ನಟಿ ಮೇಘನಾ ರಾಜ್ ಅವರು ಈಗ ಬಹುತೇಕ ಸಮಯವನ್ನು ತಮ್ಮ ಮಗ ರಾಯನ್ ರಾಜ್ ರನ್ನು ನೋಡಿಕೊಳ್ಳೋಕೆ ಮೀಸಲಾಗಿ ಇಟ್ಟಿದ್ದಾರೆ. ಅದರ ಜೊತೆಗೆ ಸಿನಿಮಾಗಳಲ್ಲಿ ಸಹ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಅವರ ಜೊತೆಗೆ ಒಂದು ಸಿನಿಮಾ ಸೆಟ್ಟೇರಿದೆ, ಮಾಲಿವುಡ್ ಗೆ ಸಹ ಬಹಳ ವರ್ಷಗಳ ನಂತರ ರೀಎಂಟ್ರಿ ಕೊಟ್ಟಿದ್ದಾರೆ. ಇದೆಲ್ಲದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. ಅದರಲ್ಲಿ ಕೂಡ ಒಳ್ಳೆಯ ಕಾಂಟೆಂಟ್ ಗಳನ್ನು ಹಾಕುತ್ತಾರೆ. ಇದರ ಜೊತೆಗೆ ಮೇಘನಾ ರಾಜ್ ಅವರ ಬಗ್ಗೆ ಯಾವಾಗಲೂ ಕೇಳಿಬರುವ ಒಂದು ವಿಷಯ ಅವರ ಮರುಮದುವೆಯ ಬಗ್ಗೆ. ಹೌದು, ಮೇಘನಾ ಅವರು ಮರುಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತದೆ. ಇದಕ್ಕೆಲ್ಲಾ ಮೇಘನಾ ರಾಜ್ ಅವರೇ ಖುದ್ದಾಗಿ ಉತ್ತರ ಕೊಟ್ಟಿದ್ದಾರೆ. ಎರಡನೇ ಮದುವೆ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದಾರೆ.

ಮೇಘನಾ ರಾಜ್ ಅವರು ಕನ್ನಡದ ಖ್ಯಾತ ನಟ ಹಾಗೂ ನಟಿ ಆಗಿರುವ ಸುಂದರ್ ರಾಜ್ ಅವರು ಮತ್ತು ಪ್ರಮೀಳಾ ಜೋಷಾಯ್ ದಂಪತಿಯ ಮಗಳು. ಇವರಿಬ್ಬರ ಮಗಳು ಚಿಕ್ಕಂದಿನಿಂದಲೇ ತಾನು ಚಿತ್ರರಂಗಕ್ಕೆ ಬರಬೇಕು, ಹೀರೋಯಿನ್ ಆಗಬೇಕು ಎಂದು ಕನಸು ಕಟ್ಟಿಕೊಂಡವರು. ಮೇಘನಾ ರಾಜ್ ಅವರು ಕನಸಿನಂತೆಯೇ ಹೀರೋಯಿನ್ ಆದರು. ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದರು. ಎಲ್ಲಾ ಕಡೆ ಇವರಿಗೆ ಒಳ್ಳೆಯ ಹೆಸರಿದೆ. ಕನ್ನಡ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟಿಯಾಗಿ ಒಳ್ಳೆಯ ಸ್ಥಾನ ತಲುಪಿದ್ದಾರೆ. ಇವರ ರಾಜಾಹುಲಿ ಸಿನಿಮಾವನ್ನು ಯಾರು ತಾನೇ ಮರೆಯೋಕೆ ಸಾಧ್ಯ. ಅದೊಂದೆ ಅಲ್ಲದೆ ಇನ್ನು ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಮೇಘನಾ ರಾಜ್ ಅವರು ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ ಮಲಯಾಳಂ ನಲ್ಲಿ ಅದ್ಭುತವಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅಲ್ಲಿ ಕೂಡ ಇವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಇದೆ. ಕನ್ನಡದ ಸ್ಟಾರ್, ಹಿರಿಯನಟ ಅರ್ಜುನ್ ಸರ್ಜಾ ಅವರ ಅಕ್ಕನ ಮಗ ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ, 2018ರಲ್ಲಿ ಮದುವೆಯಾದರು. ಇವರಿಬ್ಬರದ್ದು ಐದಾರು ವರ್ಷಗಳ ಪ್ರೀತಿ. ಚಿರು ಹಾಗೂ ಮೇಘನಾ ರಾಜ್ ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿಯಲ್ಲೇ ಇದ್ದವರು. ತಮ್ಮ ಪ್ರೀತಿಯನ್ನು ಎರಡು ಕುಟುಂಬಗಳಿಗೆ ಸೇರಿಸಿ, ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಅನುಸಾರ ಅದ್ಧೂರಿಯಾಗಿ ಮದುವೆಯಾದರು. ಎರಡು ಕುಟುಂಬಗಳು ಸಂತೋಷದಿಂದ ಮದುವೆಯನ್ನು ಮಾಡಿಕೊಟ್ಟರು. ಈ ಜೋಡಿ ಬಹಳ ಪ್ರೀತಿಯಿಂದ, ಅನ್ಯೋನ್ಯವಾಗಿ ಸಂತೋಷದಿಂದ ಇದ್ದರು.

