ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ಕೀರ್ತಿ ಸುರೇಶ್ ಅವರು ಕೂಡ ಒಬ್ಬರು. ಮಹಾನಟಿ ಸಿನಿಮಾ ಇಂದ ಕೀರ್ತಿ ಸುರೇಶ್ ಅವರು ಬಹಳ ಫೇಮಸ್ ಆಗಿದ್ದು ಗೊತ್ತೇ ಇದೆ. ಈ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಸಹ ಪಡೆದುಕೊಂಡರು ಕೀರ್ತಿ. ಸಿನಿಮಾದಲ್ಲಿ ಬ್ಯುಸಿ ಇದ್ದು, ಕೆರಿಯರ್ ಪೀಕ್ ನಲ್ಲಿ ಇರುವಾಗಲೇ ಕೀರ್ತಿ ಸುರೇಶ್ ಅವರು ಈಗ ಮದುವೆ ಅಗೋಕೆ ತಯಾರಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಡನೆ ಕೀರ್ತಿ ಮದುವೆ ಇದೇ ತಿಂಗಳು ಗೋವಾದಲ್ಲಿ ನಡೆಯಲಿದ್ದು, ಈ ವೇಳೆ ಮತ್ತೊಬ್ಬ ಸ್ಟಾರ್ ಹೀರೋಗೆ ಕೀರ್ತಿ ಸುರೇಶ್ ಅವರ ಮೇಲೆ ಲವ್ ಆಗಿದ್ದ ವಿಚಾರ ಇದೀಗ ವೈರಲ್ ಆಗುತ್ತಿದೆ.

ಹೌದು, ಕೀರ್ತಿ ಸುರೇಶ್ ಅವರು ನೋಡಲು ಬಹಳ ಸುಂದರವಾಗಿರುವುದರ ಜೊತೆಗೆ ಒಳ್ಳೆಯ ನಟಿ ಹಾಗೂ ಒಳ್ಳೆಯ ಹುಡುಗಿ ಕೂಡ ಹೌದು. ಯಾರಿಗೆ ಆದರೂ ಕೀರ್ತಿ ಸುರೇಶ್ ಅವರನ್ನು ಕಂಡರೆ ಇಷ್ಟ ಆಗದೇ ಇರದು. ಕೆಲ ದಿನಗಳ ಹಿಂದೆ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಅವರ ಜೊತೆಗೆ ಕೀರ್ತಿ ಸುರೇಶ್ ಮದುವೆ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಕೀರ್ತಿ ಸುರೇಶ್ ಅವರು ಆ ಗಾಸಿಪ್ ತೆರೆ ಎಳೆದಿದ್ದರು. ತಾವು ಹಾಗೂ ಅನಿರುದ್ಧ್ ಅವರು ಒಳ್ಳೆಯ ಫ್ರೆಂಡ್ಸ್ ಅಷ್ಟೇ, ಇನ್ಯಾವುದೇ ಥರದ ರಿಲೇಶನ್ಷಿಪ್ ಇಲ್ಲ, ಇದೆಲ್ಲವು ಸುಳ್ಳು ಸುದ್ದಿಗಳು ಮಾತ್ರ ಎಂದು ಬಹಿರಂಗವಾಗಿಯೇ ಕೀರ್ತಿ ಹೇಳಿದ್ದರು. ಹಾಗಾಗಿ ಈ ಗಾಸಿಪ್ ಗೆ ತೆರೆ ಬಿದ್ದಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆದರೆ ಈಗ ಮತ್ತೊಬ್ಬ ನಟ ಇವರನ್ನು ಪ್ರೀತಿಸುತ್ತಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಆ ನಟ ಮತ್ಯಾರು ಅಲ್ಲ, ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು. ಈ ನಟನಿಗೆ ಕೀರ್ತಿ ಸುರೇಶ್ ಅವರನ್ನು ಕಂಡರೆ ತುಂಬಾ ಪ್ರೀತಿ ಇತ್ತಂತೆ, ಅವರನ್ನು ಮದುವೆ ಆಗಬೇಕು ಎಂದು ಇಷ್ಟಪಟ್ಟು, ಖುದ್ದಾಗಿ ಕೀರ್ತಿ ಸುರೇಶ್ ಅವರ ಮನೆಗೆ ಹೋಗಿ ಅವರ ತಂದೆ ತಾಯಿಯನ್ನು ಕೂಡ ಕೇಳಿದ್ದರಂತೆ. ಆದರೆ ಕೀರ್ತಿ ಸುರೇಶ್ ಅವರು ಈ ಮದುವೆಗೆ ಒಪ್ಪಲಿಲ್ಲ. ಈ ಕಾರಣಕ್ಕೆ ವಿಶಾಲ್ ಹಾಗೂ ಕೀರ್ತಿ ಸುರೇಶ್ ಅವರ ಮದುವೆ ನಡೆಯಲಿಲ್ಲ. ಹಾಗೆಯೇ ವಿಶಾಲ್ ಅವರು ಇನ್ನು ಕೂಡ ಮದುವೆ ಆಗಿಲ್ಲ. ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ.

