ಕಿಚ್ಚ ಸುದೀಪ್ ಅವರು ಇಂದು ಬೆಳಗ್ಗೆ ರಾಜ್ಯದ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಸದಾಶಿವನಗರದಲ್ಲಿ ಇರುವ ಡಿಕೆ ಶಿವಕುಮಾರ್ ಅವರ ಮನೆಗೆ ಕಿಚ್ಚ ಸುದೀಪ್ ಅವರು ಭೇಟಿ ನೀಡಿದ್ದು, ಇದ್ದಕ್ಕಿದ್ದಂತೆ ಸುದೀಪ್ ಅವರು ಇವರ ಮನೆಗೆ ಹೋಗಿದ್ದು ಯಾಕೆ ಎನ್ನುವ ಪ್ರಶ್ನೆ ಶುರುವಾಗಿದೆ. ಕಿಚ್ಚ ಸುದೀಪ್ ಅವರು ಈಗಷ್ಟೇ ಬಿಗ್ ಬಾಸ್ ಶೋ ನಿರೂಪಣೆ ಮುಗಿಸಿದ್ದಾರೆ. ಮ್ಯಾಕ್ಸ್ ಸಿನಿಮಾ 25 ದಿನಗಳ ಪ್ರದರ್ಶನ ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ ದಿಢೀರ್ ಎಂದು ಕಿಚ್ಚ ಸುದೀಪ್ ಅವರು ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದು, ಈ ದಿಢೀರ್ ಭೇಟಿಗೆ ಒಂದು ವಿಶೇಷ ಕಾರಣ ಇದೆ. ಅಷ್ಟಕ್ಕೂ ಈ ಭೇಟಿ ಹಿಂದಿನ ಕಾರಣ ಏನು ಎಂದು ನೋಡುವುದಾದರೆ..
ಕಿಚ್ಚ ಸುದೀಪ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ನೀಡಿರುವುದು ಸಿಸಿಎಲ್ ಉದ್ಘಾಟನೆಗೆ ಆಹ್ವಾನ ನೀಡುವುದಕ್ಕಾಗಿ. ಹೌದು, ಫೆಬ್ರವರಿ 8ರಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 11ನೇ ಸೀಸನ್ ಉದ್ಘಾಟನೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಡಿಕೆ ಶಿವಕುಮಾರ್ ಅವರು ವಿಶೇಷ ಅತಿಥಿಯಾಗಿ ಬರಬೇಕು ಎಂದು ಕಿಚ್ಚ ಸುದೀಪ್ ಅವರು ಆಹ್ವಾನ ನೀಡಿದ್ದಾರೆ. ಇದಕ್ಕಾಗಿಯೇ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಫೆಬ್ರವರಿ 8ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರು ಬರುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಸುದೀಪ್ ಅವರು ಸಧ್ಯಕ್ಕೆ ಸಿಸಿಎಲ್ ತಯಾರಿಕೆಗಳಲ್ಲೇ ಬ್ಯುಸಿ ಇದ್ದು, ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹೈದರಾಬಾದ್ ಇಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಕಿಚ್ಚ.

ಈ ಬಾರಿ ಸಿಸಿಎಲ್ ಉದ್ಘಾಟನೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷ ಆಗಿದೆ. ಉದ್ಘಾಟನೆಯ ಮೊದಲ ಪಂದ್ಯ ಚೆನ್ನೈ ರೈನೋಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳ ನಡುವೆ ನಡೆಯಲಿದೆ. ಇನ್ನು ಶನಿವಾರ ಸಂಜೆ ಎರಡನೇ ಪಂದ್ಯ ನಡೆಯಲಿದ್ದು, ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ನಡುವೆ ನಡೆಯಲಿದೆ. ಕರ್ನಾಟಲ ಬುಲ್ಡೋಜರ್ಸ್ ತಂಡದ ಕ್ಯಾಪ್ಟನ್ ಕಿಚ್ಚ ಸುದೀಪ್ ಅವರಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಕಾರ್ತಿಕ್ ಜಯರಾಮ್, ಬಿಗ್ ಬಾಸ್ ತ್ರಿವಿಕ್ರಂ ಇವರೆಲ್ಲರೂ ಸಹ ನಮ್ಮ ತಂಡದ ಪ್ಲೇಯರ್ ಗಳಾಗಿದ್ದಾರೆ. ಈ ಬಾರಿ ಸಿಸಿಎಲ್ ಕಪ್ ಗೆಲ್ಲಲೇಬೇಕು ಎಂದು ಕರ್ನಾಟಕ ಬುಲ್ಡೋಜರ್ಸ್ ತಂಡ ಪಣ ತೊಟ್ಟು ನಿಂತಿದೆ.