ಇನ್ನೇನು ಇಬ್ಬರು ಗುಡ್ ನ್ಯೂಸ್ ಕೊಡಬೇಕು ಅನ್ನೋ ವೇಳೆಯಲ್ಲೇ, ಚಿರಂಜೀವಿ ಸರ್ಜಾ ಅವರು ವಿಧಿವಶರಾದರು. ಕೋವಿಡ್ ಸಮಯದಲ್ಲಿ, 2020ರ ಜೂನ್ ತಿಂಗಳಿನಲ್ಲಿ ಚಿರು ವಿಧಿವಶವಾಗಿದ್ದು ದೊಡ್ಡ ಶಾಕ್ ಆಗಿತ್ತು. ಆ ವೇಳೆ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಚಿರು ಅಗಲಿಕೆ ಇವರ ಜೀವನಕ್ಕೆ ದೊಡ್ಡ ಆಘಾತ ತಂದಿದ್ದಂತೂ ನಿಜ. ಅಷ್ಟು ಪ್ರೀತಿಯಿಂದ ಇದ್ದ ಜೋಡಿಯನ್ನು ವಿಧಿ ಬೇರೆ ಮಾಡಿತು ಅನ್ನೋದನ್ನ ಯಾರಿಂದಲು ಸಹಿಸೋದಕ್ಕೆ ಸಾಧ್ಯ ಆಗಲಿಲ್ಲ. ಆದರೆ ಮೇಘನಾ ರಾಜ್ ಅವರು ಇದೆಲ್ಲವನ್ನು ಕೂಡ ಬಹಳ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಮಗನನ್ನು ಬಹಳ ಪ್ರೀತಿಯಿಂದ, ಚಿರು ಅವರ ರೀತಿಯಲ್ಲೇ ನೋಡಿಕೊಳ್ಳುತ್ತಿದ್ದಾರೆ. ಮಗು ರಾಯನ್ ಕೂಡ ಅಪ್ಪನನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಾನೆ. ಈಗ ರಾಯನ್ ಗೆ 4 ವರ್ಷ ತುಂಬಿದೆ.
ರಾಯನ್ ಹಲವು ಬಾರಿ ಅಪ್ಪನ ಗುಣಗಾನ ಮಾಡುವ ವಿಡಿಯೋಗಳು, ಅಪ್ಪನ ಹಾಡುಗಳನ್ನು ನೋಡುವ ವಿಡಿಯೋಗಳು ವೈರಲ್ ಆಗಿದೆ. ಮೇಘನಾ ರಾಜ್ ಅವರ ಜೀವನ ಒಂದು ರೀತಿ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವಾಗ, ಸೋಶಿಯಲ್ ಮೀಡಿಯಾದಲ್ಲಿ ಬೇರೆಯದೇ ರೀತಿಯಲ್ಲಿ ಟ್ರೋಲ್ ಗಳು ಬಂದವು. ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ, ಎರಡನೇ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಟ್ರೋಲ್ ಗಳು ಕೇಳಿಬಂದವು. ಅಷ್ಟೇ ಅಲ್ಲದೇ, ವಿಜಯ್ ರಾಘವೇಂದ್ರ ಅವರು ಇತ್ತೀಚೆಗೆ ಪತ್ನಿಯನ್ನು ಕಳೆದುಕೊಂಡಿದ್ದಾರೆ, ಇವರಿಬ್ಬರು ಮದುವೆಯಾದರೆ ಇವರಿಬ್ಬರ ಲೈಫ್ ಚೆನ್ನಾಗಿರುತ್ತದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದು ಇದೆ. ಇದೆಲ್ಲದಕ್ಕೂ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಉತ್ತರ ಕೊಟ್ಟಿದ್ದಾರೆ ಮೇಘನಾ ರಾಜ್.
