ಲಾಯರ್ ಜಗದೀಶ್ ಅವರು ಎಲ್ಲಾ ಕಲಾವಿದರ ಬಗ್ಗೆ ಮಾತಾಡೋ ವಿಷಯ ಗೊತ್ತೇ ಇದೆ. ಈ ವರ್ಷ ಬಿಬಿಕೆ11 ಗೆ ಸ್ಪರ್ಧಿಯಾಗಿ ಬಂದಿದ್ದ ಜಗದೀಶ್ ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದಿದ್ದು ಕೆಲವೇ ದಿವಸ ಆದರೂ ಸಹ ಎಲಿಮಿನೇಟ್ ಆಗಿ ಹೋಗುವ ಮೊದಲು ಜನರಿಗೆ ಒಳ್ಳೆಯ ಮನರಂಜನೆ ಕೊಟ್ಟಿದ್ದರು. ಶುರುವಿನಲ್ಲಿ ಎಲ್ಲರಿಗೂ ಇರಿಟೇಟಿಂಗ್ ಅನ್ನಿಸಿದರೂ ಸಹ, ನಂತರ ಇವರ ಮಾತು, ತಮಾಷೆ ಇದೆಲ್ಲವೂ ಬಹಳ ವೈರಲ್ ಆಗಿತ್ತು. ಜಗ್ಗು ನಿಜಕ್ಕೂ ಕರ್ನಾಟಕದ ಕ್ರಶ್ ಆಗಿದ್ದರು, ಒಬ್ಬರು ಅಂಕಲ್ ಕರ್ನಾಟಕದ ಕ್ರಶ್ ಆಗಿದ್ದು ಇದೆ ಮೊದಲು ಎಂದರು ತಪ್ಪಲ್ಲ. ಬಿಗ್ ಬಾಸ್ ಇಂದ ಹೊರಗಡೆ ಬಂದ ನಂತರ ಸಹ ಜಗದೀಶ್ ಅವರು ಅನೇಕ ವಿಚಾರಗಳಿಂದ ಸುದ್ದಿಯಾಗಿದ್ದಾರೆ..
ಇದೀಗ ಜಗದೀಶ್ ಅವರ ಮೇಲೆ ನಿನ್ನೆ ಹ*ಲ್ಲೆ ನಡೆದಿರುವ ವಿಷಯದಿಂದ ಸಿಕ್ಕಾಪಟ್ಟೆ ವಿವಾದ ಶುರುವಾಗಿದೆ. ನಿನ್ನೆ ಸಂಜೆ ಕೊಡಿಗೆ ಹಳ್ಳಿಯಲ್ಲಿ ನಡೆದಿರುವ ಘಟನೆ ಇದು. ಕೊಡಿಗೆಹಳ್ಳಿಯಲ್ಲಿ ಜಗದೀಶ್ ಅವರ ಒಂದು ಪ್ರಾಪರ್ಟಿ ಇದೆ. ಅಣ್ಣಮ್ಮದೇವಿಯ ಹಬ್ಬ ಮಾಡೋದಕ್ಕೆ ಪೆಂಡಾಲ್ ಹಾಕಿದ್ದರು, ಆ ಪೆಂಡಾಲ್ ಅನ್ನು ತೆರವುಗೊಳಿಸಬೇಕು ಎಂದು ಜಗದೀಶ್ ಅವರು ಹೇಳಿದ್ದು, ಆ ವಿಷಯಕ್ಕೆ ಸ್ಥಳೀಯರು ಹಾಗೂ ಜಗದೀಶ್ ಅವರ ನಡುವೆ ಕಿರಿಕ್ ಶುರುವಾಗಿದೆ. ಜಗದೀಶ್ ಅವರು ತಮ್ಮ ಜಾಗದಲ್ಲಿ ಪೆಂಡಾಲ್ ಹಾಕಬಾರದು ಎಂದಿದ್ದನ್ನು ಜನರು ಒಪ್ಪಿಲ್ಲ, ಅವರ ಮೇಲೆ ಜಗಳಕ್ಕೆ ಹೋಗಿದ್ದಾರೆ. ಸುಮಾರು 40 ಜನರು ಜಗದೀಶ್ ಅವರ ವಿರುದ್ಧ ನಿಂತರು ಎನ್ನಲಾಗಿದೆ.

