ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಟಿಯರಲ್ಲಿ ಲೈಲಾ ಕೂಡ ಒಬ್ಬರು. ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆರೆಯಿಂದ ದೂರವೇ ಉಳಿದಿದ್ದ ಲೈಲಾ ಅವರು ಈಗ ಮತ್ತೆ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಕೆಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಂಟರ್ವ್ಯೂ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಹಲವು ಇಂಟರ್ವ್ಯೂ ಗಳಲ್ಲಿ ಮಾತನಾಡಿರುವ ಇವರು ಇದೀಗ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ತಮಗೆ ಇರುವ ಅಪರೂಪದ ವಿಚಿತ್ರ ಖಾಯಿಲೆಯ ಬಗ್ಗೆ ಮಾತನಾಡಿದ್ದಾರೆ. ಇವರ ಖಾಯಿಲೆ ಬಗ್ಗೆ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಥರಾನು ಖಾಯಿಲೆಗಳು ಬರುತ್ತಾ ಎಂದು ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಇವರಿಗೆ ಆಗಿರೋದೇನು? ಇಲ್ಲಿದೆ ಫುಲ್ ಡೀಟೇಲ್ಸ್.
ಖ್ಯಾತ ನಟಿ ಲೈಲಾ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳು ಚಿತ್ರರಂಗದಲ್ಲಿ. 90ರ ದಶಕ ಮುಗಿದು 2000ರ ಹೊಸ ದಶಕ ಶುರುವಾಗೋ ವೇಳೆಗೆ ಚಿತ್ರರಂಗಕ್ಕೆ ಬಂದ ಸುಂದರವಾದ ನಟಿಯರ ಪೈಕಿ ಇವರು ಕೂಡ ಒಬ್ಬರು. ನಟಿ ಲೈಲಾ ಅವರು ತಮಿಳಿನ ಪಿತಾಮಗನ್ ಸಿನಿಮಾದಲ್ಲಿ ಅಭಿನಯಿಸಿರುವ ಪಾತ್ರವನ್ನು ಜನರು ಇವತ್ತಿಗೂ ಮರೆತಿಲ್ಲ. ಆ ಕಾಮಿಡಿ, ಇವರ ಚೈಲ್ಡಿಶ್ ನೆಸ್ ಇದೆಲ್ಲವನ್ನು ಜನರು ಸಖತ್ ಎಂಜಾಯ್ ಮಾಡಿದ್ರು, ಸೂರ್ಯ ಅವರ ಜೋಡಿಯಾಗಿ ನಟಿಸಿದ್ದರು. ಇದೇ ಸಿನಿಮಾವನ್ನು ಕನ್ನಡದಲ್ಲಿ ಅನಾಥರು ಆಗಿ ರಿಮೇಕ್ ಮಾಡಲಾಗಿತ್ತು. ತಮಿಳಿನಲ್ಲಿ ಲೈಲಾ ಅವರು ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ರಾಧಿಕಾ ಅವರು ನಿರ್ವಹಿಸಿದ್ದರು. ರಾಧಿಕಾ ಅವರಿಗೂ ಈ ಪಾತ್ರ ಒಳ್ಳೆಯ ಹೆಸರನ್ನೇ ತಂದುಕೊಟ್ಟಿತ್ತು.

ತಮಿಳಿನ ಸ್ಟಾರ್ ಹೀರೋಗಳ ಜೊತೆಗೆ, ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ಅನೇಕ ಸಿನಿಮಾಗಳಲ್ಲಿ ಲೈಲಾ ಅವರು ನಟಿಸಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೂಡ ನೀಡಿದ್ದಾರೆ. ಇನ್ನು ಕನ್ನಡದಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಮ್ಮ ಪ್ರೀತಿಯ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆಗೆ ದೇವರ ಮಗ ಸಿನಿಮಾದಲ್ಲಿ ನಟಿಸಿದ್ದಾರೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ತಂದೆಗೆ ತಕ್ಕ ಮಗ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಟ ಜಗ್ಗೇಶ್ ಅವರ ರಾಮಕೃಷ್ಣ ಸಿನಿಮಾದಲ್ಲಿ, ಜಗ್ಗೇಶ್ ಅವರ ಜೋಡಿಯಾಗಿ ನಟಿಸಿದ್ದಾರೆ. ರಾಮಕೃಷ್ಣ ಸಿನಿಮಾದ ಕಾಮಿಡಿ ದೃಶ್ಯಗಳನ್ನು ಇವತ್ತಿಗು ಕನ್ನಡ ಚಿತ್ರಪ್ರೇಮಿಗಳು ಮರೆತಿಲ್ಲ. ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳೇ ಆದರೂ, ನೆನಪಿನಲ್ಲಿ ಇಟ್ಟುಕೊಳ್ಳುವಂಥ ಸಿನಿಮಾಗಳಲ್ಲೇ ನಟಿಸಿದ್ದಾರೆ..
