ಜೀವನದಲ್ಲಿ ನಾವಂದುಕೊಂಡ ಹಾಗೆ ಯಾವಾಗಲೂ ಎಲ್ಲವೂ ನಡೆಯುವುದಿಲ್ಲ. ಹಲವು ಸಾರಿ ನಮ್ಮ ಬದುಕು ನಮಗೇ ಗೊತ್ತಾಗದ ಹಾಗೆ ನಾವು ಊಹಿಸಿಯೂ ಇರದ ಮಟ್ಟಕ್ಕೆ, ಸ್ಥಿತಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಅಂಥ ಪರಿಸ್ಥಿತಿಗಳು ಸಾಮಾನ್ಯ ಜನರ ಜೀವನದಲ್ಲಿ ಮಾತ್ರವಲ್ಲ, ದೊಡ್ಡ ದೊಡ್ಡವರ ಜೀವನದಲ್ಲಿ ಕೂಡ ನಡೆಯುತ್ತದೆ. ಬದುಕು ನಾವೆಲ್ಲರೂ ಅಂದುಕೊಂಡ ಹಾಗಂತು ಇರುವುದಿಲ್ಲ ಅನ್ನೋದೇ ಕಟು ಸತ್ಯ. ಅದರಲ್ಲೂ ಚಿತ್ರರಂಗದ ವಿಚಾರಕ್ಕೆ ಬಂದರೆ ಇದು ತುಂಬಾ ಹೋಲುತ್ತದೆ. ಹೊರಗಡೆ ಇಂದ ಕಲಾವಿದರನ್ನು ನೋಡುವ ನಾವು, ಅವರು ಬಣ್ಣದ ಬದುಕಿನಲ್ಲಿ ಬಹಳ ಸಂತೋಷದಿಂದ ಇದ್ದಾರೆ, ಅವರ ಜೀವನದಲ್ಲಿ ಲಕ್ಷುರಿ ಇದೆ ಎಂದುಕೊಳ್ಳುತ್ತೇವೆ. ಆದರೆ ಎಲ್ಲವೂ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಅವರ ಜೀವನದಲ್ಲಿ ಇರುವ ಕಷ್ಟಗಳು ಅವರಿಗೆ ಮಾತ್ರ ಗೊತ್ತಿರುತ್ತದೆ.
ಹೌದು, ಕಲಾವಿದರನ್ನು ಹೊರಗಿನಿಂದ ಬೆರಗು ಗಣ್ಣುಗಳಿಂದ ನಾವು ನೋಡುತ್ತೇವೆ. ಆದರೆ ಅಸಲಿ ಸತ್ಯ ಬೇರೆಯೇ ಇರುತ್ತದೆ. ಅದನ್ನರಿತು ಕೊಳ್ಳುವುದಕ್ಕೆ ಕಷ್ಟವೂ ಹೌದು. ಕೆಲವು ಕಲಾವಿದರ ಬದುಕು ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೆ ಹಲವರ ಬದುಕು ಎಲೆಮರೆ ಕಾಯಿಯಂತೆ ಮುಗಿದೇ ಹೋಗುತ್ತದೆ. ಅಂಥ ಅನೇಕ ಉದಾಹರಣೆಗಳು ಸಹ ನಮಗೆ ಕಾಣುತ್ತದೆ. ಅಂಥ ಒಬ್ಬ ವ್ಯಕ್ತಿಯ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ. ಇವರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು, ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿದವರು, ರಾಷ್ಟ್ರಪ್ರಶಸ್ತಿಯನ್ನು ಗೆದ್ದವರು, ಆದರೆ ಇಂದು ಮನೆ ಮಠ ಇಲ್ಲದೇ, ನೋಡಿಕೊಳ್ಳುವವರು ಯಾರೂ ಇಲ್ಲದೇ, ಬುದ್ಧಿ ಕಳೆದುಕೊಂಡು ಒಂಟಿಯಾಗಿ ಬದುಕುತ್ತಿದ್ದಾರೆ. ಇವರನ್ನು ನೋಡಿದರೆ ದುಃಖವಾಗುತ್ತದೆ.

