ಕೋವಿಡ್ 19 ಬಳಿಕ ಭಾರತೀಯ ಚಿತ್ರಗಳಿಗೆ ಬಹುದೊಡ್ಡ ಬೇಡಿಕೆ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ನಮ್ಮ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿದೇಶಿ ನಟ, ನಟಿ, ತಂತ್ರಜ್ಞರು ಕೂಡ ಭಾರತದ ಸಿನಿಮಾಗಳಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಹಾಗೂ ಶಿವರಾಜಕುಮಾರ್ ಅಭಿನಯದ, ಪ್ರೇಮ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ವಿದೇಶಿ ನಟಿ ಏಮಿ ಜಾಕ್ಸನ್ ನಟಿಸಿ ಸಾಕಷ್ಟು ಸದ್ದು ಮಾಡಿದ್ದರು. ಹಾಗೇ ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸಾಕಷ್ಟು ಹಾಲಿವುಡ್ ತಂತ್ರಜ್ಞರು ಕೆಲಸಮಾಡಿದ್ದು, ಆದ್ರೆ ಇದೀಗ ವಿದೇಶಿ ನಿರ್ದೇಶಕನೊಬ್ಬ ಕನ್ನಡ ಚಿತ್ರವನ್ನ ನಿರ್ದೇಶಿಸಲು ಮುಂದಾಗಿದ್ದಾರೆ. ಮತೀನ್ ಹುಸೇನ್ ಅಭಿನಯಿಸಿರುವ ರೋಡ್ ಕಿಂಗ್ ಎನ್ನುವ ಕನ್ನಡ ಚಿತ್ರಕ್ಕೆ ರ್ಯಾಡಿ ಕೆಂಟ್ ಹೆಸರಿನ ಓರ್ವ ಹಾಲಿವುಡ್ ನಿರ್ದೇಶಕ ಕನ್ನಡದ ರೋಡ್ ಕಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಇನ್ನೂ ಈ ಚಿತ್ರದ ನಾಯಕ ಮತೀನ್ ಹುಸೇನ್ ಈ ಚಿತ್ರಕ್ಕೆ ಬಂಡವಾಳವನ್ನ ಹೂಡಿದ್ದು, ನಟ ಹಾಗೂ ನಿರ್ದೇಶಕರಾಗಿ ಕಾಣಿಸಿಕೊಳ್ಳಲಿದ್ದಾರೆ. ನಟ ಹಾಗೂ ನಿರ್ದೇಶಕ ಮತೀನ್ ಹುಟ್ಟಿದ್ದು ಬೆಂಗಳೂರು ಆದರೆ ಬೆಳೆದಿದ್ದು ಅಮೇರಿಕಾದಲ್ಲಿ, ಕೋಲಾರದ ನೈಜ್ಯ ಘಟನೆ ಆಧಾರವಾಗಿಟ್ಟುಕೊಂಡು ಒಂದು ಅಲ್ಪ ಮೊತ್ತದ ಚಿತ್ರ ಮಾಡಲು ಯೋಚಿಸಿದ್ದರಂತೆ, ಆದರೆ ಯಾವುದೇ ಸೂಕ್ತ ನಿರ್ದೇಶಕರು ಕಾಣಸಿಗದ ಪರಿಣಾಮ ರಾಂಡಿ ಕೆಂಟ್ ಮೂಲಕ ಚಿತ್ರ ಪ್ರಾರಂಭ ಮಾಡೋಣ ಎಂದು ಪ್ರಾರಂಭಿಸಿದ ಚಿತ್ರವೇ ಈ ರೋಡ್ ಕಿಂಗ್.
ಇನ್ನೂ ವಿಶೇಷ ಏನೆಂದರೆ ಸ್ಕೈಪ್ ಮೂಲಕವೇ ದೂರದ ಅಮೇರಿಕಾದಲ್ಲಿ ಕೂತು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣಕ್ಕೆ ಪೂರ್ವ ತಯಾರಿ ಮಾಡಿಕೊಂಡು ರಾಂಡಿ ಕೆಂಟ್ ಗೆ ವೀಸಾ ದೊರೆಯಲಿಲ್ಲ, ಇದೆ ಕಾರಣಕ್ಕೆ ಸ್ಕೈಪ್ ಮೂಲಕವೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮತೀನ್ ಈ ಹಿಂದೆ ಬಿಂದಾಸ್ ದಾದಾಗಿರಿ ಎನ್ನುವ ರಿಯಾಲಿಟಿ ಶೋ ಒಂದರ ವಿನ್ನರ್ ಆಗಿದ್ದು, ಮೊದಲ ಬಾರಿ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ.ಮತೀನ್ ಗೆ ನಾಯಕಿಯಾಗಿ ರನ್ ಆಂಟೋನಿ ಖ್ಯಾತಿಯ ರುಕ್ಸರ್ ನಟಿಸಿದ್ದು,ನಯನಾ ಶೆಟ್ಟಿ, ಲೀಲಾ ಮೋಹನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಆರಿಫ್ ಲಲಾನಿ ಛಾಯಾಗ್ರಹಣ ಈ ಚಿತ್ರಕ್ಕಿದ್ದು,ಹಾಲಿವುಡ್ ಪ್ರಸಿದ್ಧ ಸೌಂಡ್ ಇಂಜಿನಿಯರ್ ಸ್ಕಾಟ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ನಡೆದ ಹಲವು ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದಲ್ಲದೆ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ರೋಡ್ ಕಿಂಗ್ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಈ ಚಿತ್ರದ ಪ್ರಮುಖ ಹೈಲೆಟ್ಸ್ ಆಗಿದೆ. ಲವ್ ಬ್ರೇಕ್ ಅಪ್ ಮೂಲಕ ಎಕ್ಸ್ ಸಿಂಡ್ರೋಮ್ ಗೆ ತುತ್ತಾಗುವ ಪ್ರೇಮಿಗಳ ಸುತ್ತ ನೆಡೆಯುವ ಕಥೆಯಿದಾಗಿದ್ದು, ರೊಮ್ಯಾಂಟಿಕ್ ಹಾಗೂ ಥ್ರಿಲರ್ ಅಂಶವನ್ನ ಈ ಚಿತ್ರ ಕೂಡ ಒಳಗೊಂಡಿದೆ.
ಈಗಾಗಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಮೋಘ ಪ್ರದರ್ಶನ ಕಂಡ ರೋಡ್ ಕಿಂಗ್ ಚಿತ್ರ ಇದೆ ಬರುವ ಜೂನ್ 23 ರಂದು ಕನ್ನಡ ಚಿತ್ರಮಂದಿರಗಳಲ್ಲಿ ತನ್ನ ಓಟವನ್ನ ಪ್ರಾರಂಭಿಸಲಿದೆ. ಒಟ್ಟಾರೆ ಒಂದೊಳ್ಳೆ ವಿಭಿನ್ನ ಕಥೆ ಹಾಗೂ ನಿರ್ದೇಶನದಿಂದ ಕೂಡಿದ ಹೊಸ ಪ್ರಯೋಗವೊಂದನ್ನ ಮಾಡಲು ರೋಡ್ ಕಿಂಗ್ ಚಿತ್ರತಂಡ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಇಂತಹ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯಲಿ ಎನ್ನುವುದೇ ನಮ್ಮ ಆಶಯ.