ಮಣಿಪುರದಲ್ಲಿ ದಿನದಿಂದ ದಿನಕ್ಕೆ ಘರ್ಷಣೆ, ಹಿಂಸಾಚಾರ ಹೆಚ್ಚುತ್ತಿದೆ. ಅಲ್ಲಿನ ಜನರು ದಿನ ಕಳೆಯುವುದಕ್ಕೂ ಒದ್ದಾಡುತ್ತಿದ್ದಾರೆ. ಕುಕಿ ಹಾಗೂ ಮೈಥೆಯಿ ಸಮುದಾಯದ ನಡುವಿನ ಘರ್ಷಣೆಯಿಂದ ಭಯದಲ್ಲೇ ಜನ ಬದುವಂತಾಗಿದೆ. ಅಲ್ಲಿನ ಸರ್ಕಾರ ಕೂಡ ಪರಿಸ್ಥಿತಿಯನ್ನ ಸಮದೂಗಿಸಲು ಅಸ್ಸಾಂ ರೈಫಲ್ಸ್ ಯೋಧರನ್ನು ಇತ್ತೀಚೆಗೆ ಮಣಿಪುರಕ್ಕೆ ನೇಮಿಸಿತ್ತು. ಆದರೆ ನಿನ್ನೆಯಷ್ಟೇ ಆ ಎಲ್ಲಾ ಯೋಧರನ್ನು ಬೇರೆಡೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ. ಮಣಿಪುರದ ಮಹಿಳೆಯರು ಯೋಧರ ಕಾಲುಹಿಡಿದು ಕಣ್ಣೀರಿಟ್ಟಿದ್ದಾರೆ.
ಮಣಿಪುರದಲ್ಲಿ ಕುಕಿ ಹಾಗೂ ಮೈಥೆಯಿ ಸಮುದಾಯದ ನಡುವೆ ನಿರಂತರ ಘರ್ಷಣೆ ನಡೆಯುತ್ತಿದೆ. ಹಿಂಸಾಚಾರ ತಡೆಯಲು ಮಣಿಪುರದ ಕಾಂಗ್ ಪ್ಪೋಕಿ ಜಿಲ್ಲೆಯ ಗಮಿಗಫೈ ಗ್ರಾಮಕ್ಕೆ ನಿಯೋಜಿಸಿದ್ದ ಯೋಧರನ್ನು ಸರ್ಕಾರ ಚುರಾಚಂದ್ ಪುರಕ್ಕೆ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಇದು ತಿಳಿಯುತ್ತಿದ್ದಂತೆ ಈ ಗ್ರಾಮದ ಮಹಿಳೆಯರೆಲ್ಲರು ಸೇರಿ ಯೋಧರ ಕಾಲು ಹಿಡಿದು, ‘ನಮ್ಮನ್ನು ಬಿಟ್ಟು ಹೋಗಬೇಡಿ’ ಎಂದು ಕಣ್ಣೀರು ಹಾಕಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದಾರೆ.
ಅಸ್ಸಾಂ ರೈಫಲ್ಸ್ ಯೋಧರ ಕಾಲು ಹಿಡಿದು ಕಣ್ಣೀರಿಟ್ಟ ಮಣಿಪುರದ ಮಹಿಳೆಯರು ಅವರಿಗೆ ಹೋಗಲು ಅವಕಾಶ ನೀಡಲಿಲ್ಲ. ಜೊತೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಅಂತಿಮವಾಗಿ ಪರಿಸ್ಥಿತಿ ಅರ್ಥ ಮಾಡಿಕೊಂಡ ಯೋಧರು ಇಲಾಖೆಗೆ ವಿಚಾರ ತಿಳಿಸಿದ್ದಾರೆ. ಈ ಕಾರಣದಿಂದ ಸರ್ಕಾರ ಹಾಗೂ ಇಲಾಖೆ ಯೋಧರನ್ನು ಸ್ಥಳಾಂತರ ಮಾಡಿದ ಆದೇಶ ಹಿಂತೆಗೆದುಕೊಂಡಿತು. ಯೋಧರು ಈ ವಿಚಾರ ತಿಳಿಸಿದ ನಂತರವಷ್ಟೇ ಮಹಿಳೆಯರು ಪ್ರತಿಭಟನೆ ನಿಲ್ಲಿಸಿ ಮನೆಗೆ ತೆರಳಿದರು. ಈ ಮನಕಲಕುವ ಘಟನೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.