ಹೌದು, ಈ ಪರಿಸ್ಥಿತಿಯಲ್ಲಿ ಇರುವ ಹಿರಿಯ ನಟಿಯೊಬ್ಬರ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ. ಇವರ ಹೆಸರು ಮಾರಿಕಾ, ಇವರನ್ನು ಜನರು ಮಾರಿಕಣ್ಣು ಎಂದು ಕರೆಯುತ್ತಾರೆ. ಇವರು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ಖ್ಯಾತ ನಟಿ. ಆಗೆಲ್ಲಾ ಎಂ.ಜಿ.ಆರ್ ಅವರು, ಶಿವಾಜಿ ಗಣೇಶನ್ ಅವರು ಹಾಗೂ ಇನ್ನಿತರ ಹಲವು ಕಲಾವಿದರು ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು. ಹೆಚ್ಚಾಗಿ ನಾಟಕಗಳನ್ನು ಮಾಡುತ್ತಿದ್ದರು. ಮಾರಿಕಣ್ಣು ಅವರು ಸಹ ಅದೇ ರೀತಿ ಎಂ.ಜಿ.ಆರ್ ಅವರೊಡನೆ ಶಿವಾಜಿ ಗಣೇಶನ್ ಅವರೊಡನೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಕಲಾವಿದೆ, ಬಹಳ ಅದ್ಭುತವಾದ ಅಭಿನೇತ್ರಿಯರ ಪೈಕಿ ಇವರು ಕೂಡ ಒಬ್ಬರು. ಆಗಿನ ಇವರ ಅಭಿನಯವನ್ನು ನೋಡುವುದಕ್ಕೋಸ್ಕರ ನಾಟಕ ನೋಡೋದಕ್ಕೆ ಜನರು ಬರುತ್ತಿದ್ದರಂತೆ. ಊರೂರುಗಳಿಂದ ಸಹ ಬರುತ್ತಿದ್ದರು ಎನ್ನುತ್ತಾರೆ ಜನರು. ಅಂಥಾ ಕಲಾವಿದೆ ಇವರು.
ನಾಟಕಗಳಲ್ಲಿ, ಬೀದಿ ನಾಟಕಗಳಲ್ಲಿ ಎಲ್ಲದರಲ್ಲೂ ನಟಿಸಿ, ಹೆಸರು ಪಡೆದ ಮಾರಿಕಣ್ಣು ಅವರು, ನಂತರ ಚಿತ್ರರಂಗಕ್ಕೆ ಕೂಡ ಎಂಟ್ರಿ ಕೊಟ್ಟರು. ಹಿರಿಯ ಕಲಾವಿದರ ಜೊತೆಗೆ ಹಲವು ಸಿನಿಮಾಗಳಲ್ಲಿ ಸಹ ನಟಿಸಿದರು. ತಿರುವಿಲೈಯಾಡಲ್ ಸೇರಿದಂತೆ ಆಗಿನ ಕಾಲದ ಬಹುದೊಡ್ಡ, ಅತ್ಯುತ್ತಮ ತಮಿಳು ಸಿನಿಮಾಗಳಲ್ಲಿ ನಟಿಸಿ, ನಟರ ಹಾಗೆ ಸೂಪರ್ ಹಿಟ್ ಹೀರೋಯಿನ್ ಆಗಿ ಹೆಸರನ್ನು ಸಹ ಪಡೆದರು. ಇವರು ನಾಟಕಗಳಲ್ಲಿ ಹೆಸರು ಮಾಡಿದ ಹಾಗೆ, ಸಿನಿಮಾದಲ್ಲಿ ಸಹ ಹೆಸರು ಮಾಡಿದರು. ಇವರ ನಾಟಕಗಳನ್ನು ನೋಡಲು ಜನರು ಹೇಗೆ ಥಿಯೇಟರ್ ಗೆ ಬರುತ್ತಿದ್ದರೋ, ಅದೇ ರೀತಿ ಇವರ ಸಿನಿಮಾಗಳನ್ನು ನೋಡುವುದಕ್ಕೆ ಸಹ ಬರುತ್ತಿದ್ದರು. ಹೀರೋಗಳ ಹಾಗೆ ಇವರಿಗೆ ಸಹ ಬಹಳ ಬೇಡಿಕೆ ಇತ್ತು. ಇದಕ್ಕಿಂತ ಮೀರಿದ ಸಾಧನೆಯನ್ನು ಸಹ ಮಾರಿಕಣ್ಣು ಅವರು ಮಾಡಿದ್ದಾರೆ. ದೊಡ್ಡ ದೊಡ್ಡ ಅವಾರ್ಡ್ ಗಳನ್ನು ಸಹ ಪಡೆದಿದ್ದಾರೆ.

