Viral Video: ದೊಡ್ಡವರಾಗಲಿ, ಚಿಕ್ಕವರಾಗಲಿ ಬಸ್ಸು, ರಿಕ್ಷಾ, ಮೆಟ್ರೋ ಅಥವಾ ರೈಲಿನ ಕಿಟಕಿಯ ಬಳಿ ಫೋನ್ ಬಳಸುವಾಗ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಕ್ಷಣಾರ್ಧದಲ್ಲಿ ಮೊಬೈಲ್ ಕದಿಯುವ ಕಳ್ಳರು ಹುಟ್ಟಿಕೊಂಡಿದ್ದಾರೆ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಇನ್ನು ಜನ ಅಸಡ್ಡೆ ತೋರುತ್ತಿರುವುದು ವಿಷಾದನೀಯ. ನೋಡಿ…ಇತ್ತೀಚೆಗೆ ಇದೇ ತರಹದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ರೈಲಿನೊಳಗೆ ಹುಡುಗಿಯೊಬ್ಬಳು ಫೋನ್ನಲ್ಲಿ ಏನನ್ನೋ ನೋಡುತ್ತಿದ್ದಾಳೆ. ಈ ಸಮಯದಲ್ಲಿ ಒಬ್ಬ ವ್ಯಕ್ತಿ ಬಂದು ಹುಡುಗಿಯಿಂದ ಫೋನ್ ಕಿತ್ತುಕೊಂಡು ಓಡಿಹೋಗುತ್ತಾನೆ. ಇದು ಕೆಲವೇ ಸೆಕೆಂಡುಗಳಲ್ಲಿ ನಡೆಯಿತು. ಏನಾಯಿತು ಎಂದು ಹುಡುಗಿಗೆ ಅರ್ಥವಾಗುತ್ತಿಲ್ಲ. ಸಂಪೂರ್ಣ ಘಟನೆಯ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
"ट्रेन में बैठते समय सावधानी बरतें"
देखिए कैसे खिड़की में से बच्ची से फोन छीनकर चला गया !!
आजकल फोन चोरी वाली घटनाएं कुछ ज्यादा बढ़ रही हैं !!#ViralVideo #Trending #tren pic.twitter.com/C4bRzGKcfY
— MANOJ SHARMA LUCKNOW UP (@ManojSh28986262) October 2, 2024
ವೈರಲ್ ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತೋರಿಸಿರುವ ಹಾಗೆ ಘಟನೆ ರಾತ್ರಿ ವೇಳೆ ನಡೆದಿದೆ. ರೈಲು ರೈಲ್ವೆ ನಿಲ್ದಾಣದ ಬಳಿ ಹೋಗುತ್ತಿರುವಂತೆ ತೋರುತ್ತದೆ. ಇಬ್ಬರು ಹುಡುಗಿಯರು ತಮ್ಮ ಸೀಟಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಒಂದು ಹುಡುಗಿ ಕಿಟಕಿಯ ಬಳಿ ಅಂಟಿಕೊಂಡು ಕುಳಿತಿದ್ದಾಳೆ. ಇದೇ ಸಮಯದಲ್ಲಿ, ಒಬ್ಬ ವ್ಯಕ್ತಿ ಕಿಟಕಿಯ ಮೂಲಕ ಹುಡುಗಿಯಿಂದ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರೈಲಿನ ಕಿಟಕಿಯ ಬಳಿ ವ್ಯಕ್ತಿಯೊಬ್ಬ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರೈಲು ನಿಧಾನವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆ. ರೈಲು ಚಲಿಸುತ್ತಿರುವಾಗಲೇ ಬಾಲಕಿಯ ಮೊಬೈಲ್ ಅನ್ನು ಬಲವಂತವಾಗಿ ಕಸಿದುಕೊಳ್ಳಲು ಆ ವ್ಯಕ್ತಿ ಯತ್ನಿಸುತ್ತಿದ್ದಾನೆ. ಈ ಸಮಯದಲ್ಲಿ ಹುಡುಗಿ ತನ್ನ ಫೋನ್ ಅನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ‘ಮಮ್ಮಿ ನನ್ನ ಫೋನ್, ನನ್ನ ಫೋನ್ ತೆಗೆದುಕೊಳ್ಳಲಾಗಿದೆ, ನನ್ನ ಫೋನ್ ಬಿಡು’ ಎಂದು ಕಿರುಚುತ್ತಾಳೆ. ಆದರೆ ಅಷ್ಟರೊಳಗೆ ಅವಳ ಫೋನ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳ್ಳ ಫೋನ್ ಕಿತ್ತುಕೊಂಡು ಓಡಿ ಹೋಗುತ್ತಾನೆ. ಇದೆಲ್ಲವೂ ಎಷ್ಟು ವೇಗವಾಗಿ ಸಂಭವಿಸಿತು ಎಂದರೆ ಅಲ್ಲಿದ್ದ ಯಾರಿಗೂ ಏನೂ ಅರ್ಥವಾಗಲಿಲ್ಲ.
ಸದ್ಯ ವಿಡಿಯೋ ಕಾಣಿಸಿಕೊಂಡ ನಂತರ, ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ X ನಲ್ಲಿ ಹಂಚಿಕೊಳ್ಳಲಾಗಿದೆ. ‘ರೈಲು ಹತ್ತುವಾಗ ಜಾಗರೂಕರಾಗಿರಿ’ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ ಎಲ್ಲಿಂದ ಬಂದಿದೆ ಎಂದು ಕನ್ಫರ್ಮ್ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅದನ್ನು ನಿರಂತರವಾಗಿ ಶೇರ್ ಮಾಡಲಾಗುತ್ತಿದೆ.