ನಟ ಯಶ್ ಅವರ ಟಾಕ್ಸಿಕ್ ಸಿನಿಮಾದ ರಿಲೀಸ್ ಡೇಟ್ ನಿನ್ನೆಯಷ್ಟೇ ಅನೌನ್ಸ್ ಆಗಿದೆ. ಮುಂದಿನ ವರ್ಷ, 2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಯಶ್ ಅವರ ಸಿನಿಮಾ ನೋಡೋಕೆ ಇನ್ನು ಒಂದು ವರ್ಷ ಕಾಯಬೇಕು ಅನ್ನೋ ಬೇಸರ ಒಂದು ಕಡೆ ಇದ್ದೇ ಇದೆ. ಆದರೆ ಇಡೀ ವರ್ಲ್ಡ್ ಸಿನಿಮಾ ಕನ್ನಡದ ಕಡೆ ತಿರುಗಿ ನೋಡುವಂಥ ಅದ್ಧೂರಿ ಸಿನಿಮಾವನ್ನ ತೆರೆಮೇಲೆ ತರುತ್ತಾರೆ ಎನ್ನುವುದು ಸಂತೋಷದ ವಿಚಾರ. ಹಾಗಾಗಿ ಸಿನಿಮಾ ನೋಡೋಕೆ ಸ್ವಲ್ಪ ಕಾಯೋದು ಪರವಾಗಿಲ್ಲ ಅಂತಿದ್ದಾರೆ ಫ್ಯಾನ್ಸ್. ಈ ಸಿನಿಮಾದಲ್ಲಿ ಬಾಲಿವುಡ್ ಇಂದ ಹಿಡಿದು ಹಾಲಿವುಡ್ ವರೆಗು ದೊಡ್ಡ ದೊಡ್ಡ ಕಲಾವಿದರು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಟಾಕ್ಸಿಕ್ ಸಿನಿಮಾದ ಹೀರೋಯಿನ್ ಆಗಿರುವ ಕಿಯಾರಾ ಅಡ್ವಾಣಿ ಅವರು ಪಡೆದಿರುವ ಸಂಭಾವನೆ ವಿಚಾರ ಈಗ ವೈರಲ್ ಆಗಿದೆ.

ಬಾಲಿವುಡ್ ನ ಖ್ಯಾತ ನಟಿ ಕಿಯಾರಾ ಅಡ್ವಾಣಿ ಅವರು, ಬಾಲಿವುಡ್ ನಲ್ಲಿ ಉತ್ತಮ ನಟನೆಗೆ ಹೆಸರು ಮಾಡಿರುವವರು. ಕಿಯಾರಾ ಅವರಿಗೆ ಸೆಪರೇಟ್ ಫ್ಯಾನ್ ಬೇಸ್ ಇದೆ. ಇವರು ಈಗಾಗಲೇ ತೆಲುಗಿನಲ್ಲಿ ನಟಿಸಿದ್ದು, ಕನ್ನಡದಲ್ಲಿ ಇದು ಮೊದಲ ಸಿನಿಮಾ. ಯಶ್ ಅವರಿಂದ ಇಂಥ ಹಲವು ನಟಿಯರು ಕನ್ನಡಕ್ಕೆ ಬರುತ್ತಿದ್ದಾರೆ ಎನ್ನುವುದು ಸಂತೋಷದ ವಿಚಾರ ಆಗಿದೆ. ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ ಅವರಷ್ಟೇ ಅಲ್ಲ, ನಯನತಾರ, ಹುಮಾ ಖುರೇಶಿ ಸೇರಿದಂತೆ ಸಾಕಷ್ಟು ಸದ್ದು ಮಾಡಿರುವ ನಟಿಯರು, ಕಲಾವಿದರು ಇದ್ದಾರೆ. ಟಾಕ್ಸಿಕ್ ಸಿನಿಮಾ ಇಷ್ಟು ಸೌಂಡ್ ಮಾಡುವುದಕ್ಕೆ ಇದು ಒಂದು ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಲ್ಲ. ಸಿನಿಮಾ ಶೂಟಿಂಗ್ ಮುಂಬೈ, ಬೆಂಗಳೂರು ಹಲವು ಕಡೆಗಳಲ್ಲಿ ಶೂಟಿಂಗ್ ನಡೆದಿದೆ.