ಇನ್ನು ಲೈಲಾ ಅವರು ಒಂದು ಪೀಕ್ ಟೈಮ್ ಆದ ನಂತರ ನಟನೆ ಇಂದ ದೂರವೇ ಉಳಿದಿದ್ದರು. ಚಿತ್ರರಂಗದಲ್ಲಿ ನಟಿಯರ ಜೀವನ ಇದೇ ರೀತಿ ಎಂದು ಹೇಳಿದರೂ ತಪ್ಪಲ್ಲ. ಒಂದಷ್ಟು ವರ್ಷಗಳ ಕಾಲ ಅವರಿಗೆ ಬೇಡಿಕೆ ಇರುತ್ತದೆ. ಹೊಸ ನಟಿಯರು ಬರುತ್ತಿದ್ದ ಹಾಗೆ, ಇವರಿಗೆ ಬೇಡಿಕೆ ಆಗುತ್ತಾ ಬರುತ್ತದೆ. ಬೇಡಿಕೆ ಕಡಿಮೆ ಆಗುತ್ತಿದ್ದ ಹಾಗೆ, ಅವರಿಗೆ ಸಿಗುತ್ತಿದ್ದ ಅವಕಾಶಗಳು ಕಡಿಮೆ ಆಗುವುದಕ್ಕೆ ಶುರುವಾಗುತ್ತದೆ. ಮೊದಲಿನಿಂದಲು ಇದು ನಡೆದುಕೊಂಡು ಬರುತ್ತಿರುವುದು ಇದೇ ರೀತಿ. ಬಹಳಷ್ಟು ನಟಿಯರು ಇದೇ ಕಾರಣಕ್ಕೆ ಚಿತ್ರರಂಗದಿಂದ ದೂರವಿದ್ದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನ ಕೊಡುವುದಕ್ಕೆ ಶುರು ಮಾಡುತ್ತಾರೆ. ಲೈಲಾ ಅವರ ಬದುಕು ಕೂಡ ಇದೇ ರೀತಿ ಆಗಿದೆ. ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.

ಈಗ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ರಿಯಾಲಿಟಿ ಶೋಗಳಿಗೆ ಬಂದಿದ್ದಾರೆ. ಹಾಗೆಯೇ ಕೆಲವು ಇಂಟರ್ವ್ಯೂ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಇಂಟರ್ವ್ಯೂ ಗಳಲ್ಲಿ ಅವರ ಸಿನಿಮಾ ಜರ್ನಿ ಬಗ್ಗೆ, ಚಿತ್ರರಂಗದಲ್ಲಿ ನಡೆದ ಘಟನೆಗಳ ಬಗ್ಗೆ ಹಾಗೆಯೇ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದ ಅವರ ಬಗ್ಗೆ ನಮಗೆ ತಿಳಿಯದ ಅನೇಕ ವಿಚಾರಗಳು ಗೊತ್ತಾಗುತ್ತದೆ. ಲೈಲಾ ಅವರ ವಿಚಾರದಲ್ಲಿ ಸಹ ಹೀಗೆ ಆಗಿದ್ದು, ಇತ್ತೀಚಿನ ಸಂದರ್ಶನ ಒಂದರಲ್ಲಿ ಇವರು ತಮಗೆ ಇರುವ ವಿಚಿತ್ರವಾದ ಖಾಯಿಲೆಯ ಬಗ್ಗೆ ಮಾತನಾಡಿದ್ದು, ಆ ವಿಷಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಲೈಲಾ ಅವರಿಗೆ ಇರುವ ಸಮಸ್ಯೆ ಆದರೂ ಏನು ಎಂದು ನೋಡುವುದಾದರೆ, ಇವರಿಗೆ ಒಂದು ವಿಚಿತ್ರವಾದ ಖಾಯಿಲೆ ಇದೆ. ಅದೇನು ಎಂದರೆ ಲೈಲಾ ಅವರು ಒಮ್ಮೆ ನಗುವುದನ್ನು ನಿಲ್ಲಿಸಿದರೆ ಆಟೊಮ್ಯಾಟಿಕ್ ಆಗಿ ಕಣ್ಣೀರು ಬರುವುದಕ್ಕೆ ಶುರುವಾಗುತ್ತದೆ. ಹೌದು, ನಗುತ್ತಿದ್ದವರು ನಗುವನ್ನೇ ನಿಲ್ಲಿಸಿಬಿಟ್ಟರೆ ಯಾವುದೇ ಕಾರಣ ಇಲ್ಲದೇ ಅಳುವುದಕ್ಕೆ ಶುರು ಮಾಡಿಬಿಡುತ್ತಾರಂತೆ. ಇದು ದುಃಖದಿಂದ ಅಲ್ಲ, ಅಥವಾ ಯಾವುದೇ ಘಟನೆ ಇಂದ ಅಲ್ಲ. ಇದ್ದಕ್ಕಿದ್ದಂತೆ ಅವರಿಗೆ ಅಳು ಬರುವುದಕ್ಕೆ ಶುರುವಾಗಿ ಬಿಡುತ್ತದೆ. ಇಂಥದ್ದೊಂದು ವಿಚಿತ್ರ ಖಾಯಿಲೆ ಇಂದ ಲೈಲಾ ಅವರು ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಂದರ್ಶನ ಒಂದರಲ್ಲಿ ಈ ವಿಚಾರ ತಿಳಿಸಿದ್ದಾರೆ ಲೈಲಾ ಅವರು..

ಈ ಸಮಸ್ಯೆ ಇರುವ ಕಾರಣಕ್ಕೆ, ಶಿವಪುತ್ರುಡು ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಅವರು ಲೈಲಾ ಅವರಿಗೆ ಒಂದು ಚಾಲೆಂಜ್ ಹಾಕಿದ್ದರಂತೆ. ಅದೇನು ಎಂದರೆ, ಲೈಲಾ ಅವರು 1 ನಿಮಿಷಗಳ ನಗದೇ ಸುಮ್ಮನೆ ಇರಬೇಕು ಎಂದು. ಲೈಲಾ ಅವರು ಚಾಲೆಂಜ್ ಸ್ವೀಕರಿಸಿದರು ಸಹ, 30 ಸೆಕೆಂಡ್ ಗಳ ನಂತರ ದಿಢೀರ್ ಎಂದು ಕಣ್ಣೀರು ಬರುವುದಕ್ಕೆ ಶುರುವಾಗಿತ್ತಂತೆ. ಈ ರೀತಿಯ ಘಟನೆಗಳು ಲೈಲಾ ಅವರ ಲೈಫ್ ನಲ್ಲಿ ಸಾಕಷ್ಟು ನಡೆದಿದೆ. ಇನ್ನು ಇವರಿಗೆ ಇರುವ ಈ ಖಾಯಿಲೆಯ ಬಗ್ಗೆ ತಿಳಿದ ಫ್ಯಾನ್ಸ್ ಶಾಕ್ ಆಗಿದ್ದು, ಈ ಥರಾನು ಖಾಯಿಲೆಗಳು ಬರುತ್ತಾ? ಎಂದು ಆಶ್ಚರ್ಯಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಪಂಚ ಎಷ್ಟು ವಿಚಿತ್ರ ಎನ್ನುವುದು ಇದರಿಂದ ಗೊತ್ತಾಗುತ್ತದೆ.