ಜನಪ್ರಿಯ ಸೆಲೆಬ್ರಿಟಿ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಯಲ್ಲೂ ಮನೆ ಮಾತಾಗಿದೆ. ಐಶಾರಾಮಿ ಜೀವನ ನಡೆಸುವ ಸೆಲೆಬ್ರಿಟಿಗಳೆಲ್ಲ ಇಲ್ಲಿ ಪಡುವ ಕಷ್ಟ,ಅವರ ವೈಯಕ್ತಿಕ ಜೀವನದ ಗುಟ್ಟು, ವಿವಿಧ ಟಾಸ್ಕ್ ಗಳು ಜೊತೆಗೆ ಚಿತ್ರರಂಗದ ಘಟಾನುಘಟಿಗಳ ನಿರೂಪಣೆಯಿಂದ ಬಿಗ್ ಬಾಸ್ ಸಾಟಿಯಿಲ್ಲದ ಶೋ ಆಗಿದೆ. ಇದೀಗ ಇದೇ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಿಬ್ಬರು ಬರೋಬ್ಬರಿ 30 ಸೆಕೆಂಡ್ ಗಳ ಕಾಲ ಲಿಪ್ ಲಾಕ್ ಮಾಡಿದ್ದು ನೋಡುಗರು ಹುಬ್ಬೇರಿಸುವಂತೆ ಮಾಡಿದೆ.ಅಷ್ಟಕ್ಕೂ ಈ ಸ್ಪರ್ಧಿಗಳ್ಯಾರು ಅಂತೀರಾ? ಈ ವರದಿ ಓದಿ.
ಹಿಂದಿ ‘ಬಿಗ್ ಬಾಸ್ OTT 2’ ಇತ್ತೀಚೆಗಷ್ಟೇ ಆರಂಭವಾಗಿದ್ದು, ಭಾರೀ ಜನಪ್ರಿಯತೆ ಗಳಿಸುತ್ತಿದೆ. ಸ್ಪರ್ಧಿಗಳ ನಡುವಿನ ಸ್ಪರ್ಧೆ, ಗಲಾಟೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಜಡ್ ಹದಿದ್, ಅಭಿಷೇಕ್ ಮಲ್ಹಾನ್, ಆಕಾಂಕ್ಷ್ ಪುರಿ, ಮನೀಶಾ ರಾಣಿಯಂತಹ ಅನೇಕ ಸ್ಪರ್ಧಿಗಳು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಇದೀಗ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಟಾಸ್ಕ್ ವೇಳೆ ಪರಸ್ಪರ ಲಿಪ್ ಲಾಕ್ ಮಾಡಿರುವ ಮಾಡಿರುವ ಫೋಟೋ ಮತ್ತು ವಿಡಿಯೋಗಳು ಸಕ್ಕತ್ ವೈರಲ್ ಆಗುತ್ತಿದೆ.
ಪ್ರತೀ ಸಲದಂತೆ ಈ ಬಾರಿಯೂ ಕೂಡ ಬಾಲಿವುಡ್ ಕಿಂಗ್ ಖಾನ್ ಸಲ್ಮಾನ್ ಖಾನ್ ಅವರ ಅತ್ಯುತ್ತಮ ನಿರೂಪಣೆಯಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ 2 ಅದ್ದೂರಿಯಾಗಿ ನಡೆಯುತ್ತಿದೆ. ಸೂಪರ್ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿಯ ಬಿಗ್ ಬಾಸ್ OTT 2 ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದ್ದು, ಭಾರೀ ಜನಮನ್ನಣೆ ಗಳಿಸುತ್ತಿದೆ.ಇದೇ ಕಾರ್ಯಕ್ರಮದಲ್ಲಿ ನಡೆದ ಲಿಪ್ ಲಾಕ್ ಪುರಾಣ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್ನು ಹಿಂದಿ ಬಿಗ್ ಓಟಿಟಿ ಮನೆಯಲ್ಲಿ ಬಾಲಿವುಡ್ನ ಜನಪ್ರಿಯರಾದ ಅಂಜಲಿ ಅರೋರಾ, ಪಾಲಕ್ ತಿವಾರಿ, ಜನ್ನತ್ ಜುಬೇರ್ ರಹಮಾನಿ, ಸುರಭಿ ಜ್ಯೋತಿ, ಮುನಾವರ್ ಫಾರುಕಿ, ಕನಿಕಾ ಮನ್, ಅಲಿಯಾ ಸಿದ್ದಿಕಿ, ಶಿವಂಗಿ ಜೋಶಿ, ಜಿಯಾ ಶಂಕರ್, ಅಭಿಷೇಕ್ ಮಲ್ಹಾನ್, ಮನಿಷಾ ರಾಣಿ, ಬೇಬಿಕಾ ಧುರ್ವೆ ಈ 12 ಜನ ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸುತ್ತಿದ್ದು. ಕಾರ್ಯಕ್ರಮ ಹಲವು ವಿಚಾರಗಳಿಂದ ಸುದ್ದಿಯಲ್ಲಿದೆ.