ಕನ್ನಡದ ಹೆಮ್ಮೆಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚಿತ್ರ ಎಂದರೆ ಅದು “ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ” ನಟನೆಯ “ಕಾಂತರ“.ಈ ಸಿನಿಮಾ ಕರಾವಳಿ ಮೂಲದ ದೈವ ಆರಾಧನೆಯ ಕಥೆಯನ್ನು ದೊಡ್ಡ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಊರಿನ ದೈವ ಆರಾಧನೆಯ ಕಥೆಯನ್ನು ತೆರೆಯ ಮೇಲೆ ಯಾವ ಲೋಪವು ಬಾರದಂತೆ ಚಿತ್ರಿಸಲಾಗಿದೆ.ಇವರೆಲ್ಲರ ಪರಿಶ್ರಮಕ್ಕೆ ಇಂದು ಬಹಳ ಒಳ್ಳೆಯ ಮಾತುಗಳೇ ಇವರಿಗೆ ದೊಡ್ಡ ದೊಡ್ಡ ಅವಾರ್ಡ್ ಸಿಕ್ಕಂತಾಗಿದೆ ಎಂದರೆ ತಪ್ಪಾಗಲಾರದು. ಎಲ್ಲರು ತಮ್ಮ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲು ಇಚ್ಛಿಸಿದರೆ ಆದರೆ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡಲು ಪರ ಭಾಷೆಯ ಜನರೇ ಇಚ್ಛಿಸುತ್ತಿರುವುದು ಕನ್ನಡಿಗರಿಗೆ ಬಹಳ ಹೆಮ್ಮೆ ತಂದಿದೆ.

ಈ ಸಿನಿಮಾ ಕೇವಲ ಕನ್ನಡದಲ್ಲಿ ಕಳೆದ ತಿಂಗಳು ಸೆಪ್ಟೆಂಬರ್ 30 ರಂದು ಬಿಡುಗಡೆ ಪಡೆದಿತ್ತು.ಇಷ್ಟು ಒಳ್ಳೆಯ ಕಥೆಯನ್ನು ಯಾಕೆ ಪ್ಯಾನ್ ಇಂಡಿಯಾ ಮಾಡದೇ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಿದ್ದೀರಾ ಎಂದಾಗ ಈ ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಮ್ಮ ಸೊಗಡಿನ ಸಂಸ್ಕೃತಿಯ ಸಿನಿಮಾ ಮೊದಲು ನಮ್ಮ ಭಾಷೆಯಲ್ಲಿ ನೋಡಲಿ. ಯಾಕೆ ಪ್ರತಿ ಬಾರಿ ನಮ್ಮ ಸಿನಿಮಾವನ್ನು ಅವರು ನೋಡಲು ಅವರ ಭಾಷೆಗೆ ಡಬ್ ಮಾಡಿಕೊಡಬೇಕು.ನಾವು ಅವರ ಸಿನಿಮಾವನ್ನು ಅವರ ಭಾಷೆಯಲ್ಲೇ ನೋಡುವ ಹಾಗೆ ಅವರು ಕೊಡ ಮೊದಲು ನಮ್ಮ ಭಾಷೆಯಲ್ಲಿ ನೋಡಲಿ ಎಂದು ತಿಳಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು.
ಬಿಡುಗಡೆ ಪಡೆದ ಮೂರು ವಾರಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ 100ಕೋಟಿ ಕಲೆಹಾಕಿದೆ.ಇನ್ನು ಕಳೆದ ವಾರ ಈ ಸಿನಿಮಾ ತೆಲಗು ತಮಿಳು ಮಲಯಾಳಂ ಅಲ್ಲದೆ ಹಿಂದಿ ಭಾಷೆಯಲ್ಲೂ ಬಿಡುಗಡೆ ಪಡೆದಿದೆ.ಈ ಎಲ್ಲಾ ಭಾಷೆಗಿಂತ ಹಿಂದಿ ಅವತರಿಣಿಕೆ ಕಾಂತರ ಗೆ ಹೆಚ್ಚು ಚಿತ್ರ ಮಂದಿರ ಸಿಕ್ಕಿರುವುದು ಮತ್ತಷ್ಟು ಖುಷಿ ತಂದಿದೆ.ಹೀಗೆ ಎಲ್ಲಾ ಭಾಷೆಗಳಲ್ಲೂ ಈ ಸಿನಿಮಾ ಎರಡಂಕಿ ಮೊತ್ತವನ್ನು ಕಲೆಹಾಕುತಿರುವುದರಿಂದ ಈ ಸಿನಿಮಾ ವೇಗವನ್ನು ಇನ್ನು ಒಂದು ತಿಂಗಳು ತಗ್ಗಿಸಲು ಸಾಧ್ಯವಿಲ್ಲ ಎಂದು ಪ್ರೇಕ್ಷಕರು ತಿಳ್ಸಿದ್ದಾರೆ.
