ಸೌತ್ ಇಂಡಿಯಾದ ಖ್ಯಾತ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಇವರು ಇದುವರೆಗೂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ಇದೀಗ ಇವರು ಬಾಲಿವುಡ್ ಗೆ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಟ ವರುಣ್ ಧವನ್ ಅವರ ಜೊತೆಗೆ ಬೇಬಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಾಳೆ ತೆರೆಕಾಣಲಿದೆ. ಕ್ರಿಸ್ಮಸ್ ಹಬ್ಬದ ವಿಶೇಷವಾಗಿ ಸಿನಿಮಾ ತೆರೆ ಕಾಣುತ್ತಿದೆ. ಇದು ತಮಿಳು ಸಿನಿಮಾದ ರಿಮೇಕ್ ಆಗಿದೆ.

ತಮಿಳಿನಲ್ಲಿ ನಟ ವಿಜಯ್, ಸಮಂತಾ ಹಾಗೂ ನಟಿ ಮೀನಾ ಅವರ ಮಗಳು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದು. ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು, ಈ ಸಿನಿಮಾವನ್ನು ತಮಿಳಿನಲ್ಲಿ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದರು, ಬಾಲಿವುಡ್ ನಲ್ಲಿ ಈಗ ಅಟ್ಲಿ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರೊಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ. ಬಾಂಬೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಕೀರ್ತಿ ಸುರೇಶ್ ಅವರು ಸಹ ಪ್ರೊಮೋಷನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೀರ್ತಿ ಸುರೇಶ್ ಅವರ ಮದುವೆ ಆಯಿತು. ಮದುವೆಯಾದ ನಂತರ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೀರ್ತಿ ಸುರೇಶ್ ಅವರು ಒಂದು ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ವರುಣ್ ಧವನ್ ಅವರಿಗೆ ದಕ್ಷಿಣ ಭಾರತದ ಭಾಷೆಗಳಲ್ಲಿ ಐ ಲವ್ ಯೂ ಹೇಳೋದನ್ನ ಕಲಿಸಿಕೊಟ್ಟಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಐ ಲವ್ ಯು ಹೇಳೋದನ್ನ ಕಲಿಸಿಕೊಟ್ಟಿದ್ದು, ಬಳಿಕ ವರುಣ್ ಧವನ್ ಅವರು ಕನ್ನಡದಲ್ಲಿ ಹೇಳಿಕೊಡುವಂತೆ ಕೇಳಿದ್ದಾರೆ. ಅದಕ್ಕೆ ಕೀರ್ತಿ ಸುರೇಶ್ ಅವರು ನನಗೆ ಕನ್ನಡ ಗೊತ್ತಿಲ್ಲ, ಆದರೆ ಕನ್ನಡ ಕಲಿತು ಹೇಳಿಕೊಡುತ್ತೇನೆ ಎಂದು ಹೇಳಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ಕನ್ನಡ ಬರದೇ ಹೋದರು ಕಲಿತು ಹೇಳಿಕೊಡುತ್ತೇನೆ ಎಂದು ಹೇಳಿರುವುದು ನೆಟ್ಟಿಗರಿಗೆ ಇಷ್ಟವಾಗಿದೆ.

ಇನ್ನು ವರುಣ್ ಧವನ್ ಅವರು ಕನ್ನಡ ಭಾಷೆಯನ್ನು ಮರೆಯದೇ ಕನ್ನಡದಲ್ಲಿ ಹೇಳಿಕೊಡಿ ಎಂದು ಕೇಳಿರೋದು ಸಹ ನೆಟ್ಟಿಗರಿಗೆ ಇಷ್ಟವಾಗಿದೆ. ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಇಬ್ಬರು ಸಹ ಕನ್ನಡ ಮರೆಯದೇ ಇರೋದು ಜನರಿಗೆ ಬಹಳ ಇಷ್ಟವಾಗಿದೆ. ನಿಮ್ಮ ಕನ್ನಡಾಭಿಮಾನಕ್ಕೆ ಥ್ಯಾಂಕ್ಸ್ ಅಂತಿದ್ದಾರೆ ಫ್ಯಾನ್ಸ್. ಕೀರ್ತಿ ಸುರೇಶ್ ಅವರು ದಕ್ಷಿಣ ಭಾರತದ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಕನ್ನಡದಲ್ಲಿ ಇನ್ನು ಕೂಡ ನಟಿಸಿಲ್ಲ. ಆದರೆ ಕೀರ್ತಿ ಸುರೇಶ್ ಅಭಿನಯಿಸಿರುವ ಕೆಲವು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿರುವುದರಿಂದ ಇಲ್ಲಿನ ಜನರಿಗೆ ಕೀರ್ತಿ ಸುರೇಶ್ ಅವರ ಪರಿಚಯ ಚೆನ್ನಾಗಿದೆ.
ಹಾಗಾಗಿ ಕೀರ್ತಿ ಸುರೇಶ್ ಅವರು ಕನ್ನಡದಲ್ಲಿ ಒಂದು ಸಿನಿಮಾ ಮಾಡಲಿ ಎನ್ನುವುದು ಕನ್ನಡ ಅಭಿಮಾನಿಗಳ ಆಸೆ ಆಗಿದೆ. ಇನ್ನು ಕೀರ್ತಿ ಸುರೇಶ್ ಅವರು ಇತ್ತೀಚೆಗೆ ತಮ್ಮ 15 ವರ್ಷಗಳ ಗೆಳೆಯ ಆಂಟೋನಿ ತಟ್ಟಿಲ್ ಅವರ ಜೊತೆಗೆ ಮದುವೆಯಾದರು, ಈ ಜೋಡಿಯ ಮದುವೆಯು ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಅನುಸಾರ ನಡೆಯಿತು. ಕೀರ್ತಿ ಸುರೇಶ್ ಅವರ ಮದುವೆಗೆ ಚಿತ್ರರಂಗದ ಹಲವು ಗಣ್ಯರು ಬಂದು ಶುಭ ಕೋರಿದರು. ಇನ್ನು ಮದುವೆಯಾಗಿ ಕೆಲವೇ ದಿನಕ್ಕೆ ಕೀರ್ತಿ ಸುರೇಶ್ ಅವರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಅವರ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.



