“ಪುನೀತ್ ರಾಜ್ ಕುಮಾರ್” ನಮನೆಲ್ಲಾ ಆಗಲಿ 8 ತಿಂಗಳು ಕಳೆದೇ ಹೋಗಿದೆ.ಹೀಗಿದ್ದರೂ ನಾವು ಅದನ್ನು ಒಪ್ಪಲು ಸಾಧ್ಯವಿಲ್ಲ.ಈತ ಕನ್ನಡಿಗರ ಎಲ್ಲರ ಮನೆಯಲ್ಲಿ ಹಾಗೂ ಮನದಲ್ಲಿ ನೆಲಸಿದ್ದಾರೆ. ಈತನನ್ನು ನೆನಯದೆ ಯಾವ ಕೆಲಸವೂ ಶುರುವಾಗುವುದಿಲ್ಲ.ಸಿನಿಮಾ ಟ್ರೈಲರ್, ಒಪೆನಿಂಗ್ ಬಿಡುಗಡೆ ಅಷ್ಟೇ ಅಲ್ಲ ಜನ ಸಾಮಾನ್ಯರು ನಮ್ಮ ಅಪ್ಪುವಿನ ಫೋಟೋವನ್ನು ದೇವರ ಫೋಟೋ ಎಂದೇ ಭಾವಿಸಿ ಪೂಜೆ ಸಲ್ಲಿಸಿಯೇ ಅವರ ಶುಭ ಕಾರ್ಯವನ್ನು ಶುರುಮಾಡುತ್ತಿದ್ದಾರೆ.ಅಪ್ಪು ಅಭಿಮಾನಿಗಳು ಅಪ್ಪುವಿನ ಆತ್ಮವನ್ನು ಖುಷಿಪಡಿಸಲೆಂದು ಅಪ್ಪು ತೋರಿಸಿಕೊಟ್ಟ ಜನಸೇವಯ ಹಾದಿಯಲ್ಲಿ ಇಂದು ಅದೆಷ್ಟೋ ಜನರು ಪಾಲಿಸುತ್ತಿದ್ದಾರೆ. ಇದ್ರಿಂದ ಅದೆಷ್ಟೋ ಬಡವರ ಸಂಸಾರಕ್ಕೆ ಸಹಾಯವಾಗುತ್ತಿದೆ ಎಂದರೆ ತಪ್ಪಾಗಲಾರದು. ಅಪ್ಪು ತಮ್ಮ ಜವಾಬ್ದಾರಿಯನ್ನೆಲ್ಲಾ “ಅಶ್ವಿನಿ” ಅವರಿಗೆ ವಹಿಸಿದ್ದರು.ಇನ್ನು ಅವರ ಕನಸಾಗಿದ್ದ ಅದೆಷ್ಟೋ ಜನರ ಪಾಲಿಗೆ ತಮ್ಮ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ಅವಕಾಶ ನೀಡುವ ವೇದಿಕೆಯಾಗಿದ್ದ “ಪಿ ಆರ್ ಕೆ” ಪ್ರೊಡಕ್ಷನ್ ಅಶ್ವಿನಿ ಅವರಿಗೆ ವಹಿಸಿದ್ದರು.

ಅಪ್ಪುವಿನ ಅಗಲಿಕೆಯ ಬಳಿಕ ಅಶ್ವಿನಿ ಅವರು ಅಪ್ಪುವಿನ ಎಲ್ಲಾ ಕನಸನ್ನು ನನಸು ಮಾಡುವ ಪ್ರಯತ್ನ ದಲ್ಲಿ ಈ ಪ್ರೊಡಕ್ಷನ್ ಜವಾಬ್ದಾರಿ ಯನ್ನು ಬಹಳ ಶ್ರದ್ಧೆಯಲ್ಲಿ ನಿರ್ವಹಿಸುತ್ತಿದ್ದಾರೆ.ಅಪ್ಪುವಿನ ಅಗಲಿಕೆಯ ಬಳಿಕ ಅಪ್ಪುವಿಗೆ ಸಿಗಬೇಕಾಗಿರುವ ಗೌರವ ಹಾಗೂ ಸನ್ಮಾನ ಗಳನ್ನೆಲ್ಲಾ ಅಶ್ವಿನಿ ಅವರಿಗೆ ಸಲ್ಲಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.ಇದೀಗ ಅಶ್ವಿನಿ ಸಾಕಷ್ಟು ಅವಾರ್ಡ್ ಪಂಕ್ಷನ್ ಗಳಿಗೆ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಪ್ಪು ಅವರ ಅಭಿಮಾನಿಗಳ ಸಂಖ್ಯೆ ನಾವು ಹೇಳಲು ಸಾಧ್ಯವಿಲ್ಲ. ಈತನ ಡಾನ್ಸ್ , ನಟನೆಗೆ,ಹಾಡು, ಸಾಕಷ್ಟು ಮಂದಿ ಫಿಧಾ ಆಗಿದ್ದಾರೆ.
