ರಾಜಣ್ಣ ಶೀಘ್ರದಲ್ಲೇ ರಾಜಿನಾಮೆ ನೀಡ್ತಾರಂತೆ. ಹೀಗಂತ ನಾವು ಹೇಳ್ತಾ ಇಲ್ಲ. ರಾಜಕೀಯ ಒಳ ಜಗಳಗಳು ತಾರಕ್ಕಕ್ಕೇರಿದ್ದಯ, ಇದರ ಮುಂದುವರೆದ ಭಾಗವೇ ರಾಜಣ್ಣ ರಾಜಿನಾಮೆ ಎಂದು ಹೇಳಲಾಗುತ್ತಿದೆ. ರಾಜಿನಾಮೆ ಯಾಕೆ, ಏನು ಅನ್ನೋದನ್ನ ದಾಖಲೆ ಸಮೇತ ಇಡ್ತೀವಿ ನೋಡಿ.
136 ಸ್ಥಾನ ಪಡೆದು ಪೂರ್ಣ ಪ್ರಮಾಣದ ಸರ್ಕಾರ ರಚನೆ ಮಾಡಿದ್ದರೂ ಕಾಂಗ್ರೆಸ್ ಗೆ ಸಮಯವೇ ಸರಿ ಇಲ್ವಾ ಅನ್ನೋ ಹಂಗಾಗಿದೆ. ನಿತ್ಯವೂ ಒಂದೊಂದು ಬೆಳವಣಿಗೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತಿವೆ. ಒಂದು ಕಡೆ ಪವರ್ ಶೇರಿಂಗ್ ಗುದ್ದಾಟ, ಮತ್ತೊಂದು ಕಡೆ ಅಧ್ಯಕ್ಷ ಸ್ಥಾನ ಬದಲಾವಣೆ, ಮಗದೊಂದು ಕಡೆ ಸಚಿವರುಗಳ ಬಹಿರಂಗ ಹೇಳಿಕೆಗಳು. ಇದೆಲ್ಲದರ ನಡುವೆ ಈಗ ಸ್ಥಳೀಯ ಮಟ್ಟದ ಜಗಳಗಳು ಬೀದಿಗೆ ಬೀಳುತ್ತಿವೆ. ಇದು ಕೂಡ ಪಕ್ಷಕ್ಕೆ ದೊಡ್ಡ ಮಟ್ಟಿನ ಡ್ಯಾಮೇಜ್ ಗೆ ಕಾರಣ ಆಗಿದೆ.

ಇಷ್ಟು ದಿನ ಡಿಕೆಶಿ ಹಾಗೂ ರಾಜಣ್ಣ ನಡುವೆ ಇದ್ದ ಕೋಲ್ಡ್ ವಾರ್ ಬಹಿರಂಗ ವಾಕ್ಸಮರಕ್ಕೆ ಕಾರಣ ಆಗಿತ್ತು. ನೇರ ನೇರವಾಗಿಯೇ ಎಚ್ಚರಿಕೆಗಳನ್ನು ಕೊಡ್ತಾ ಇದ್ದ ನಾಯಕರು ಹೈ ಕಮಾಂಡ್ ಎಚ್ಚರಿಕೆಗೂ ಬಗ್ಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಮಾತಿಗೂ ತಲೆ ಕೆಡಿಸಿಕೊಳ್ಳದ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಮಧ್ಯೆ ರಾಜಣ್ಣ ಸ್ಥಳೀಯವಾಗಿಯೂ ವಿರೋಧ ಕಟ್ಟಿಕೊಂಡಿದ್ದರು. ಸ್ಥಳೀಯ ಚುನಾವಣೆಗಳ ವಿಚಾರವಾಗಿಯೂ ವಾಕ್ಸಮರಗಳು ಮುಂದುವರೆದಿದ್ದರು. ಈಗ ಸಚಿವ ರಾಜಣ್ಣ ರಾಜಿನಾಮೆ ಕೊಡ್ತಾರೆ ಅತೀ ಶೀಘ್ರದಲ್ಲಿ ಅಂತ ಹೇಳಲಾಗುತ್ತಿದೆ.