ಟಾಕ್ಸಿಕ್ ಸಿನಿಮಾ ಇಷ್ಟು ಸದ್ದು ಮಾಡುವುದಕ್ಕೆ, ಈ ದೊಡ್ಡ ಸ್ಟಾರ್ ಕ್ಯಾಸ್ಟ್ ಕೂಡ ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಲ್ಲ. ಇನ್ನು ಯಶ್ ಅವರ ಈ ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಸಹ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಕರೀನಾ ಕಪೂರ್ ಅವರು ಯಶ್ ಅವರ ಫ್ಯಾನ್. ಕೆಜಿಎಫ್ ನೋಡಿ ರಾಕಿ ಭಾಯ್ ಫ್ಯಾನ್ ಆಗಿದ್ದು, ಅವರೊಡನೆ ನಟಿಸುವ ಆಸೆ ಇದೆ ಎಂದು ಒಂದು ಇಂಟರ್ವ್ಯೂ ನಲ್ಲಿ ಸಹ ಹೇಳಿದ್ದರು. ಹಾಗೆಯೇ ತಾವು ಶೀಘ್ರದಲ್ಲೇ ಸೌತ್ ಸಿನಿಮಾ ಒಂದರಲ್ಲಿ ನಟಿಸುವುದಾಗಿಯೂ, ಪ್ರಾಜೆಕ್ಟ್ ಒಪ್ಪಿಕೊಂಡಿರುವುದಾಗಿಯೂ ತಿಳಿಸಿದ್ದರು ಕರೀನಾ ಕಪೂರ್. ಆದರೆ ಮಧ್ಯದಲ್ಲಿ ಏನಾಯಿತು, ಯಾವ ಸಮಸ್ಯೆ ಆಯಿತು ಎಂದು ತಿಳಿದಿಲ್ಲ, ಪ್ರಾಜೆಕ್ಟ್ ಇಂದ ಕರೀನಾ ಕಪೂರ್ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿತು.

ಇನ್ನು ಕರೀನಾ ಕಪೂರ್ ಅವರು ಮಾಡಬೇಕಿದ್ದ ಪಾತ್ರದಲ್ಲಿ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ನಯನತಾರ ನಟಿಸುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈಗಾಗಲೇ ನಯನ್ ಸಿನಿಮಾ ಶೂಟಿಂಗ್ ನಲ್ಲಿ ಸಹ ಪಾಲ್ಗೊಂಡಿದ್ದಾರೆ. ಇದು ಯಶ್ ಅವರ ಸಹೋದರಿಯ ರೋಲ್ ಎನ್ನಲಾಗಿದ್ದು, ಈ ಎರಡು ಪಾತ್ರಗಳು ಸಹ ಸಿನಿಮಾದ ಪ್ರಾಮುಖ್ಯ ಪಾತ್ರಗಳು ಎನ್ನಲಾಗಿದೆ. ಇನ್ನು ಯಶ್ ಅವರಿಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಕಿಯಾರಾ ಅವರಿಗೆ ಇದು ಮೊದಲ ಚಿತ್ರ, ದಕ್ಷಿಣದಲ್ಲಿ ಈಗಾಗಲೇ ರಾಮ್ ಚರಣ್ ಅವರೊಡನೆ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸಿದ್ದಾರೆ ಕಿಯಾರಾ. ಈ ಸಿನಿಮಾ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಕಾಣಲಿಲ್ಲ. ಈಗ ಕಿಯಾರಾ ಅವರು ಕನ್ನಡದ ಮೂಲಕ ಬಿಗ್ ಸಕ್ಸಸ್ ಕಾಣುವ ಹಂಬಲದಲ್ಲಿದ್ದಾರೆ. ಟಾಕ್ಸಿಕ್ ಸಿನಿಮಾಗೆ ಕಿಯಾರಾ ಅವರು ಪಡೆದಿರುವ ಸಂಭಾವನೆ ವಿಷಯ ಈಗ ವೈರಲ್ ಆಗಿದೆ..

