟಿ ಕೊಟ್ಟ ತಿರುಗೇಟು?
ಖಾಸಗಿ ಸುದ್ದಿ ವಾಹಿನಿಗಳಲ್ಲಿ ತಮ್ಮ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭೂಮಿ ಶೆಟ್ಟಿ. ‘ನನಗೆ ನಾನು ಧರಿಸಿದ ಬಟ್ಟೆಯ ಬಗ್ಗೆ ನಾಚಿಕೆ ಇಲ್ಲ. ಆದರೆ ನಿಮ್ಮ ನಡೆಯ ಬಗ್ಗೆ ಅಹಸ್ಯವಾಗುತ್ತಿದೆ. ನಾನು ವೈಯಕ್ತಿಕವಾಗಿ ನಟರು ಮತ್ತು ಮಾಧ್ಯಮಗಳು ನಮ್ಮ ಸಮಾಜದ ಶ್ರೇಷ್ಠ ಸ್ತಂಭಗಳಿದ್ದಂತೆ ಎಂದು ಭಾವಿಸುತ್ತೇನೆ. ಜನರು ಹೀನಾಯವಾಗಿ ಮಾತನಾಡುತ್ತಾರೆ ಸರಿ, ಆದರೆ ಮಾಧ್ಯಮಗಳು? ಆ ಕೊಳಕು ಮಾತುಗಳನ್ನು ಮನರಂಜಿಸುವ ಮೂಲಕ ನೀವು ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೀರಿ?’ ಎಂದು ಪ್ರಶ್ನಿಸುವ ಮೂಲಕ ವಾಹಿನಿಗಳಿಗೆ ತಿರುಗೇಟು ನೀಡಿದ್ದಾರೆ.