ಕಾಂತಾರ ಸಿನಿಮಾದಲ್ಲಿ ಶಿವನ ಪ್ರೇಯಸಿಯಾಗಿ, ಫಾರೆಸ್ಟ್ ಗಾರ್ಡ್ ಆಗಿ ಮಿಂಚಿದ ಲೀಲಾ ಪಾತ್ರವು ಇದೀಗ ಎಲ್ಲರಿಗೂ ಫೇವರಿಟ್ ಆಗಿದೆ. ಲೀಲಾ ಪಾತ್ರವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಂತಾರಾ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರಕ್ಕೆ ಸಪ್ತಮಿ ಗೌಡ ಅದ್ಭುತವಾಗಿ ಜೀವ ತುಂಬಿದ್ದಾರೆ. ಬೆಂಗಳೂರಿನ ಹುಡುಗಿಯಾದರೂ ಸಪ್ತಮಿ ಸೂಪರ್ ಆಗಿ ಗ್ರಾಮೀಣ ಯುವತಿ ಪಾತ್ರವನ್ನು ಮಾಡಿದ್ದಾರೆ.
ಕಾಂತಾರ ಸಿನಿಮಾಗೆ ರಿಷಬ್ ಹೀರೋಯಿನ್ ಹುಡುಕಿದ್ದು ಹೇಗೆ? ಇದರ ಬಗ್ಗೆ ನಟಿ ಸಪ್ತಮಿ ಗೌಡ ಅವರೇ ಉತ್ತರಿಸಿ ತಾವು ಹೇಗೆ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ರಿಷಬ್ ಅವರು ಸಿನಿಮಾಗೆ ಹೀರೋಯಿನ್ ಅವರನ್ನು ಹುಡುಕುವಾಗ ಎಲ್ಲಾ ಕಡೆಯಲ್ಲೂ ಹುಡುಕುತ್ತಾರಂತೆ ರಿಷಬ್. ಆ ರೀತಿ ಹುಡುಕುವಾಗ ಇನ್ಸ್ಟಾಗ್ರಾಮ್ನಲ್ಲಿ ಸಪ್ತಮಿ ಫೋಟೊ ಕಣ್ಣಿಗೆ ಬಿದ್ದಿದ್ದು. ಸಪ್ತಮಿ ಗೌಡ ಅವರ ಒಂದು ಫೋಟೋ ನೋಡಿದ್ದರು ರಿಷಬ್ ಶೆಟ್ಟಿ. ಸಪ್ತಮಿ ಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ಪಿಂಕ್ ಮತ್ತು ನೀಲಿ ಬಣ್ಣದ ಸೀರೆ ಉಟ್ಟ ಫೋಟೋ ನೋಡಿ ಆಯ್ಕೆ ಮಾಡಿದ್ದರು.

ರಿಷಬ್ ಶೆಟ್ಟಿ ಅವರು ನನಗೆ ಕರೆ ಮಾಡಿದಾಗ ನಾನು ಹೊರಗೆಲ್ಲೋ ಇದ್ದೆ. ಕೂಲಾಗಿ ನಾನು ರಿಷಬ್ ಶೆಟ್ಟಿಅಂದರು. ಅವರ ನಿರ್ದೇಶನದ ಸಿನಿಮಾಗಳನ್ನು ಇಷ್ಟಪಟ್ಟು ನೋಡಿದವ್ಳು ನಾನು. ಅವರೇ ಕಾಲ್ ಮಾಡಿ ಆಫೀಸಿಗೆ ಕರೆದಾಗ ಬಹಳ ಕುತೂಹಲದಿಂದಿದ್ದೆ. ಶುರುವಿಗೆ ಕತೆ, ನನ್ನ ಪಾತ್ರದ ಬಗ್ಗೆ ಹೇಳಿದಾಗ, ಅರೆ, ಇದೇ ಪಾತ್ರಕ್ಕಲ್ವಾ ನಾನು ಹುಡುಕ್ತಾ ಇದ್ದಿದ್ದು ಅಂತನಿಸಿತು. ಜೊತೆಗೆ ಹೊಂಬಾಳೆ ಫಿಲಂಸ್ನಂಥಾ ಬ್ಯಾನರ್ನ ಸಿನಿಮಾ … ಎಕ್ಸೈಟ್ಮೆಂಟ್ ಹೆಚ್ಚಾಗ್ತಾನೇ ಹೋಯ್ತು ಎಂದಿದ್ದಾರೆ ಸಪ್ತಮಿ ಗೌಡ. ಫೋಟೊ ನೋಡಿದ ಮೇಲೆ ಲುಕ್ ಟೆಸ್ಟ್ ಮಾಡಿ, ಸ್ಕ್ರೀನ್ ಟೆಸ್ಟ್ ಮಾಡಿದ್ದರು. ನಂತರ ಬೆಂಗಳೂರು ಹಾಗೂ ಕುಂದಾಪುರದಲ್ಲಿ ವರ್ಕ್ ಶಾಪ್ ಮಾಡಿದ್ದರಂತೆ ಸಪ್ತಮಿ ಅವರಿಗೆ.
ಸಿನಿಮಾದಲ್ಲಿ ಲೀಲಾ ಆಗಿ ನಟಿಸಿದ ಸಪ್ತಮಿ ಗೌಡ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಪೆಷಲ್ ಪೋಸ್ಟ್ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಇವತ್ತು ಕಾಂತರ ಸಿನಿಮಾ ಈ ಮಟ್ಟದಲ್ಲಿ ವಿಶ್ವದಾದ್ಯಂತ ಯಶಸ್ವಿಯಾಗಿರುವುದಕ್ಕೆ ಕಾರಣ ನೀವೇ. ಕಾಂತರ ಸಿನಿಮಾವನ್ನು ಮೆಚ್ಚಿ, ಅಪ್ಪಿಕೊಂಡು ಗೆಲ್ಲಿಸುತ್ತಿರುವುದಕ್ಕೆ ಋಣಿಯಾಗಿದ್ದೇನೆ. ನನ್ನ ಪಾತ್ರ ‘ಲೀಲಾ’ಳಿಗೆ ತೋರಿಸುತ್ತಿರುವ ನಿಮ್ಮ ಪ್ರೀತಿಯಿಂದ ಹೃದಯ ತುಂಬಿದೆ. ಈ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಸಪ್ತಮಿ ಗೌಡರು ಬೆಂಗಳೂರಿನವರು, ಕನ್ನಡ ಚಿತ್ರರಂಗದಲ್ಲಿ ಯುವ ಹಾಗೂ ಪ್ರತಿಭಾವಂತ ನಟಿ ಎಂದರೆ ತಪ್ಪಾಗಲಾರದು. ಇನ್ನು, 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ ಯಾಗಿದ್ದು, ಸದ್ಯಕ್ಕೆ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.