ಹೌದು, ಗೋಲ್ಡ್ ಕ್ಲಾಸ್ ವಿತ್ ಮಯೂರ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಮೇಘನಾ ರಾಜ್ ಅವರು ಎರಡನೇ ಮದುವೆ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮೇಘನಾ ರಾಜ್ ಅವರು ಹೇಳುವ ಪ್ರಕಾರ.. ರಾಯನ್ ಗೆ ಚಿರು ಅಪ್ಪ ಅಂತ ಗೊತ್ತಿದೆ, ಚಿರು ಹಾಡುಗಳನ್ನ ದಿನಾ ನೋಡ್ತಾನೆ, ಅಪ್ಪ ಅಂತ ಹೇಳ್ತಾನೆ. ಆದರೆ ರಾಯನ್ ಗೆ ಫಿಸಿಕಲ್ ಆಗಿಯೂ ಅಪ್ಪನ ಪ್ರೀತಿ ಸಿಗಬೇಕು ಅಂತ ಕೆಲವೊಮ್ಮೆ ಅನ್ನಿಸಿದೆ ಎಂದು ಹೇಳಿದ್ದಾರೆ ಮೇಘನಾ ರಾಜ್. ಈ ರೀತಿಯಾಗಿ ಕೆಲವೊಮ್ಮೆ ಎರಡನೇ ಮದುವೆ ಯೋಚನೆ ಬಂದಿರುವುದು ನಿಜ ಎಂದು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಇನ್ಯಾರಾದರು ವ್ಯಕ್ತಿ ಬರಬೇಕು, ಎಲ್ಲವೂ ಮುಂದುವರೆಯಬೇಕು ಎಂದರೆ ಅದು ಚಿರು ಒಪ್ಪಿದರೆ ಮಾತ್ರ ಎಂದು ಕೂಡ ಹೇಳಿದ್ದಾರೆ. ಒಂದು ವೇಳೆ ಆ ರೀತಿ ನಡೆದರೆ, ಚಿರು ಒಪ್ಪಿದ್ದಾನೆ ಅಂತ ನನಗೆ ಅನ್ನಿಸಿದರೆ ಮಾತ್ರ ಮುಂದುವರೆಯುತ್ತೇನೆ ಎಂದಿದ್ದಾರೆ.
ಚಿರು ಒಪ್ಪಿದರೆ ಅದು ನನಗೆ ಗೊತ್ತಾಗುತ್ತದೆ, ಹಾಗಾದರೆ ಮಾತ್ರ ಚಿರುಗೆ ನಾನು ಹಾಗಿರಬೇಕು ಅನ್ನಿಸಿದರೆ ಮಾತ್ರ ಆ ರೀತಿ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಮೇಘನಾ ರಾಜ್. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಟ್ರೋಲ್ ಗಳ ಬಗ್ಗೆ ಮಾತನಾಡಿ, ಅದು ನನಗೆ ನಾನು ಮಾಡಿಕೊಂಡಿರುವ ಇಮೇಜ್ ಅಲ್ಲ, ನನ್ನ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಫಾಲೋ ಮಾಡುವವರು ಕಟ್ಟಿರುವ ಇಮೇಜ್. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬದುಕಿನ ಬಗ್ಗೆ ಮೇಘನಾ ರಾಜ್ ಅವರಿಗೆ ಒಳ್ಳೆಯ ಕ್ಲಾರಿಟಿ ಇದೆ. ಮೇಘನಾ ಹಾಗೂ ರಾಯನ್ ಜೀವನ ಯಾವತ್ತಿಗೂ ಚೆನ್ನಾಗಿರಲಿ ಎಂದು ಹಾರೈಸೋಣ. ಚಿರು ಅವರ ಆಶೀರ್ವಾದ ಇವರಿಬ್ಬರ ಜೊತೆಗೆ ಯಾವಾಗಲೂ ಇರಲಿ..