ಕಳೆದ 10ನೇ ಸೀಸನ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ, ಫಿನಾಲೆ ಹಂತ ತಲುಪಿತ್ತು, ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಫಿನಾಲೆಯಲ್ಲಿ ಸೋತು ರನ್ನರ್ ಅಪ್ ತಂಡವಾಗಿತ್ತು ನಮ್ಮ ಕರ್ನಾಟಕ ಬುಲ್ಡೋಜರ್ಸ್. ಹಾಗಾಗಿ ಈ ಸೀಸನ್ ನಲ್ಲಿ ಕಪ್ ಗೆಲ್ಲಲೇಬೇಕು ಎಂದು ನಿರ್ಧಾರಿಸಿ, ಹೆಚ್ಚು ಪ್ರಾಕ್ಟೀಸ್ ಮಾಡಲಾಗುತ್ತಿದೆ. ಸುದೀಪ್ ಅವರು ತಂಡದ ಕ್ಯಾಪ್ಟನ್ ಆಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಳೆದ 11 ವರ್ಷಗಳಿಂದ ಸಿಸಿಎಲ್ ನಡೆಯುತ್ತಿದೆ, ಕರ್ನಾಟಕ ಸೇರಿ 7 ತಂಡಗಳು ಸಿಸಿಎಲ್ ನಲ್ಲಿ ಪ್ರತಿವರ್ಷ ಪಾಲ್ಗೊಳ್ಳುತ್ತದೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್, ಭೋಜ್ ಪುರಿ ದಬಾಂಗ್ಸ್ ಮತ್ತು ಪಂಜಾಬ್ ಡಿ ಶೇರ್ ತಂಡಗಳು ಸಿಸಿಎಲ್ ನಲ್ಲಿ ಆಡುತ್ತವೆ.

ಸದಾ ಸಿನಿಮಾ, ಶೂಟಿಂಗ್ ಎಂದು ಬ್ಯುಸಿ ಇರುವ ಹೀರೋಗಳಿಗೆ, ಕಲಾವಿದರಿಗೆ ಸಿಸಿಎಲ್ ಒಂದು ರೀತಿ ಚೇಂಜ್ ಓವರ್, ಕ್ರಿಕೆಟ್ ಅಂದ್ರೆ ಬಹುತೇಕ ಎಲ್ಲರಿಗೂ ಆಸಕ್ತಿ ಹಾಗೂ ಆಡುವುಕ್ಕೆ ಇಷ್ಟವಿರುತ್ತದೆ. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಹೆಚ್ಚು ಆಸಕ್ತಿ, ಅವರ ಹಾಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇರುವ ಕಲಾವಿದರನ್ನು ಒಂದುಗೂಡಿಸಿ 11 ವರ್ಷಗಳಿಂದ ಸತತವಾಗಿ ಆಡಿಸಿಕೊಂಡು ಬರುತ್ತಿರುವುದನ್ನು ಮೆಚ್ಚಿಕೊಳ್ಳಬೇಕು. ಇದು ಹೀಗೆ ಮುಂದುವರೆದು ಮುಂದಿನ ಪೀಳಿಗೆಯವರಿಗೆ ಸಹ ಸಿಸಿಎಲ್ ಮುಂದುವರೆದರೆ, ನಿಜಕ್ಕೂ ಕಲಾವಿದರಿಗೆ ಒಳ್ಳೆಯದು. ಅದೇ ರೀತಿ ಈ ವರ್ಷ ಸುದೀಪ್ ಅವರ ನಾಯಕತ್ವದ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡವೇ ಸಿಸಿಎಲ್ ನಲ್ಲಿ ಕಪ್ ಗೆಲ್ಲಲಿ ಇಂದು ನಾವು ಸಹ ವಿಶ್ ಮಾಡೋಣ.