ಈ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೆ ಸೆಲಬ್ರೆಟಿಗಳು ಕೂಡ ಮೆಚ್ಚುಗೆ ಮಾತುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ದಕ್ಷಿಣ ಭಾರತದ ತಾರೆಗಳಾದ “ಕಿಚ್ಚ ಸುದೀಪ್, ಧನುಷ್, ಕಾರ್ತಿ, ಅನುಷ್ಕಾ ಶೆಟ್ಟಿ, ರಕ್ಷಿತ್ ಶೆಟ್ಟಿ, ರಮ್ಯಾ” ಸೇರಿದಂತೆ ಇನ್ನು ಹಲವಾರು ಕಲಾವಿದರು ಕಾಂತಾರ ನೋಡಿ ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದ ಹಲವಾರು ತಾರೆಯರು ಕಾಂತಾರ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.
ಅದರಲ್ಲಿಯೂ ಕರ್ನಾಟಕದ ಮೂಲದ ನಟಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಬೇರೆ ಚಿತ್ರರಂಗಗಳಲ್ಲಿ ನೆಲೆಸಿದ್ದರೂ ಸಹ ಕಾಂತಾರ ಚಿತ್ರವನ್ನು ವೀಕ್ಷಿಸಿ ಇಲ್ಲಿನ ಸಂಸ್ಕೃತಿ ಆಧಾರಿತ ಚಿತ್ರವನ್ನು ಬೆಂಬಲಿಸಿರುವುದು ಕನ್ನಡಿಗರಿಗೆ ಖುಷಿ ತಂದಿದೆ. ಆದರೆ ಈ ಮಣ್ಣಿನ ಮೂರು ನಟಿಯರು ಈ ಸಿನಿಮಾ ಬಗ್ಗೆ ಯಾವ ವಿಮರ್ಶೆಯ ಮಾತುಗಳನ್ನು ಹೇಳದೆ ಇರುವುದು ಎಲ್ಲರ ಕೋಪಕ್ಕೆ ಕಾರಣವಾಗಿದೆ. ಆ ನಟಿಯರು ಯಾರು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಕನ್ನಡ ಇಂಡಸ್ಟ್ರಿಯಲ್ಲಿ ಸಾನ್ವಿ ಆಗಿ ಗುರುತಿಸಿಕೊಂಡು ನ್ಯಾಶಿನಲ್ ಕ್ರಶ್ ಆಗಿ ಇಂದು ನಂಬರ್ ಒನ್ ನಟಿಯಾಗಿರುವ “ರಶ್ಮಿಕಾ” ಹಾಗೂ ಮಂಗಳೂರು ಮೂಲದ ‘ಪೂಜಾ ಹೆಗ್ಡೆ ಹಾಗೂ ಕೃತಿ ಶೆಟ್ಟಿ’ ಇನ್ನು ಈ ಸಿನಿಮಾ ಬಗ್ಗೆ ಧ್ವನಿ ಎತ್ತಿಲ್ಲ.ಈ ವಿಚಾರ ತಿಳಿದ ನೆಟ್ಟಿಗರು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಸಂಸ್ಕೃತಿ ಹಾಗೂ ತಮ್ಮ ಮಣ್ಣಿನ ಸಿನಿಮಾವನ್ನು ನೋಡಿ ತಮ್ಮ ಅಭಿಮಾನಿಗಳಿಗೂ ನೋಡುವಂತೆ ಮಾಡಲು ಇನ್ನು ಇವರಿಗೆ ಬಿಡುವು ಸಿಕ್ಕಿಲ್ಲ.ಈಗಾಗಲೇ ಈ ಸಿನಿಮಾ ಬಗ್ಗೆ ಮಾತನಾಡಿರುವ ಸೆಲಬ್ರೆಟಿ ಗಳು ಕಂಡಿರುವ ಯಶಸ್ಸು ಇನ್ನು ಈ ನಟಿಯರು ಕಂಡಿಲ್ಲ ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.ಇಷ್ಟೆಲ್ಲ ಮಾತುಗಳು ಕೇಳಿದ ಬಳಿಕ ಈ ಮೂವರು ನಟಿಯರು ಎಚ್ಚೆತ್ತುಕೊಳ್ಳುತ್ತಾರ ನಾವೆಲ್ಲರೂ ಕಾದುನೋಡಬೇಕಿದೆ.