ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ರಾಮಾಚಾರಿ ಮತ್ತು ಚಾರು ಇಬ್ಬರ ಲವ್ ಸ್ಟೋರಿ ಎಲ್ಲರ ಫೇವರೆಟ್ ಇದೀಗ ಈ ಕಥೆಗೆ ಹೊಸ ಕ್ಯಾರೆಕ್ಟರ್ ಎಂಟ್ರಿ ಆಗಿದೆ. ರಾಮಾಚಾರಿ ಚಾರು ಎಲ್ಲರ ಎದುರು ಮತ್ತೊಮ್ಮೆ ಮದುವೆ ಆಗಿದ್ದಾಯ್ತು. ಹಾಗೆಯೇ ರಾಮಾಚಾರಿ ತಮ್ಮ ಕೃಷ್ಣನ ಆಗಮನ ಕೂಡ ಆಗಿದೆ. ಇದೀಗ ಕೃಷ್ಣನಿಗು ಕೂಡ ಹೊಸ ಜೋಡಿ ಬಂದಾಗಿದೆ.

ಕೃಷ್ಣನ ಈ ಜೋಡಿಯ ಹೆಸರು ರುಕ್ಮಿಣಿ. ಕೃಷ್ಣ ರುಕ್ಮಿಣಿಯ ಲವ್ ಸ್ಟೋರಿ ತುಂಬಾ ಡಿಫರೆಂಟ್ ಆಗಿದೆ. ಇವರಿಬ್ಬರು ಬೇರೆ ಎಲ್ಲಾ ಲವರ್ಸ್ ಗಳ ಹಾಗಿಲ್ಲ. ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿ ಇದೆ, ಆದರೆ ವಿಧಿಯಾಟವೇ ಬೇರೆ ರೀತಿ ಇದೆ. ಪ್ರೀತಿ ಇದ್ದರು ಇಬ್ಬರು ಜೊತೆಯಲ್ಲಿಲ್ಲ. ಇದೀಗ ಇವರಿಬ್ಬರ ಪ್ರೀತಿಯನ್ನು ಒಂದು ಮಾಡೋಕೆ ಚಾರು ಬಂದಿದ್ದಾಳೆ. ರುಕ್ಮಿಣಿಯನ್ನ ಕರೆದುಕೊಂಡು ಬರೋಕೆ ಹೋಗಿದ್ದಾಳೆ ಚಾರು.

ಇನ್ನು ಈ ರುಕ್ಮಿಣಿ ಪಾತ್ರದಲ್ಲಿ ಮುದ್ದಾಗಿ, ಮುಗ್ಧವಾಗಿ ನಟಿಸುತ್ತಿರುವ ಹೊಸ ನಟಿ ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಇವರ ಬಗ್ಗೆ ಹೇಳುವುದಾದರೆ, ಈ ಹೊಸನಟಿಯ ಹೆಸರು ದೇವಿಕಾ ಭಟ್. ಇವರು ಮೂಲತಃ ಬೆಂಗಳೂರಿನವರೇ, ಇಲ್ಲಿಯೇ ಹುಟ್ಟಿ ಬೆಳೆದದ್ದು, ಓದಿದ್ದು ಎಲ್ಲವೂ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಬಿ.ಎ ಓದಿದ್ದಾರೆ ದೇವಿಕಾ ಭಟ್. ಹಾಗೆಯೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಹಲವು ಮಾಡೆಲಿಂಗ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದೆರಡು ಆಲ್ಬಂ ಸಾಂಗ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ ದೇವಿಕಾ ಭಟ್. ಹಲವು ಫೋಟೋಶೂಟ್ ಗಳಿಗೆ ಸಹ ಪೋಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 17 ಸಾವಿರ ಫಾಲೋವರ್ಸ್ ಇದ್ದಾರೆ. ತಮ್ಮ ಸುಂದರವಾದ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ದೇವಿಕಾ ಭಟ್. ಇವರ ಕ್ಯೂಟ್ ಫೋಟೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಧಾರಾವಾಹಿಯಲ್ಲಿ ದೇವಿಕಾ ಭಟ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕೃಷ್ಣನಿಗೆ ಸರಿಯಾದ ಜೋಡಿ ಈ ರುಕ್ಮಿಣಿನೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಹೊಸ ಪ್ರತಿಭೇ ರಾಮಾಚಾರಿ ಧಾರಾವಾಹಿ ಮೂಲಕ ಮನೆಮಾತಾಗಿದ್ದಾರೆ. ಕೃಷ್ಣ ರುಕ್ಮಿಣಿ ಬೇಗ ಒಂದಾಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.