ಅತ್ಯುತ್ತಮ ಅಭಿನೇತ್ರಿ ಎಂದು ಮಾರಿಕಣ್ಣು ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ, ರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಇವರು, ಇಂದು ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು, ಯಾರೂ ಇಲ್ಲದೇ, ಏನೂ ಇಲ್ಲದೇ ಬದುಕುತ್ತಿದ್ದಾರೆ. ಇವರಿಗೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಆದರೆ ಯಾರೂ ಕೂಡ ಇವರನ್ನು ನೋಡಿಕೊಳ್ಳುವುದಿಲ್ಲ. ಇವರ ಬುದ್ಧಿ ಸಹ ಸ್ಥಿಮಿತದಲ್ಲಿ ಇರುವುದಿಲ್ಲ, ದೇವಸ್ಥಾನಗಳಲ್ಲಿ ಅಥವಾ ಬೀದಿಗಳಲ್ಲಿ ಇದೇ ರೀತಿ ಓಡಾಡುತ್ತಾ ಇರುತ್ತಾರೆ, ನಾವೇ ಅವರಿಗೆ ಆಹಾರ ಕೊಡುತ್ತೇವೆ ಎಂದು ಇವರು ಇರುವ ಊರಿನ ಗ್ರಾಮಸ್ಥರು ಹೇಳಿದ್ದಾರೆ.. ಆ ರೀತಿ ಇದ್ದರೂ ಸಹ ಯಾವತ್ತೂ, ಯಾರಿಗೂ ತೊಂದರೆ ಕೊಟ್ಟಿಲ್ಲವಂತೆ ಮಾರಿಕಣ್ಣು ಅವರು. ತಮ್ಮ ಪಾಡಿಗೆ ತಾವು ಇರುತ್ತಾರಂತೆ.
ಬೀದಿಗಳಲ್ಲಿ ಓಡಾಡುತ್ತಾರಂತೆ, ಅದೇ ರೀತಿ ದೇವಸ್ಥಾನದ ಅಂಗಳದಲ್ಲಿ ಇರೋದು, ಅಲ್ಲಿಯೇ ಕುಳಿತಿರೋದು ಮಾಡುತ್ತಾರಂತೆ. ಯಾರಿಗೂ ಕೂಡ ತೊಂದರೆ ಕೊಡುವುದಿಲ್ಲವಂತೆ. ಇವರನ್ನು ಮಾತನಾಡಿಸೋಕೆ, ಕರೆದುಕೊಂಡು ಹೋಗೋಕೆ ಇಷ್ಟು ವರ್ಷವಾದರೂ ಯಾರು ಕೂಡ ಬಂದಿಲ್ಲವಂತೆ. ಇನ್ನು ಕೆಲವರು ಹೇಳುವ ಹಾಗೆ, ಇವರ ಗಂಡ ತೀರಿಹೋದ ನಂತರ ಈ ರೀತಿ ಆಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅಸಲಿ ವಿಷಯ ಏನು ಎನ್ನುವುದು ಯಾರಿಗೂ ಸಹ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಒಂದು ಕಾಲದಲ್ಲಿ ನಟಿಯಾಗಿ ರಾಷ್ಟ್ರಪ್ರಶಸ್ತಿ ಪಡೆದ ಮಾರಿಕಣ್ಣು ಅವರು ಇಂದು ಈ ರೀತಿ ಜೀವನ ನಡೆಸಿರುತ್ತಿರುವದನ್ನು ನೋಡಿದರೆ ಬಹಳ ಬೇಸರ ಆಗುತ್ತದೆ. ಯಾರ ಜೀವನವೂ ನಾವಂದುಕೊಂಡ ಹಾಗೆ ಇರುವುದಿಲ್ಲ ಅನ್ನೋದಂತೂ ಸತ್ಯ. ಮಾರಿಕಣ್ಣು ಅವರ ಜೀವನವೇ ಇದಕ್ಕೆ ಸಾಕ್ಷಿಯಾಗಿದೆ.