ಜಗದೀಶ್ ಅವರನ್ನು ಹೊಡೆದಿದ್ದು, ಅದೇ ಸ್ಥಿತಿಯಲ್ಲಿ ಅವರು ಲೈವ್ ಸಹ ಬಂದಿದ್ದರು. ಇದೆಲ್ಲದರ ಜೊತೆಗೆ ಈಗ ಜಗದೀಶ್ ಅವರ ಮೇಲೆ ಈ ರೀತಿ ಮಾಡಿದ್ದು, ನಟ ದರ್ಶನ್ ಅವರ ಅಭಿಮಾನಿಗಳು ಎನ್ನುವ ವಿಷಯ ವೈರಲ್ ಆಗಿದೆ. ನಟ ದರ್ಶನ್ ಅವರ ಅಭಿಮಾನಿಗಳು ತಾವಾಗಿಯೇ ದರ್ಶನ್ ಅವರ ಹುಡುಗರು ಈ ರೀತಿ ಮಾಡಿದ್ದಾರೆ ಎಂದು ಬರೆದಿದ್ದು, ಇದಕ್ಕೀಗ ಲಾಯರ್ ಜಗದೀಶ್ ಅವರು ಫೇಸ್ ಬುಕ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರ ಫ್ಯಾನ್ಸ್ ಅವನೇ ಹುಡುಗರನ್ನು ಕರೆಸಿದ್ದು ಅಂತ ಎಲ್ಲಾ ಕಡೆ ಬರ್ಕೊಂಡಿದ್ದಾರೆ, ಏನೋ ದರ್ಶನ ಒಬ್ಬನ್ನ ಹೊಡೆಯೋಕೆ 40 ಜನರನ್ನ ಕಳಿಸಿದ್ದೀಯಾ. ನಿನ್ನ ಫ್ಯಾನ್ಸ್ ಎಲ್ಲಾ ಗಲೀಜ್ ಫ್ಯಾನ್ಸ್..
ನಿನ್ನೆ ಗನ್ ಮ್ಯಾನ್ ಇರಲಿಲ್ಲ, ಇದ್ದಿದ್ರೆ ಗನ್ ಸೌಂಡ್ ಕೇಳಿರೋದು. ನನಗು ಗನ್ ಲೈಸೆನ್ಸ್ ಶೀಘ್ರದಲ್ಲೇ ಸಿಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ದರ್ಶನ್ ಈಗಾಗಲೇ ಕೊಲೆ ಮಾಡಿ ಜೈಲಿಗೆ ಹೋಗಿ ಬಂದು ಬೇಜಾರಲ್ಲಿದ್ದಾನೆ, ಫೀಲಿಂಗ್ ನಲ್ಲಿದ್ದಾನೆ ನೀವು ಈ ಥರ ಮಾಡಿ ಅವನನ್ನ ಸಿಕ್ಕಿ ಹಾಕಿಸಿದ್ರೆ, ನಾನೇನಾದರು ನೀವು ಬರೆದಿರೋದನ್ನ ಸ್ಕ್ರೀನ್ ಶಾಟ್ ತಗೊಂಡು ಕೆಂಪ್ಲೇಂಟ್ ಕೊಟ್ಟು FIR ಹಾಕಿಸಿದ್ರೆ ಮತ್ತೆ ದರ್ಶನ್ ಜೈ*ಲು ಸೇರಬೇಕಾಗುತ್ತೆ. ಫ್ಯಾನ್ಸ್ ಎಲ್ಲ ಸೇರ್ಕೊಂಡು ಮತ್ತೆ ಆ ಕೆಲಸ ಮಾಡಬೇಡಿ.. ಎಂದು ದರ್ಶನ್ ಫ್ಯಾನ್ಸ್ ಗೆ ಲಾಯರ್ ಜಗದೀಶ್ ಬಿಸಿ ಮುಟ್ಟಿಸಿದ್ದಾರೆ. ಹಾಗೆಯೇ ಆ 40 ಜನರಲ್ಲಿ ನಿನ್ನ ಫ್ಯಾನ್ಸ್ ಯಾರು ಅಂತ ಹೇಳು, ಸ್ವಲ್ಪ ಎಲ್ಲರೂ ಎಚ್ಚರವಾಗಿರಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ..
ದರ್ಶನ್ ಜೊತೆಗಿರೋ ಹುಡುಗರು ಗಲೀಜ್ ಹುಡುಗರು. ಅವನ ಹೆಸರು ಹೇಳ್ಕೊಂಡು ಹೀಗೆಲ್ಲಾ ಬರೋದಕ್ಕೂ ಮೊದಲು ಮನೆಯಲ್ಲಿ ಹೇಳಿ ಮಾತಾಡಿ ಆಮೇಲೆ ಬನ್ನಿ. ಮೊದಲು ಇಂಶುರೆನ್ಸ್ ಮಾಡಿಸ್ಕೊಂಡು ಬನ್ನಿ.. ಎಂದಿದ್ದಾರೆ. ಲಾಯರ್ ಜಗದೀಶ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಡಿಬಾಸ್ ದರ್ಶನ್ ಅವರ ಅಭಿಮಾನಿಗಳು ಯಾಕೆ ಈ ರೀತಿ ಮಾಡುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ಯಾಕೆ ಪೋಸ್ಟ್ ಮಾಡುತ್ತಾರೆ ಎನ್ನುವ ವಿಚಾರ ಅಂತೂ ನಮಗೆ ತಿಳಿದುಬಂದಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಹೆಸರಲ್ಲಿ ಮತ್ತೊಂದು ವಿವಾದ ಶುರುವಾಗಿದೆ.