ನಟಿ ನೇಹಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ಇವರು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಚಿರಪರಿಚಿತರಾದವರು. ಧಾರಾವಾಹಿಯಲ್ಲಿ ಶ್ರುತಿ ಪಾತ್ರದ ಮೂಲಕ ಮನೆಮಾತಾಗಿದ್ದರು ನೇಹಾ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಜನಪ್ರಿಯತೆ ಎರಡನ್ನು ತಂದುಕೊಟ್ಟಿತು. ಬಳಿಕ ನೇಹಾ ಅವರು ಇತ್ತೀಚೆಗೆ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನೇಹಾ ಅವರ ಫ್ಯಾಮಿಲಿ ಚಿತ್ರರಂಗದಲ್ಲೇ ಇದೆ. ಇವರ ತಂದೆ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿ, ಒಳ್ಳೆಯ ಹೆಸರು ಮಾಡಿರುವವರು. ಇವರ ಅಕ್ಕ ಸೋನು ಗೌಡ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವವರು. ಇನ್ನು ನೇಹಾ ಗೌಡ ಕಿರುತೆರೆಯಲ್ಲಿ ಬಹಳ ಫೇಮಸ್. ಹಾಗೆಯೇ ಇವರ ಪತಿ ಚಂದನ್ ಸಹ ಈಗ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೀಗೆ ನೇಹಾ ಅವರ ಫ್ಯಾಮಿಲಿ ಪೂರ್ತಿ ಬಣ್ಣದ ಲೋಕದ ಜೊತೆಗೆ ನಂಟನ್ನು ಹೊಂದಿದೆ.

ಇನ್ನು ನೇಹಾ ಗೌಡ ಅವರು ಚಂದನ್ ಅವರೊಂದಿಗೆ ಮದುವೆಯಾಗಿ, ರಾಜ ರಾಣಿ ಶೋ ನಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವರ್ಷ ಮೇ ತಿಂಗಳಿನಲ್ಲಿ ತಾವು ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದರು. ಇವರಿಗೆ ಈ ವರ್ಷದ ಅನುಬಂಧ ಅವಾರ್ಡ್ಸ್ ನಲ್ಲಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಲಾಯಿತು. ಅಭಿಮಾನಿಗಳು ಸಹ ನೇಹಾ ಅವರಿಗೆ ಯಾವಾಗ ಮಗು ಜನಿಸುತ್ತದೆ ಎಂದು ಕಾಯುತ್ತಿದ್ದರು. ಆ ಘಳಿಗೆ ಈಗ ಬಂದಿದೆ.

ಆಕ್ಟೊಬರ್ 29ರಂದು ನೇಹಾ ಮತ್ತು ಚಂದನ್ ಗೌಡ ದಂಪತಿಗೆ ಹೆಣ್ಣುಮಗು ಜನಿಸಿದೆ. ದೀಪಾವಳಿ ಹಬ್ಬದ ವೇಳೆ ಈ ಜೋಡಿ ಮುದ್ದಾದ ಮಗಳನ್ನು ಬರಮಾಡಿಕೊಂಡಿದ್ದಾರೆ. ಚಂದನ್ ಅವರಿಗೆ ಹೆಣ್ಣುಮಗು ಆಗಲಿ ಎಂದು ಆಸೆ ಇತ್ತು. ಅದೇ ರೀತಿ ಈಗ ಈ ಮುದ್ದಾದ ಜೋಡಿಗೆ ಹೆಣ್ಣುಮಗು ಜನಿಸಿದೆ. ಈ ಸಂತೋಷದ ವಿಚಾರವನ್ನು ಇಬ್ಬರೂ ಸಹ ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಈ ಸಿಹಿ ಸುದ್ದಿ ಕೇಳಿದ ಅಭಿಮಾನಿಗಳು ಸಂತೋಷಗೊಂಡಿದ್ದು, ಇಬ್ಬರಿಗು ವಿಶ್ ಮಾಡುತ್ತಿದ್ದಾರೆ. ಇತ್ತೀಚೆಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಕವಿತಾ ಗೌಡ ಅವರು ಸಹ ಗಂಡು ಮಗುವಿಗೆ ಜನ್ಮ ನೀಡಿದರು. ಒಂದೇ ಧಾರಾವಾಹಿಯಲ್ಲಿ ನಟಿಸಿದ ಇಬ್ಬರು ನಟಿಯರು ಒಂದೇ ಸಮಯಕ್ಕೆ ಗರ್ಭಿಣಿ ಆಗಿ, ಕೆಲವು ದಿನಗಳ ಅಂತದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.