ಇನ್ನು ಕೀರ್ತಿ ಸುರೇಶ್ ಅವರ ಮದುವೆ ಅವರ ಬಹುಕಾಲದ ಗೆಳೆಯ, ಆಂಟೋನಿ ತಟ್ಟಿಲ್ ಅವರ ಜೊತೆಗೆ ಇದೇ ತಿಂಗಳು 12ರಂದು ನಡೆಯಲಿದೆ. ಗೋವಾದಲ್ಲಿ ಈ ಜೋಡಿ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಲಿದ್ದು, ಇಬ್ಬರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಅಂದಹಾಗೆ ಕೀರ್ತಿ ಮತ್ತು ಆಂಟೋನಿ ಅವರದ್ದು 15 ವರ್ಷಗಳ ಲವ್ ಸ್ಟೋರಿ. ಕೀರ್ತಿ ಸುರೇಶ್ ಅವರ ಮುದ್ದಿನ ಶ್ವಾನ NyKe ಹೆಸರನ್ನು ಇಬ್ಬರ ಹೆಸರಿನಿಂದ ಇಡಲಾಗಿದೆ. ಮದುವೆ ಆಗುವ ಹುಡುಗನನ್ನು ಅಷ್ಟು ಪ್ರೀತಿ ಮಾಡುತ್ತಾರೆ ಕೀರ್ತಿ ಸುರೇಶ್. ಇನ್ನು ಆಂಟೋನಿ ಅವರು ದುಬೈ ನಲ್ಲಿ ದೊಡ್ಡ ಬ್ಯುಸಿನೆಸ್ ಮ್ಯಾನ್.
ಹಾಗೆಯೇ ಕೇರಳದ ಕೊಚ್ಚಿಯಲ್ಲಿ ಇವರ ಅನೇಕ ರೆಸಾರ್ಟ್ ಗಳು ಇದೆ ಎಂದು ಹೇಳಲಾಗುತ್ತದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗನ ಕೈ ಹಿಡಿಯಲಿದ್ದಾರೆ ಕೀರ್ತಿ. ಕೀರ್ತಿ ಸುರೇಶ್ ಅವರು ಕೆರಿಯರ್ ನಲ್ಲಿ ಸಹ ಅಷ್ಟೇ ಉತ್ತುಂಗದಲ್ಲಿ ಇದ್ದಾರೆ, ಬಾಲಿವುಡ್ ಗೆ ಸಹ ಇವರು ಎಂಟ್ರಿ ಕೊಡುತ್ತಿದ್ದು, ಕೀರ್ತಿ ಸುರೇಶ್ ಹಾಗೂ ನಟ ವರುಣ್ ಧವನ್ ಅಭಿನಯದ ಬೇಬಿ ಜಾನ್ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. ಜೊತೆಗೆ ಇನ್ನೇನು ಒಂದು ವಾರದಲ್ಲಿ ಕೀರ್ತಿ ಸುರೇಶ್ ಅವರ ಮದುವೆ ಕೂಡ ಆಗಲಿದೆ. ಒಟ್ಟಿನಲ್ಲಿ ಕೆರಿಯರ್ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಕೂಡ ಕೀರ್ತಿ ಸುರೇಶ್ ಅವರು ಮುಂದಿನ ಹಂತಕ್ಕೆ ತಲುಪುತ್ತಿದ್ದಾರೆ.