ನಟಿ ಕಿಯಾರಾ ಅಡ್ವಾಣಿ ಅವರು ಬಾಲಿವುಡ್ ನವರು, ಅಲ್ಲೆಲ್ಲಾ ಸಂಭಾವನೆ ದುಬಾರಿ ಇರುತ್ತದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಟಾಕ್ಸಿಕ್ ಸಿನಿಮಾಗೆ ಇವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ನೋಡುವುದಾದರೆ, ಗೇಮ್ ಚೇಂಜರ್ ಸಿನಿಮಾಗೆ ಪಡೆದ ಸಂಭಾವನೆಗಿಂತ ಡಬಲ್ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕಿಯಾರಾ ಅವರು ಗೇಮ್ ಚೇಂಜರ್ ಸಿನಿಮಾಗೆ 7 ಕೋಟಿ ಸಂಭಾವನೆ ಪಡೆದಿದ್ದರಂತೆ. ಈಗ ಟಾಕ್ಸಿಕ್ ಸಿನಿಮಾಗೆ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಬ್ಬ ನಟಿಗೆ ಕನ್ನಡ ಸಿನಿಮಾಗಾಗಿ ಕೊಟ್ಟಿರುವುದು ಇದು ಅತ್ಯಂತ ದುಬಾರಿ ಸಂಭಾವನೆ ಎಂದು ಹೇಳಿದರೆ ತಪ್ಪಲ್ಲ. ಇನ್ನು ಕಿಯಾರಾ ಅವರು ಬೇರೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ಹಾಗೂ ಜ್ಯುನಿಯರ್ ಎನ್.ಟಿ.ಆರ್ ಜೊತೆಯಾಗಿ ನಟಿಸುತ್ತಿರುವ ವಾರ್ 2 ಸಿನಿಮಾದಲ್ಲಿ ನಟಿಸಲಿದ್ದಾರೆ.

ಹಾಗೆಯೇ ಒಪ್ಪಿಕೊಂಡಿದ್ದ ಬೇರೆ ಸಿನಿಮಾ ಇಂದ ಕೂಡ ಹೊರಗಡೆ ಬಂದಿದ್ದಾರಂತೆ. ಅದಕ್ಕೆ ಕಾರಣ ಕಿಯಾರಾ ಈಗ ಗರ್ಭಿಣಿ ಆಗಿದ್ದಾರೆ, ಮಗುವಿನ ನಿರೀಕ್ಷೆಯಲ್ಲಿ ಇರುವ ಕಾರಣ ಅವರು ಬೇರೆ ಪ್ರಾಜೆಕ್ಟ್ ಗಳಿಂದ ಹೊರಬಂದಿದ್ದು, ಟಾಕ್ಸಿಕ್ ಸಿನಿಮಾವನ್ನು ಮಾತ್ರ ನಿಲ್ಲಿಸಿಲ್ಲ. ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದುಬಾರಿ ಸಂಭಾವನೆ ಪಡೆದಿರುವ ಕಿಯಾರ ಅವರ ನಾಯಕಿ ಪಾತ್ರ ಹೇಗಿರುತ್ತದೆ ಎಂದು ತಿಳಿಯಲು ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಬೇಕಿದೆ. ಇನ್ನು ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ಟೀಸರ್, ಯಶ್ ಅವರ ಹುಟ್ಟುಹಬ್ಬದ ದಿವಸ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು, ಟೀಸರ್ ನೋಡಿದರೆ ಇದು ಎಷ್ಟು ದೊಡ್ಡ ಸಿನಿಮಾ ಎಂದು ಗೊತ್ತಾಗುತ್ತದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಅದ್ಭುತವಾದ ಕಥೆಯನ್ನೇ ಹೇಳಲಿದ್ದಾರೆ..

ಈ ಎಲ್ಲಾ ಕಾರಣಕ್ಕೆ ಟಾಕ್ಸಿಕ್ ಮೇಲೆ ಜನರಿಗೆ ಕೂಡ ನಿರೀಕ್ಷೆ ಹೆಚ್ಚಾಗಿದೆ. ಇನ್ನು ನಿನ್ನೆಯಷ್ಟೇ ಬಿಡುಗಡೆ ದಿನಾಂಕ ಅನೌನ್ಸ್ ಆದ ನಂತರ, ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಯಶ್ ಅವರ ಮತ್ತೊಂದು ಸಿನಿಮಾ ರಾಮಾಯಣ ಬಗ್ಗೆ ಕೂಡ ಅಪ್ಡೇಟ್ಸ್ ಸಿಗಬೇಕಿದೆ. ಈ ಸಿನಿಮಾದಲ್ಲಿ ಯಶ್ ಅವರು ರಾವಣ ಪಾತ್ರದಲ್ಲಿ ನಟಿಸುವುದರ ಜೊತೆಗೆ, ಸಿನಿಮಾ ನಿರ್ಮಾಪಕರಲ್ಲಿ ಒಬ್ಬರು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಇನ್ನೂ ಅಪ್ಡೇಟ್ಸ್ ಸಿಕ್ಕಿಲ್ಲ. ರಾಮಾಯಣ ಕೂಡ ಮುಂದಿನ ವರ್ಷ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.