ನಿನ್ನೆ ಬೆಳಗ್ಗೆ ಸಂಭವಿಸಿದ ಘಟನೆ ಕಿಚ್ಚ ಸುದೀಪ್ ಅವರ ಕುಟುಂಬಕ್ಕೆ ಬಹಳ ನೋವನ್ನು ತಂದಿದೆ. ಕಿಚ್ಚ ಸುದೀಪ್ ಅವರ ತಾಯಿ ಸರೋಜ ಸಂಜೀವ್ ಅವರು ನಿನ್ನೆ ಬೆಳಗ್ಗೆ ವಿಧಿವಶರಾದರು. ತಾಯಿಯನ್ನು ಕಳೆದುಕೊಂಡ ನೋವು ಅವರನ್ನು ಕಾಡುತ್ತಿದೆ. ಇತ್ತ ಸುದೀಪ್ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡುವ ಮೂಲಕ ಮನಸ್ಸಲ್ಲಿದ್ದ ನೋವನ್ನು ಹೊರಹಾಕಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರ ಮಗಳು ಸಹ ತಮಗೆ ಆದ ನೋವಿನ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ ಸುದೀಪ್ ಅವರ ತಾಯಿ ವಿಧಿವಶರಾದ ಕಾರಣ ಚಿತ್ರರಂಗದ ಗಣ್ಯರು ಸುದೀಪ್ ಅವರ ಮನೆಗೆ ಬಂದು, ಅವರ ತಾಯಿಯ ಅಂತಿಮ ದರ್ಶನ ಪಡೆಯುತ್ತಿದ್ದರು. ಆ ಕಾರಣಕ್ಕೆ ಸುದೀಪ್ ಅವರ ಮನೆ ಎದುರು ಮೀಡಿಯಾದವರು ಜಮಾಯಿಸಿದ್ದರು. ಬಹಳಷ್ಟು ಕ್ಯಾಮೆರಾ ಹಿಡಿದು ಎಲ್ಲವನ್ನು ಕ್ಯಾಪ್ಚರ್ ಮಾಡಿದ್ದಾರೆ. ಮೀಡಿಯಾದವರ ಅತಿರೇಕದ ವರ್ತನೆ ಬಗ್ಗೆ ಸುದೀಪ್ ಅವರ ಮಗಳು ಸಾನ್ವಿ ಅವರು ಬೇಸರ ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸಾನ್ವಿ ಸುದೀಪ್ ಅವರ ಮಗಳು ಈ ವಿಷಯದ ಬಗ್ಗೆ ಸ್ಟೋರಿ ಶೇರ್ ಮಾಡಿ, ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ನಾನು ನನ್ನ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಸಮಯದಲ್ಲಿ, ಕೆಲವರು ನನ್ನ ಮುಖವನ್ನು ಸೆರೆಹಿಡಿಯುತ್ತಿದ್ದರು. ನನ್ನ ತಂದೆ ತನ್ನ ತಾಯಿವಾಗಿ ದುಃಖದಲ್ಲಿ ಅಳುತ್ತಿದ್ದ ಸಮಯದಲ್ಲಿ ಕೆಲವರು ನೂಕು ನುಗ್ಗಲು ಮಾಡಿದರು, ನಾವೆಲ್ಲಾ ನೋವಲ್ಲಿ ಇದ್ದಾಗ, ಕೆಲವರು ಯಾವ ಥರ ರೀಲ್ಸ್ ಮಾಡೋದು ಅನ್ನೋ ಚಿಂತೆಯಲ್ಲಿದ್ದರು.

ಮನುಷ್ಯರು ಈ ಮಟ್ಟಕ್ಕೆ ಮಾನವೀಯತೆ ಕಳೆದುಕೊಂಡಿರೋದನ್ನ ನೋಡಿ ತುಂಬಾ ನೋವಾಗಿದೆ. ಇಂಥ ನಡವಳಿಕೆ ನಮ್ಮ ಅಜ್ಜಿಯನ್ನು ಸರಿಯಾಗಿ ಬೀಳ್ಕೊಡುವುದಕ್ಕೂ ಕೂಡ ಆಗ್ಲಿಲ್ಲ. ಈ ಸಮಯದಲ್ಲಿ ನಮ್ಮ ಪ್ರೈವಸಿಯನ್ನು ಕೂಡ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಾನ್ವಿ ಸುದೀಪ್ ಅವರು ತಮಗಾದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳು ಶುರುವಾಗಿದೆ.
ಹಲವಾರು ಜನರು ಸುದೀಪ್ ಅವರ ಮಗಳು ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕಲಾವಿದರು ಅಂದಮಾತ್ರಕ್ಕೆ ಅವರ ಬದುಕಿನ ಪ್ರತಿಯೊಂದು ಕ್ಷಣವನ್ನು ಸೆರೆಹಿಡಿಯುವುದು ತಪ್ಪು, ಮೀಡಿಯಾದವರು ಅವರನ್ನು ಅವರ ಪಾಡಿಗೆ ಬಿಡಬೇಕು ಎನ್ನುತ್ತಿದ್ದಾರೆ ಜನರು. ಒಟ್ಟಿನಲ್ಲಿ ಸಾನ್ವಿ ಸುದೀಪ್ ಅವರ ಒಂದು ಇನ್ಸ್ಟ್ಯಾಗ್ರಾಮ್ ಸ್ಟೋರಿ ಭಾರಿ ಚರ್ಚೆಗಳನ್ನು ಹುಟ್ಟುಹಾಕಿದೆ.