ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ‘ಪುಷ್ಪಾ’ ಸಿನಿಮಾ ಮೂಲಕ ನ್ಯಾಷನಲ್ ಕ್ರಷ್ ಎನಿಸಿಕೊಂಡವರು. ಸದ್ಯ, ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷಾ ಸಿನಿಮಾಗಳಲ್ಲೇ ಹೆಚ್ಚು ಆಫರ್ ಗಳು ಬರುತ್ತಿವೆ. ಈ ನಡುವೆ ರಶ್ಮಿಕಾ ಮಂದಣ್ಣ ತಮ್ಮ ಅಸಿಸ್ಟೆಂಟ್ ಮದುವೆಯಲ್ಲಿ ಭಾಗಿಯಾಗಿದ್ದು ಯಾವುದೋ ವಿಚಾರಕ್ಕೆ ಮದುವೆ ಮಂಟಪದಲ್ಲಿ ನಾಚಿಕೊಂಡಿದ್ದಾರೆ. ರಶ್ಮಿಕಾ ನಾಚಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಹಳದಿ ಸ್ಯಾರಿಯಲ್ಲಿ ಧರಿಸಿ ತನ್ನ ಅಸಿಸ್ಟೆಂಟ್ ಆಗಿರುವ ಸಾಯಿ ಮದುವೆಗೆ ಹೋಗಿದ್ದಾರೆ. ಮೊದಲೇ ಆಹ್ವಾನಿಸಿದ್ದರು ಕೂಡ ಫುಲ್ ಬ್ಯುಸಿ ಇರುತ್ತಾರೆ. ಹೀಗಾಗಿ ರಶ್ಮಿಕಾ ಮದುವೆಗೆ ಬರುತ್ತಾರೋ, ಇಲ್ವೋ ಎಂದು ಗೊತ್ತಿರಲಿಲ್ಲ. ಆದ್ರೆ ಅಸಿಸ್ಟೆಂಟ್ ಸಾಯಿ ವಿವಾಹಕ್ಕೆ ರಶ್ಮಿಕಾ ಸಪ್ರೈಸ್ ಆಗಿ ಎಂಟ್ರಿ ಕೊಟ್ಟು ಎಲ್ಲರನ್ನು ಖುಷಿ ಪಡಿಸಿದ್ದಾರೆ.
ನೇರ ವೇದಿಕೆ ಮೇಲೆ ಹೋದ ರಶ್ಮಿಕಾ ಮಂದಣ್ಣ ಅವರು ನವ ಜೋಡಿಗೆ ಅಕ್ಕಿಕಾಳು ಹಾಕಿ, ಆಶೀರ್ವಾದಿಸಿದ್ದಾರೆ. ಈ ವೇಳೆ ವರ ಸಾಯಿ ಹಾಗೂ ವಧು ಇಬ್ಬರು ರಶ್ಮಿಕಾ ಅವರ ಕಾಲಿಗೆ ಬಿದ್ದಿದ್ದಾರೆ. ಈ ವೇಳೆ ಏನೂ ಮಾಡಬೇಕು ಎಂದು ಗೊತ್ತಾಗದೇ ನಾಚಿಕೊಂಡು ಹಿಂದೆ-ಮುಂದೆ ಸರಿದಾಡಿ ಕೈ, ಕೈ ಹಿಸುಕಿಕೊಂಡು ಕೊನೆಗೆ ಆ ನವ ದಂಪತಿಗೆ ಕೈ ಮುಗಿದಿದ್ದಾರೆ. ಬಳಿಕ ನವಜೋಡಿಯ ಫ್ಯಾಮಿಲಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.