ಕೆಜಿಎಫ್ ಚಾಪ್ಟರ್1 ಹಾಗೂ ಚಾಪ್ಟರ್2 ಭಾರತ ಚಿತ್ರರಂಗದಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿತ್ತು ಎನ್ನುವ ವಿಷಯ ಗೊತ್ತೇ ಇದೆ. ಈ ಸಿನಿಮಾ ಮೂಲಕ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಪ್ರಶಾಂತ್ ನೀಲ್ ಅವರು ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. ಇನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮ್ಮದೊಂದು ಬ್ರ್ಯಾಂಡ್ ಸ್ಥಾಪನೆ ಮಾಡಿತು. ಕೆಜಿಎಫ್3 ಬಗ್ಗೆ ಹೊಸ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುವ ಸಮಯದಲ್ಲಿ ಇದೀಗ ನಟಿ ಮಾಳವಿಕಾ ಅವಿನಾಶ್ ಅವರಿಂದ ಗುಡ್ ನ್ಯೂಸ್ ಸಿಕ್ಕಿದೆ.
ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತ ಚಿತ್ರರಂಗ ತಿರುಗಿ ನೋಡುವ ಹಾಗೆ ಮಾಡಿದ್ದು ಕೆಜಿಎಫ್ ಸೀರೀಸ್ ಸಿನಿಮಾ ಎಂದರೆ ತಪ್ಪಲ್ಲ. ಇದು ಪ್ರಶಾಂತ್ ನೀಲ್ ಅವರ ವಿಷನ್ ಹಾಗೆಯೇ ಯಶ್ ಅವರ ಕನಸು. ಈ ಎರಡು ಸಿನಿಮಾಗಳು ಇವರಿಬ್ಬರನ್ನು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಜನಪ್ರಿಯತೆ ಪಡೆಯುವ ಹಾಗೆ ಮಾಡಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್2 ಎರಡು ಕೂಡ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದ ಸಿನಿಮಾಗಳು. ಇನ್ನು ಕೆಜೆಎಫ್2 ಸಿನಿಮಾ ಎಂಡ್ ನಲ್ಲಿ ರಾಕಿ ಭಾಯ್ ಸಾಯುವ ಹಾಗೆ ತೋರಿಸುತ್ತಾರೆ..
– We Already Shooted for #KGF3 in a Big Set
– In Covid We Shoot for #KGF2 at that time We also shoot for KGF3, After KGF2 Release the Set was Dismantled
– I ask to Prashanth Neel, He Said that It was a Lead it to KGF3#AjithKumar #Toxic #KGF pic.twitter.com/Z6pZo5koeh
— ThalaFansMani83 (@ThalaFansMani83) November 5, 2024

ಆದರೆ ಕೊನೆಯಲ್ಲಿ ಕೆಜಿಎಫ್ ಚಾಪ್ಟರ್3 ಬಗ್ಗೆ ಸುಳಿವೊಂದನ್ನು ನೀಡಲಾಗುತ್ತದೆ. ಈ ಒಂದು ಸುಳಿವನ್ನು ನೋಡಿ ಅಭಿಮಾನಿಗಳು ಕೆಜಿಎಫ್3 ಬರೋದು ಯಾವಾಗ ಎಂದು ಕಾಯುತ್ತಿದ್ದು, ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ. ಇನ್ನು ಕೆಜಿಎಫ್3 ಬರುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಸುಳಿವು ನೀಡಿದ್ದಾರೆ, ಇನ್ನು ಯಶ್ ಅವರು ಸಹ ಕೆಜಿಎಫ್3 ಬಗ್ಗೆ ಮಾತನಾಡಿ, ರಾಮಾಯಣ ಹಾಗೂ ಟಾಕ್ಸಿಕ್ ಮುಗಿದ ಬಳಿಕ ಕೆಜಿಎಫ್3 ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ಪ್ರಶಾಂತ್ ನೀಲ್ ಅವರು ಪ್ರಸ್ತುತ ತೆಲುಗು ಸ್ಟಾರ್ ಗಳ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಕೆಜಿಎಫ್3 ಬರುವುದು ತಡವಾಗುತ್ತದೆ.
ಕೆಜಿಎಫ್3 ಬರೋದು ಖಚಿತ ಆದರೆ ಯಾವಾಗ ಬರುತ್ತದೆ ಎಂದು ಖಚಿತವಾಗಿ ಗೊತ್ತಿಲ್ಲ. ಇನ್ನು ಒಂದಷ್ಟು ವರ್ಷಗಳ ಕಾಲ ಸಮಯ ಹಿಡಿಯಬಹುದು ಎಂದು ಎಲ್ಲರೂ ಅಂದುಕೊಳ್ಳುವಾಗ ನಟಿ ಮಾಳವಿಕಾ ಅವಿನಾಶ್ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಇತ್ತೀಚೆಗೆ ಇವರು ಒಂದು ತಮಿಳು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು, ಕೆಜಿಎಫ್3 ಕೆಲ ಭಾಗದ ಚಿತ್ರೀಕರಣ ಈಗಾಗಲೇ ನಡೆದಿದೆ ಎಂದಿದ್ದಾರೆ. ಹೌದು, ಈಗಾಗಲೇ ಪ್ರಶಾಂತ್ ನೀಲ್ ಅವರು ಕೆಲ ದೃಶ್ಯಗಳನ್ನು ಸೆರೆಹಿಡಿದಿದ್ದಾರಂತೆ. ಸಂದರ್ಶನದ ನಿರೂಪಕಿ ನಿಮ್ಮನ್ನು ಕೆಜಿಎಫ್3 ನಲ್ಲಿ ನೋಡಬಹುದಾ ಎಂದು ಕೇಳುತ್ತಾರೆ.
ಆಗ ಮಾಳವಿಕಾ ಅವರು, ಕೆಜಿಎಫ್3 ಕೆಲ ದೃಶ್ಯಗಳ ಚಿತ್ರೀಕರಣ ಈಗಾಗಲೇ ನಡೆದಿದೆ ಎಂದಿದ್ದಾರೆ. ಕೆಜಿಎಫ್2 ಚಿತ್ರೀಕರಣ ನಡೆದಿದ್ದು ಕೋವಿಡ್ ವೇಳೆ, ಎಲ್ಲಾ ದೃಶ್ಯಗಳ ಚಿತ್ರೀಕರಣ ನಡೆದ ಬಳಿಕ ದೊಡ್ಡ ಸೆಟ್ ಡಿಸ್ ಮ್ಯಾಂಟಲ್ ಮಾಡಿದ ನಂತರ, ಇನ್ನೊಂದು ಸಾರಿ ಸೆಟ್ ಹಾಕಿ, ಒಂದು ದಿವಸ ಮಾಳವಿಕಾ ಅವಿನಾಶ್ ಅವರನ್ನು ಶೂಟಿಂಗ್ ಗೆ ಕರೆದು, ಮಾಳವಿಕಾ ಅವಿನಾಶ್ ಹಾಗೂ ಪ್ರಶಾಂತ್ ನೀಲ್ ಅವರ ಕೆಲವು ದೃಶಗಳನ್ನು ಚಿತ್ರೀಕರಿಸಿದ್ದಾರಂತೆ. ಈ ಸೂಪರ್ ಅಪ್ಡೇಟ್ ಕೇಳಿ, ಫ್ಯಾನ್ಸ್ ಗಳು ಫುಲ್ ಖುಷಿಯಾಗಿದ್ದಾರೆ. ಇನ್ನು ನಟ ಅಜಿತ್ ಅವರು ಕೆಜಿಎಫ್3 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.