ಆದ್ರೆ ಇವರ ಸಾವಿನ ಬಳಿಕ ಈ ವ್ಯಕ್ತಿಯ ಬಗ್ಗೆ ತಿಳಿದ ನಂತರದಿಂದ ಇವರ ವ್ಯಕ್ತಿತ್ವಕ್ಕೂ ಇಡೀ ಪ್ರಪಂಚವೇ ಅಭಿಮಾನಿಗಳಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಅಪ್ಪು ಅವರಿಗೆ ನಮ್ಮ ಭಾಷೆಯ ಕಲವಿಧರು ಅಲ್ಲದೆ ಪರ ಭಾಷೆಯ ಕಲಾವಿಧರು ಕೂಡ ಸ್ನೇಹಿತರು.ಅದ್ರಲ್ಲಿ ನಮ್ಮ ಕನ್ನಡಿಗರಿಗೂ ಹತ್ತಿರವಾದವರು ಎಂದರೆ ಅದು ನಮ್ಮ ಕನ್ನಡಿಗನಾಗಿ ಹುಟ್ಟಿ ಟಾಲಿವುಡ್ ನಲ್ಲಿ ಹೆಸರು ಸಂಪಾದನೆ ಮಾಡಿರುವ ಜೂನಿಯರ್ ಎನ್ ಟಿಯರ್. ಇವರು ಅಪ್ಪು ಗಾಗಿ ಚಕ್ರವ್ಯೂಹ ಸಿನಿಮಾದಲ್ಲಿ ಗೆಳೆಯಾ ಗೆಳೆಯಾ ಎಂದು ಹಾಡು ಹೇಳುತ್ತಾ ಎಲ್ಲರ ಮನಸ್ಸು ಗೆದ್ದಿದ್ದರು.
ಇದೀಗ ಅಪ್ಪು ಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಈ ನಟ ಮತ್ತೊಂದು ಬಾರಿ ನಮ್ಮ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಪ್ಪು ಅವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮರಣೋತ್ತರ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದರು.ಅದೇ ಮಾತಿನಂತೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಪ್ತಶಸ್ತಿ ನೀಡಲು ಕಾರ್ಯಕ್ರಮವನ್ನು ಏರ್ಪಾಟು ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಜನಿಕಾಂತ್, ಸುಧಾಮುರ್ತಿ ಹಾಗೂ ಜೂನಿಯರ್ ಎನ್ ಟಿಯರ್ ಅಗಮಿಸಿದ್ದರು ಆದರೆ ಕಾರ್ಯಕ್ರಮ ಆರಂಭವಾಗುವ ಮುಂಚೆ ಮಳೆ ಬಂದ ಕಾರಣ ಇಡೀ ವೇದಿಕೆ ಒದ್ದೆಯಾಗಿತ್ತು.ಎಲ್ಲರು ಅಸೀನರಗಲು ಹೋದಾಗ ಅಲ್ಲಿ ಇರಿಸಲಾಗಿದ್ದ ಕುರ್ಚಿಗಳು ಒದ್ದೆಯಾಗಿತ್ತು. ಅದನ್ನು ಗಮನಿಸಿದ ಜೂನಿಯರ್ ಎನ್ ಟಿಯರ್ ಸಿಬ್ಬಂದಿಗಳಿಂದ ಕವಚ ತೆಗೆದುಕೊಂಡು ಅಶ್ವಿನಿ ಹಾಗೂ ಸುಧಾಮುರ್ತಿ ಅವರು ಕುಳಿತುಕೊಳ್ಳುವ ಕುರ್ಚಿಗಳನ್ನು ಒರಸಿಕೊಡುತ್ತಾರೆ.ಇವರ ಸರಳತೆಗೆ ನಮ್ಮ ಕನ್ನಡಿಗರು ಫಿಧಾ ಆಗಿದ್ದಾರೆ. ಹಾಗೂ ತಾನು ಟಾಲಿವುಡ್ ನ ಖ್ಯಾತ ನಟ ಎಂಬುದನ್ನು ಬಿಟ್ಟು ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಿರುವುದು ಕನ್ನಡಿಗರ ಮನಸ್ಸು ಸೆಳೆದಿದೆ.