ಹೌದು, ಇಂತಹದೊಂದು ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಸ್ಥಳೀಯ ಗಲಾಟೆಗಳು. ಇದ್ಯಾವುದು ಸ್ಥಳೀಯ ಚುನಾವಣೆ ಅಂದ್ರೆ ತುಮುಲ್ ಚುನಾವಣೆ ಗಲಾಟೆ. ತುಮುಲ್ ಚುನಾವಣೆಯಲ್ಲಿ ಎಸ್.ಆರ್ ಶ್ರೀನಿವಾಸ್ ಪತ್ನಿ ಭಾರತಿದೇವಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ಹೀಗಾಗಿ ಹಲವು ದಿನಗಳಿಂದ ಕೆ.ಎನ್ ರಾಜಣ್ಣ ಹಾಗೂ ಪರಮೇಶ್ವರ್ ವಿರುದ್ಧ ಶಾಸಕ ಎಸ್.ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸುತ್ತಲ್ಲೇ ಇದ್ದರು. ನೇರವಾಗಿಯೇ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಕೆ.ಎನ್ ರಾಜಣ್ಣ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಇದು ಮತ್ತೊಂದು ತಿರುವು ಪಡೆದುಕೊಂಡಿದೆ.

ತುಮುಲ್ ವಿಚಾರವಾಗಿ ತುಮಕೂರು ಕಾಂಗ್ರೆಸ್ ಜಗಳ ಬೀದಿಗೆ ಬಂದು ನಿಂತಿದ್ದು, ಶಾಸಕ ಗುಬ್ಬಿ ಶ್ರೀನಿವಾಸ್ ಅಭಿಮಾನಿಗಳು ಫೇಸ್ ಬುಕ್ ನ ಎಸ್.ಆರ್. ಶ್ರೀನಿವಾಸ್ ಗುಬ್ಬಿ ಎಂ.ಎಲ್.ಎ ಫ್ಯಾನ್ಸ್ ಪೇಜ್ ನಲ್ಲಿ ಸಚಿವ ರಾಜಣ್ಣಗೆ ಟಾಂಗ್ ನೀಡಿದ್ದಾರೆ. ಶೀಘ್ರದಲ್ಲೇ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲಿದ್ದಾರೆ ಎಂದು ಶ್ರೀನಿವಾಸ್ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ಫೋಟೋ ಒಂದನ್ನ ಎಡಿಟ್ ಮಾಡಿರುವ ಗುಬ್ಬಿ ಶ್ರೀನಿವಾಸ್ ಅಭಿಮಾನಿಗಳು, ಸಚಿವ ಕೆ.ಎನ್ ರಾಜಣ್ಣ ಕಂಪ್ಯೂಟರ್ ನೋಡುವ ಚಿತ್ರ ಹಾಕಿ ಅತೀ ಶೀಘ್ರದಲ್ಲಿ ಎಂದು ಬರೆದಿದ್ದಾರೆ.
ಇನ್ನು ಈ ಗಲಾಟೆ ಇಂದು ನಿನ್ನೆಯದಲ್ಲ. ಪ್ರತಿನಿತ್ಯ ಇಬ್ಬರು ಸಚಿವರ ವಿರುದ್ಧ ಒಂದಲ್ಲೊಂದು ಪೋಸ್ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಶ್ರೀನಿವಾಸ ಅಭಿಮಾನಿಗಳು. ಈ ಗಲಾಟೆ ಜೋರಾಗ್ತಾ ಇದ್ದಂತೆ, ಈ ಹಿಂದೆಯೇ, ಎಸ್ ಆರ್ ಶ್ರೀನಿವಾಸ್ ಗೆ ಹೈ ಕಮಾಂಡ್ ಸೂಚನೆ ನೀಡಿತ್ತು. ತುಮುಲ್ ವಿಚಾರದಲ್ಲಿ ಗೊಂದಲದ ರೀತಿ ಪ್ರತಿಕ್ರಿಯೆ ಕೊಡದಂತೆ ಸೂಚಿಸಲಾಗಿತ್ತು. ಅಂದಿನಿಂದಲೂ ಕೂಡ ಶಾಸಕ ಶ್ರೀನಿವಾಸ್ ಸುಮ್ಮನಿದ್ದರು. ಯಾವುದೇ ರೀತಿಯ ಹೇಳಿಕೆಗಳನ್ನ ನೀಡುತ್ತಿರಲಿಲ್ಲ. ಆದರೆ ಈಗ ಅವರ ಅಭಿಮಾನಿಗಳು ರಾಜಣ್ಣ ವಿರುದ್ಧ ಹರಿಹಾಯ್ತಾ ಇದ್ದಾರೆ. ಬಹಿರಂಗ ಪೋಸ್ಟ್ ಗಳ ಮೂಲಕ ಮುಜುಗರ ಉಂಟು ಮಾಡುತ್ತಿದ್ದಾರೆ. ಈ ಬೆಳವಣಿಗೆ ರಾಜಣ್ಣಗೆ ಅಷ್ಟೆ ಅಲ್ಲ ಪಕ್ಷಕ್ಕೂ ಡ್ಯಾಮೇಜ್ ಆಗುತ್ತಿದೆ ಅನ್ನೋದಲ್ಲಿ ಅನುಮಾನ ಇಲ್ಲ.